ಲೇಖಕ ಶಂಕರ ಬೈಚಬಾಳ ಅವರ ಕಾದಂಬರಿ-’ಭಾರತ ಸಿಂಹಾಸನ ರಶ್ಮಿ’. ವಚನ ಸಾಹಿತ್ಯ, ವೈಚಾರಿಕ ಚಿಂತನೆ, ಗ್ರಾಮೀಣ ಪರಿಸರದ ಕಥೆ, ಒಗಟು, ಕುಣಿತ ಸೊಗಡುಗಳ ಅಧ್ಯಯನಗಳನ್ನು ಮೈಗೂಡಿಸಿಕೊಂಡು, ಬರಹ ಭಾಷಣಗಳ ಮೂಲಕ ಜನಸಮೂಹವನ್ನು ಅರಳಿಸಿ, ತನ್ನೊಡಲೊಳಗೆ ಗರಿಗೆದರಿ ನಿಂತ ಅಪ್ಪಟ ದೇಶಿ ಪ್ರತಿಭೆ ಶಂಕರ ಬೈಚಬಾಳ.
ನಮ್ಮೂರ ಶಿವಾನಂದ ಮುತ್ತ್ಯೋರ್ ಪಟಾಧಿಕಾರ್‍ದ ಮೆರುಣ್ಗಿ ಮುಂದ, 'ಓಂ ನಮಃ ಶಿವಾಯ' ಮಂತ್ರ ಅನಬೇಕಿತ್ತು ಅಲ್ಲಿಲ್ಲ, ವಂದೇ ಮಾತರಂ ಅಂದ್ರು! ಕರ್ ಪ್ರ, ಗುಗ್ಳ ಹಚ್ಚಬೇಕಿತ್ತು ಹಚ್ಚಲಿಲ್ಲಾ, ಆಂಗ್ರೇಜಿ ಪ್ಯಾಂಟ್, ಶರ್ಟಿಗಿ ಬೆಂಕಿ ಇಟ್ಟು! ಸ್ವಾಮೇರು ಅಡ್ಡಪಲ್ಲಕ್ಕ್ಯಾಗ ತಾವೂ ಕುಂಡ್ರಲಿಲ್ಲ, ಕಂಚಿನ ದೇವ್ರ ಮೂರ್ತಿನೂ ಇಡ್ಲಿಲ್ಲ. ಚನ್ನಮ್ಮ ಚಿತ್ರಾ, ಟಿಪ್ಪು ಸುಲ್ತಾನ್‌ನ ಮಗನ್ನ ಫೋಟೋ ಇಟ್ರು! ಪಟ್ಟಾಧಿಕಾರ್‍ದ ಹಬ್ಬದೊಳ್ಗ ಹಾಲ-ಹುಗ್ಗಿ ಉಣಬೇಕಿತ್ತು ಉಣಲ್ಲಿಲ್ಲ, ಜೈಲ್ ಸೇರಿದ್ದು" ಹೀಗೆ ಹಲವಾರು ಶೀರ್ಷಿಕೆಗಳ ಮೂಲಕ ಲೇಖಕರು ಕಾದಂಬರಿಯನ್ನು ಹೇಣೆದಿದ್ದಾರೆ.
ಸಾಹಿತಿ ಶಂಕರ ಮಲ್ಲಪ್ಪ ಬೈಚಬಾಳ ಅವರು ಬಿಜಾಪುರ ಜಿಲ್ಲಾ ಬಸವನ ಬಾಗೇವಾಡಿ ತಾ, ಮಸಬಿನಾಳದಲ್ಲಿ 1966 ಜುಲೈ 22ರಂದು ಜನಿಸಿದರು. ಜಾನಪದ ಗಾಯಕ, ಚಿತ್ರಕಲಾವಿದರು. ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದರು. 150ಕ್ಕೂ ಹೆಚ್ಚು ಜಾನಪದ, ಐತಿಹಾಸಿಕ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಥೆ, ಕವಿತೆ, ವಿಮರ್ಶೆ, ಚುಟುಕಗಳು ಇತರರ ಸಂಕಲನಗಳಲ್ಲಿಯೂ ಸೇರಿವೆ. ಪುಣೆಯ ಯಂಗ್ ಸ್ಟಾರ್ ಅಸೋಸಿಯೇಷನ್‌ದ ಕನ್ನಡ ಕಾರ್ಯಕ್ರಮದಲ್ಲಿ ಮೈಸೂರಿನ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಬೇರೆ, ಬೇರೆ ಬಾನುಲಿ ಕೇಂದ್ರಗಳಿಂದ ಭಾಷಣಗಳು ಪ್ರಸಾರವಾಗಿವೆ. ಇವರ ಪ್ರಮುಖ ಕೃತಿಗಳೆಂದರೆ ಶತಾಯುಷಿ ಸೊನ್ನದ ಶಿವಾನಂದ ಅಪ್ಪಗಳು, ವಚನ ಮಾಂಗಲ್ಯ, ಅದೇನ ಕಾಗದಂತಿ, ಭೀಮಾರಥಿ, ರಾಜಗುರು, ಸೈತಾನ ...
READ MORE