ಕಪ್ಪು ಕಾದಂಬರಿ ಕೇಸು

Author : ಕೌಶಿಕ್ ಕೂಡುರಸ್ತೆ

Pages 200

₹ 225.00




Year of Publication: 2022
Published by: ಸ್ನೇಹ ಬುಕ್ ಹೌಸ್
Address: 165, 10ನೇ ಮುಖ್ಯರಸ್ತೆ, ಶ್ರೀನಗರ, ಬೆಂಗಳೂರು - 560050
Phone: 9845031335

Synopsys

ಕಪ್ಪು ಕಾದಂಬರಿ ಕೇಸು ಕೌಶಿಕ್‌ ಕೂಡುರಸ್ತೆ ಅವರ ಪತ್ತೆದಾರಿ ಕೃತಿಯಾಗಿದೆ. ಸರ್ ಬಹಳ ದಿನಗಳಿಂದ ಈ ಪ್ರಶ್ನೆಯನ್ನು ಕೇಳ್ಬೇಕು ಅಂತ ಇದ್ದೆ. ಜೊತೆಗಿದು ನನ್ನ ಪರ್ಸನಲ್ ಪ್ರಶ್ನೆ ಕೂಡ 'ಎಂದು ಸಣ್ಣಗೆ ನಕ್ಕ ಶೀತಲ್ ತನ್ನ ಮಾತನ್ನು ಮುಂದುವರೆಸಿ ನಿಮ್ಮ ಈ ಹಿಂದಿನ ಪ್ರತಿ ಕಾದಂಬರಿಗಳಲ್ಲಿ ಮಿನಿಮಮ್ ಎಂದರೂ ನಾಲೈದು ಕೊಲೆಗಳಾಗಿರುತ್ತವೆ. ಆ ಕೊಲೆಗಳನ್ನು ನೀವು ಸೃಷ್ಟಿಸಿರುವ ಪಾತ್ರಗಳೇ ಮಾಡುತ್ತಿದ್ದರೂ ಆ ಸನ್ನಿವೇಶವನ್ನು ಸೃಷ್ಟಿಸೋದು ನೀವೇ ಆಗಿರ್ತಿರ, ಸೋ ನಿಮಗೇನಾದ್ರು ಇದುವರೆಗೆ ಯಾರನ್ನಾದರೂ ಕೊಲೆ ಮಾಡಬೇಕೆಂದು ಅನಿಸಿದೆಯಾ?? ಅಕಸ್ಮಾತ್ ಅನಿಸಿದ್ರೆ ಯಾರನ್ನು?? " ಎಂದು TV 10ನ ನಿರೂಪಕಿ ಶೀತಲ್ ಕುತೂಹಲದಿಂದ ತನ್ನೆದುರಿಗಿದ್ದ ಖ್ಯಾತ ಥ್ರಿಲ್ಲರ್ ಕಾದ೦ಬರಿಕಾರ ವಿವೇಕ್ ಚಕ್ರವರ್ತಿ ಯನ್ನು ಕೇಳುತ್ತಿದ್ದಂತೆ; "ನೋಡಿ ಶೀತಲ್ ಹೊರ ಜಗತ್ತಿಗೆ ನಾನು ನಾರ್ಮಲ್ ವ್ಯಕ್ತಿಯ ಹಾಗೆ ಕಾಣಿಸುತ್ತೇನಾದರೂ, ನನಗೂ ಬಹಳಷ್ಟು ಸಲ ಕೊಲೆ ಮಾಡಬೇಕೆಂದು ಅನಿಸಿದೆ. ಅದಕ್ಕಾಗಿ ಪ್ಲಾನ್ ಕೂಡ ಮಾಡಿದ್ದೆ!!" ಎಂದು ತಣ್ಣನೆಯ ದನಿಯಲ್ಲಿ ಉತ್ತರಿಸಿದ. ( ಆಯ್ದ ಭಾಗದಿಂದ)

About the Author

ಕೌಶಿಕ್ ಕೂಡುರಸ್ತೆ

ವೃತ್ತಿಯಿಂದ ಸಹಾಯಕ ನಿರ್ದೇಶಕರಾಗಿರುವ ಕೌಶಿಕ್ ಕೂಡುರಸ್ತೆ ಅವರು ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕೂಡುರಸ್ತೆ ಗ್ರಾಮದವರು. ತಂದೆ-ಹೆಚ್.ಎಸ್. ತಮ್ಮೇಗೌಡ, ತಾಯಿ ಭಾಗ್ಯ ಆಚಾರ್ಯ ಇನ್ಸ್ಟಿಟ್ಯೂಟಿನಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಹೃದಯದ ಮಾತು’ ಇವರ ಮೊದಲ ಪ್ರಕಟಿತ ಕವನ ಸಂಕಲನ. ‘ಇಂತಿ ನಿಮ್ಮ ಆತ್ಮೀಯ’ ಎಂಬ ಕಾದಂಬರಿಯು ಇವರ ಎರಡನೆಯ ಪ್ರಕಟಿತ ಕೃತಿಯಾಗಿದ್ದು ಎರಡನೇ ಮುದ್ರಣವನ್ನು ಕಂಡಿದೆ. ಈ ಕಾದಂಬರಿಯು ‘ಬಹ್ರೇನ್ ಕನ್ನಡ ಡಿಂಡಿಮ’ ಸಮಾರಂಭದಲ್ಲಿ ಪ್ರದರ್ಶನಗೊಂಡಿದೆ. ಗ್ರಿಫಿನ್ಸ್ ಗುರುಕುಲ ಎಂಬ ಸಂಸ್ಥೆಗೆ ಬಿಸಿನೆಸ್ ಕುರಿತಾದ ‘ಬಿಸಿನೆಸ್ ಮತ್ತು ...

READ MORE

Related Books