ಖ್ಯಾತ ಕಾದಂಬರಿಕಾರ ಅ.ನ.ಕೃಷ್ಣರಾಯರ ಸಂಗೀತಮಯ ಕಾದಂಬರಿ-ಸಂಧ್ಯಾರಾಗ. ಇಡೀ ಕಾದಂಬರಿಯು ಸಂಗೀತವನ್ನು ಜೀವಾಳವಾಗಿಸಿಕೊಂಡ ಕೆಲವೇ ಕೆಲವು ಕನ್ನಡ ಕಾದಂಬರಿಗಳ ಪೈಕಿ ಸಂಧ್ಯಾರಾಗವು ಪ್ರಮುಖವಾಗಿದೆ. “ಕಲಿಯುವವರೆಲ್ಲರಿಗೂ ಶಾಸ್ತ್ರ ಬರುತ್ತೆ, ಅದು ಬುದ್ಧಿಗೋಚರ. ಆದರೆ, ಕಲೆ ಬರುವುದಿಲ್ಲ, ಅದು ಚಿತ್ತವೇದ್ಯ” ಹಾಗೂ “ಅಚ್ಚಿನ ಇಟ್ಟಿಗೆಗಳನ್ನು ತಯಾರಿಸಿದಂತೆ ಎಲ್ಲಾ ವಿದ್ಯಾರ್ಥಿಗಳಿಗೂ ಒಂದೇ ಬಗೆಯ ಶಿಕ್ಷಣವನ್ನಿತ್ತು, ಒಂದೇ ಎರಕದಲ್ಲಿ ಅವರನ್ನು ಹುಯ್ಯುತ್ತಿರುವುದು ಕಾರ್ಖಾನೆಯ ಪದ್ಧತಿ” ಮತ್ತು “ಜನತೆಯ ಆಸೆ ಮುಗಿಯುವಲ್ಲಿ ಕಲಾವಿದನ ಆಸೆ ಪ್ರಾರಂಭವಾಗುತ್ತದೆ. ಜನತೆಗೆ ಯಾವುದು ಹಿತವಾಗುತ್ತದೋ ಅದು ಕಲಾವಿದನಿಗೆ ಅಹಿತವಾಗುತ್ತದೆ. ಜನತೆಗೆಲ್ಲಿ ತೃಪ್ತಿ ತೋರುವುದೋ ಕಲಾವಿದನಲ್ಲಿ ಅತೃಪ್ತಿ ಮೊಳೆಯುತ್ತದೆ” ಇಂತಹ ಮಾತುಗಳು ವ್ಯಕ್ತಿಗತ ಜೀವನ ಇಲ್ಲವೇ ಒಟ್ಟಾರೆ ವ್ಯವಸ್ಥೆಗೆ ಹಿಡಿದ ಕನ್ನಡಿಗಳಾಗುತ್ತವೆ. ಹೀಗಾಗಿ, ಇಡೀ ಕಾದಂಬರಿಯು ಓದುಗರಿಗೆ ಆಪ್ತವಾಗುತ್ತಾ ಹೋಗುತ್ತದೆ.
‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...
READ MORE