ತಾನೊಂದು ನೆನದರೆ ಮಾನವ ಆರತಿ ವೆಂಕಟೇಶ ಅವರ ಕಾದಂಬರಿಯಾಗಿದೆ. ಮನುಷ್ಯ ಎಷ್ಟೇ ಮೇಧಾವಿಯಾಗಿರಲಿ, ಬುದ್ಧಿವಂತನಾಗಿರಲಿ, ಎಲ್ಲ ಕ್ಷೇತ್ರಗಳಲ್ಲೂ ಪರಿಣತಿ ಪಡೆದಿರಲಿ, ಅವನನ್ನು ಮೀರಿದ ಒಂದು ಶಕ್ತಿ ಇದ್ದೇ ಇರುತ್ತದೆ. ಅದನ್ನೇ ದೇವರು ಎಂದು ನಂಬುತ್ತೇವೆ. `Man proposes God disposes’ ಎನ್ನುವಂತೆ ಮನುಷ್ಯನ ಪ್ರತಿಯೊಂದು ಪ್ರಯತ್ನ ಹಿಂದೆ ದೈವದ ಕೈವಾಡವಿರುತ್ತದೆ.
ಕಾದಂಬರಿಗಾರ್ತಿ ಆರತಿ ವೆಂಕಟೇಶ್ ಅವರು 1964 ಫೆಬ್ರವರಿ 15ರಂದು ಜನಿಸಿದರು. ತಂದೆ ನವರತ್ನರಾಮ್, ತಾಯಿ ಉಷಾ ನವರತ್ನರಾಮ್. ’ಆಶಾಕಿರಣ, ಅಮೃತಬಿಂದು, ನಿನಗಾಗಿ ನಾನೋಡಿ ಬಂದೆ, ಜೀವನ ಸಂಧ್ಯಾ, ಅಗೋಚರ, ಮುಕುಕಿದೀ ಮಬ್ಬಿನಲಿ, ಮಾಫಲೇಶುಕದಾಚನ, ಯಾವ ಮುರಳಿ ಕರೆಯಿತು, ತಲ್ಲಣಿಸದಿರು ಮನವೆ, ಧರಿತ್ರಿ’ ಮುಂತಾದ 30ಕ್ಕೂ ಹೆಚ್ಚು ಕಾದಂಬರಿ ರಚಿಸಿದ್ದಾರೆ. ...
READ MORE