‘ಅಭಿನೇತ್ರಿ’ ಬೇಲೂರು ರಾಮಮೂರ್ತಿ ಅವರ ಕಾದಂಬರಿಯಾಗಿದೆ. ಸವಿತ ತುಂಬಾ ಸಂಪ್ರದಾಯಸ್ಥ ಮನೆತನದ ಹುಡುಗಿ. ಕಾಲೇಜಿನಲ್ಲಿ ಓದುವಾಗ ಪ್ರೇಮ ಪ್ರಸಂಗಗಳು ಎದುರಾದರೂ ದಿಟ್ಟತನದಿಂದ ಎದುರಿಸಿ ಗೆದ್ದವಳು. ಆದರೆ ಅವಳು ಅಚಾನಕ್ಕಾಗಿ ಒಬ್ಬ ವೇಶ್ಯೆಯಿಂದ ಅಪಹರಿಸಲ್ಪಟ್ಟು ಬಂಧಿಯಾಗಿರುತ್ತಾಳೆ. ವೇಶ್ಯೆಯಾಗುವ ಮೊದಲು ಅಲ್ಲಿನ ರೀತಿನೀತಿಗಳನ್ನು ಅರಿತು ಕಲಿತು ಕೆಲಸ ಪ್ರಾರಂಭಮಾಡಬೇಕು ಎಂದು ವೇಶ್ಯಾಗೃಹದ ರಂಗಮ್ಮ ಅವಳಿಗೆ ಹೇಳಿರುತ್ತಾಳೆ. ಮಗಳನ್ನು ಕಾಣದೇ ತಾಯಿ ಚಿಂತೆಯಿಂದಲೇ ಸಾವನ್ನಪ್ಪುತ್ತಾಳೆ. ಅಷ್ಟರಲ್ಲಿ ಪೋಲೀಸ್ ಧಾಳಿಯಾಗಿ ಸವಿತ ಬಿಡುಗಡೆಯಾಗಿ ಮನೆಗೆ ಬರುತ್ತಾಳೆ. ಗೊಂದಲದಿಂದ ಹೊರಬಂದ ನಂತರ ಅವಳ ಮದುವೆಯಾದರೂ ಮುಂದೊಂದು ದಿನ ಅವಳ ಗಂಡನಿಗೆ ಇವಳು ವೇಶ್ಯಾವಾಟಿಕೆಗೆ ದೂಡಲ್ಪಟ್ಟಿದ್ದಳು ಎಂದು ತಿಳಿದು ಅವಳನ್ನು ದೂರ ಮಾಡುತ್ತಾನೆ. ತಾಯಿ ಸತ್ತ ಮೇಲೆ ತಂಗಿಯ ಮಗಳನ್ನೇ ತಂದೆ ಮತ್ತೊಂದು ಮದುವೆ ಮಾಡಿಕೊಂಡಿರುತ್ತಾರೆ. ಇತ್ತ ಗಂಡನಿಗೆ ದೂರವಾದವಳು ಅತ್ತ ತಂದೆಯ ಮನೆಯಿಂದಲೂ ದೂರವಾದವಳು ಹೋದದ್ದೆಲ್ಲಿಗೆ. ಕುತೂಹಲ ತಣಿಸಲು ಓದಿ ಅಭಿನೇತ್ರಿ ಕಾದಂಬರಿ.
ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು. ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು. ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ. ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...
READ MORE