ಎಸ್. ಸುರೇಂದ್ರನಾಥ್ ಅವರ ಕಾದಂಬರಿ ‘ಗಾಳಿಗೆ ಬಿದ್ದ ಚಂದ್ರನ ತುಂಡುಗಳು’.ಒಬ್ಬ ಪುಟ್ಟ ಬಾಲಕ, ಅವನ ಕಥೆಯ ನಿರೂಪಣೆಯೇ ಈ ಕಾದಂಬರಿ. ಎಲ್ಲ ತುಂಡು ತುಂಡು ಕಥೆಗಳೇ, ಕಥೆಗಳು ಅನ್ನುವುದಕ್ಕಿಂತ ಘಟನೆಗಳು. ಅವನ ಸುತ್ತ ನಡೆಯುವ ಘಟನೆಗಳು, ಅದನ್ನ ಅವನು ಅರಿಯುವ ರೀತಿಯಲ್ಲೇ ಇದೆ ನಿರೂಪಣೆ. ಕೆಲವೊಂದು ಸಾಲುಗಳು ಓದಲು ಖುಷಿ ಎನಿಸಿದರೆ ಮತ್ತೆ ಕೆಲವು ಯೋಚಿಸಲು ಪ್ರೇರೆಪಿಸುತ್ತವೆ. ಸಮಾಜ ಒಬ್ಬ ಅಂಗವಿಕಲ ಹುಡುಗನನ್ನು ನೋಡುವ ರೀತಿ ಮತ್ತು ಒಡಹುಟ್ಟಿದವರು ನೋಡುವ ರೀತಿ ಬಹಳ ಕಾಡುತ್ತದೆ. ವಿಭಿನ್ನ ಕತೆಯೊಂದನ್ನು ಲೇಖಕರು ಅತೀ ಸೂಕ್ಷ್ಮವಾಗಿ ಬರೆದಿದ್ದಾರೆ.
ಸುರೇಂದ್ರನಾಥ್ ಅವರು ಹುಟ್ಟಿದ್ದು ಮೂಡಬಿದರೆಯ ಸಮೀಪದ ಒಂದು ಹಳ್ಳಿಯಲ್ಲಿ. ಓದಿದ್ದು ಬೆಳೆದಿದ್ದು ದಾವಣಗೆರೆಯಲ್ಲಿ. ಓದಿನ ಸಮಯದಲ್ಲೇ ಸಾಹಿತ್ಯ, ನಾಟಕದ ಗೀಳು ಹತ್ತಿಸಿಕೊಂಡ ಅವರು ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ನಾಟಕದ ತರಬೇತಿ ಪಡೆದರು. ಹೊಟ್ಟೆಪಾಡಿಗಾಗಿ ಒಂದಿಷ್ಟು ವರ್ಷಗಳು ಹಲವಾರು ಪತ್ರಿಕೆಗಳಲ್ಲಿ, ಜಾಹೀರಾತು ಕಂಪೆನಿಗಳಲ್ಲಿ ದುಡಿದಿದ್ದಾರೆ. ಬೆಂಗಳೂರಿನ ಸಂಕೇತ್ ತಂಡದಲ್ಲಿ ಸೇರಿ ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಆನಂತರ ಈಟಿವಿ ಸಂಸ್ಥೆಯನ್ನು ಸೇರಿದ ಅವರು ಹದಿಮೂರು ವರ್ಷಗಳ ಕಾಲ ಹೈದರಾಬಾದಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ವೃತ್ತಿ, ರಂಗಭೂಮಿ ಒಡನಾಟಗಳೊಂದಿಗೆ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿರುವ ಸುರೇಂದ್ರನಾಥ್ ಎರಡು ಕಥಾಸಂಕಲನಗಳು - ಕಟ್ಟು ...
READ MORE