ಪ್ರಸಿದ್ದ ಕಾದಂಬರಿಕಾರರಾದ ಎಸ್. ಎಲ್. ಭೈರಪ್ಪನವರು ತಮ್ಮ ಹದಿನೆಂಟನೆಯ ವಯಸ್ಸಿನಲ್ಲಿ ’ಭೀಮಕಾಯ’ ಕಾದಂಬರಿಯನ್ನು ಬರೆದಿದ್ದಾರೆ. ಹೆಸರೇ ಹೇಳುವಂತೆ ಕಾದಂಬರಿಯಿರುವುದು ಒಬ್ಬ ಕುಸ್ತಿಪಟುವಿನ ಜೀವನದ ಬಗ್ಗೆ. ಕುಸ್ತಿಪಟುವಿನ ಜೀವನಕ್ರಮ, ಅವರ ಅಭ್ಯಾಸಗಳು, ಸಾಧನೆಗಳು, ಅದಕ್ಕಾಗಿ ಅವರು ಪಡುವ ಶ್ರಮ, ಅವರಿಗಿರಬೇಕಾದ ಏಕಾಗ್ರತೆ, ಅವರ ಸಹಪಟುಗಳು ಅವರನ್ನು ನೋಡುವ ರೀತಿ, ಕೊಡುವ ಪ್ರೋತ್ಸಾಹ, ಕುಸ್ತಿಪಟುವಿನ ಆಹಾರಕ್ರಮ, ಮನೋದಾರ್ಢ್ಯತೆ, ಗುರುವಿನ ಬಗೆಗಿನ ಅಗಾಧವಾದ ಭಕ್ತಿ, ಕಿರಿಯಪಟುಗಳ ಬಗೆಗಿನ ಪ್ರೀತಿ, ಪೈಲ್ವಾನನ ಗರಡುಮನೆಯ ಜೀವನ, ವೈಯಕ್ತಿಕ ಜೀವನಕ್ರಮ, ಎದುರಿಸಬೇಕಾದ ಸವಾಲುಗಳು, ಸೋಲುಗಳು, ಗೆಲುವುಗಳು ಇವೆಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ.
ಗರಡಿ ಮನೆ, ಕುಸ್ತಿ, ಜಟ್ಟಿ, ಅಖಾಡ ಎನ್ನುವ ದೈಹಿಕ ಮತ್ತು ಅಂಗ ಸಾಧನೆಗೆ ಸಂಬಂಧಿಸಿದ ವಾತಾವರಣದಲ್ಲಿ ನವಿರಾದ ಮತ್ತು ಅಷ್ಟೇ ಅಸಹಜವಾದ ಪ್ರೇಮಕಥೆಯೊಂದನ್ನು ಹೆಣೆಯಲಾಗಿದೆ.
ಜನಪ್ರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು ಮೀಮಾಂಸಕರೂ ಹೌದು. ಹಾಸನ ಜಿಲ್ಲೆ ಚೆನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ 1931ರ ಆಗಸ್ಟ್ 20ರಂದು ಜನಿಸಿದರು. ತಂದೆ ಲಿಂಗಣ್ಣಯ್ಯ- ತಾಯಿ ಗೌರಮ್ಮ. ತಮ್ಮ ಹುಟ್ಟೂರಿನ ಸುತ್ತಮುತ್ತಲ ಶಾಲೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಮೈಸೂರಿಗೆ ಬಂದು ಶಾರದಾವಿಲಾಸ ಪ್ರೌಢಶಾಲೆಯಲ್ಲಿ ಓದಿ, ಮಹಾರಾಜ ಕಾಲೇಜಿನಲ್ಲಿ ಬಿ.ಎ. ಮಾಡಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಗಳಿಸಿದರು. ಅನಂತರ ಹುಬ್ಬಳ್ಳಿಯ ಕಾಡುಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕ (1958-60), ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ (1960-66), ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಶಿಕ್ಷಣ ಸಂಸ್ಥೆಯಲ್ಲಿ ಉಪಪ್ರಾಧ್ಯಾಪಕ (1967-1971) ...
READ MORE