ಮುನಿಶ್ವಾಮಾಚಾರ್‍ಯ ಅವರ ತೆಲುಗು ಕಾದಂಬರಿ “ಮಾತೃದೇವೋಭವ”ವನ್ನು ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದ್ದಾರೆ ರಾಜೇಶ್ವರಿ. ತಾಯಿಯ ಹಿರಿಮೆಯನ್ನು ಮನದಟ್ಟುವ ಹಾಗೆ, ಅವಳ ತ್ಯಾಗ ಮನೋಗತದ ಕದವು ಇಲ್ಲಿ ತೆರೆಯುತ್ತದೆ. ತಾಯಿಗಿಂತ ಮಿಗಿಲಾದ ದೇವರಿಲ್ಲ ಎಂಬ ನಾಣ್ನುಡಿ ಇವೆ. ತಾಯಿಯ ಆರೈಕೆ, ಕಳಕಳಿ, ಅವಳ ಮಾನಸಿಕ ತೊಳಲಾಟವನ್ನು ಭೇದಿಸುತ್ತಾ ಒಂದು ಮೃದುಲ ಹಂತಕ್ಕೆ ಕೊಂಡಯ್ಯುವಲ್ಲಿ ಕಾದಂಬರಿ ಸಾಗುತ್ತದೆ. ಆ ಪ್ರೀತಿಯಲ್ಲಿ ಮಿಳಿತವಾಗುವ ಮುಗ್ಧತೆಯನ್ನು, ತನ್ನವರ ಸಖ್ಯಕ್ಕಾಗಿ ಹಂಬಲಿಸುವ ಮಾತೃಹೃದಯದ ಹಪಾಹಪಿಯು ಇಲ್ಲಿ ಸುಸ್ಪಷ್ಟವಾಗಿ ತೆರೆದುಕೊಳ್ಳುತ್ತದೆ.
ಕಾದಂಬರಿಗಾರ್ತಿ ರಾಜೇಶ್ವರಿ ಕೆ. ವಿ. ಅವರು ಕನ್ನಡದ ಜನಪ್ರಿಯ ಕಾದಂಬರಿಗಾರ್ತಿಯರಲ್ಲಿ ಒಬ್ಬರು. ಅಂಚೆ ಕಛೇರಿಯಲ್ಲಿ ವೃತ್ತಿ ಆರಂಭಿಸಿದ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂದೆ ವೆಂಕಟಪತಿ, ತಾಯಿ ಸಾವಿತ್ರಮ್ಮ. ‘ಬಾಳೆಂಬ ದೋಣಿ, ವಂಶೋದ್ದಾರಕ, ಮಧೂಲಿಕ, ಚಿಗುರಿದ ಕುಡಿ, ಪಂಜರದ ಗಿಳಿ, ಸೌಂದರ್ಯ, ಮೊದಲ ಮೆಟ್ಟಿಲು, ಸೂತ್ರಧಾರ, ಹೊಸ ಬದುಕು, ಹರ್ಷದ ಹೊನಲು, ಹೊನ್ನ ಹರಿಗೋಲು’ ಕಾದಂಬರಿಗಳನ್ನು ರಚಿಸಿದ್ದಾರೆ. ಅವರು ಕಾದಂಬರಿಗಳಲ್ಲದೆ ವಾಸ್ತುಶಿಲ್ಪ, ವಿಜ್ಞಾನ, ಹೊಲಿಗೆ, ಪಾಕಶಾಸ್ತ್ರ, ಹಾಸ್ಯ, ಕಾವ್ಯ, ಕಂಪ್ಯೂಟರ್ ಮೊದಲಾಗಿ ವಿಷಯ ವಸ್ತುಗಳಿಗೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ...
READ MORE