ಬೇರೆ ಬೇರೆ ಧರ್ಮಕ್ಕೆ ಸೇರಿದವರು ಕುಳಿತು ಮಾತನಾಡುತ್ತಿದ್ದಾರೆ ಎಂಬ ಕಾರಣಕ್ಕೆ ಒಂದು ಧರ್ಮೀಯರು ಅವರ ಮೇಲೆ ಹಲ್ಲೆ ನಡೆಸಿ ಕೋಮುದಳ್ಳುರಿ ಹಬ್ಬಿಸುವುದು ಮತ್ತು ಅದಕ್ಕೆ ಪ್ರತ್ಯುತ್ತರವಾಗಿ ಕೋಮುವಾದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿ ಮಾನವೀಯತೆ ಮುಖ್ಯ ಎಂದು ನುಡಿಯುವ ಸನ್ನಿವೇಶವು ಕೋಮುವಾದಕ್ಕೆ ವಿರುದ್ಧವಾಗಿ ಪ್ರತಿಕ್ರಿಯಿಸುತ್ತದೆ. ಇದು ಈ ಸಾಮಾಜಿಕ ಕಾದಂಬರಿಯ ವಸ್ತು. ಅಂತರ್ಜಾತಿಯ ವಿವಾಹ ಪ್ರಸ್ತಾಪದಿಂದ ಈ ಕಾದಂಬರಿ ಆರಂಭವಾಗಿ, ಇದೇ ಕಥಾವಸ್ತುವಾಗಿ ಮುಂದುವರಿದು ಕೋಮುವಾದಿಗಳಿಗೆ ಹೂರಣವಾದರೆ ಅದಕ್ಕೆ ಸೂಕ್ತ ಉತ್ತರ ನೀಡುವುದು ಉಳಿದ ಧರ್ಮೀಯರ ಕರ್ತವ್ಯವೂ ಆಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಹೇಳಲಾಗಿದೆ. ಈ ಕೃತಿಗೆ ‘ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಯುವ ಸಾಹಿತ್ಯ ಪುರಸ್ಕಾರ’ ( 2013) ದೊರೆತಿದೆ.
ಲೇಖಕ ಪ್ರೀತೀಶ ಮೂಲತಃ ಬಿಜಾಪುರ ಜಿಲ್ಲೆಯವರು. ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಅಧಿಕಾರಿಯಾಗಿದ್ದು ಇದೀಗ ಮಾಲ್ಡೀವ್ಸ್ ಶಾಖೆಗೆ ವರ್ಗವಾಗಿ ವಿದೇಶದಲ್ಲಿ ನೆಲೆಸಿದ್ದಾರೆ. ಸಂಕಲ್ಪ ಎಂಬುದು ಅವರ ಕಾದಂಬರಿ. ...
READ MORE