‘ಕುಚುಕು’ ಫೌಝಿಯಾ ಸಲೀಂ ಅವರ ಕಾದಂಬರಿಯಾಗಿದೆ. ಇದಕ್ಕೆ ದಿವ್ಯ ದೇವೇಂದ್ರ ಅವರ ಬೆನ್ನುಡಿ ಬರಹವಿದೆ; ಫೌಝಿಯಾ ಸಲೀಂರವರ 'ಕುಚುಕು' ಕಥೆ ಹೆಸರಿನಲ್ಲಿಯೇ ಇದೆ. ಸ್ನೇಹಿತರ ಸಾಲುಗಳಲ್ಲಿ ಭಾವನೆಗಳ ಜೊತೆ ಉಕ್ಕಿದ, ಅನುಮಾನದ ನೆರಳಿನಲ್ಲಿ ಮನಸ್ಸನ್ನು ಚಂಚಲಿಸುವ ಗೋಡೆಗಳಿಗೆ ಕಡಿವಾಣ ಹಾಕದೆ ಬದುಕನ್ನು ಬರಡುಮಾಡಿಕೊಳ್ಳುವುದರ ಜೊತೆಗೆ ಮನಸ್ಸು ಮೌನವಾಗುವ ಪ್ರಶ್ನೆಗಳಾಗಿ ಉಳಿದುಕೊಂಡಿರುತ್ತವೆ.
ಈ ಕಥೆಯಲ್ಲಿ ಬರುವ ಸನ್ನಿವೇಶಗಳು ಹೃದಯದ ಅಂತರಂಗಕ್ಕೆ ಹೋಗಿ ಬಡಿಯುವ ಅಲೆಗಳಂತಿವೆ. ಓದುಗರ ಮನಸ್ಸಿನಲ್ಲಿ ಹಾಗೇ ಉಳಿದು ಬಿಡುವ ಪಾತ್ರಗಳು ಯೋಚನೆ ಮಾಡದೆ ತೆಗೆದುಕೊಂಡ ನಿರ್ಧಾರ ಅಂತ್ಯದ ದಾರಿಗೆ ಹತ್ತಿರ... ಮೋಸದ ಪ್ರೀತಿಯ ಬಲೆಯಲ್ಲಿ ಬೀಳುವ ಮೊದಲು ಸಾವಿರ ಬಾರಿ ಯೋಚಿಸುವ ಅಗತ್ಯ ಪ್ರತಿಯೊಬ್ಬರಿಗೂ ಬೇಕು. ಈಗಿನ ಪ್ರಪಂಚಕ್ಕೆ ಇದು ತುಂಬಾ ಹತ್ತಿರವಾದ ಕಥೆ ಎಂದರೂ ತಪ್ಪಾಗಲಾರದು ಎಂಬುಬವುದನ್ನು ಈ ಪುಸ್ತಕದಲ್ಲಿ ನೋಡಬಹುದು.
ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುವ ಫೌಝಿಯಾ ಸಲೀಂರವರ ಹುಟ್ಟೂರು ಮಂಗಳೂರು. ಅರ್ಥಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಇವರು, ಮಂಗಳೂರಿನ ಕಾಲೇಜು ಒಂದರಲ್ಲಿ ನಾಲ್ಕು ವರ್ಷಗಳ ಕಾಲ ಅರ್ಥಶಾಸ್ತ್ರದ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಇವರು ದುಬೈನಲ್ಲಿ ವಾಸಿಸುತ್ತಿದ್ದು, ದುಬೈಯಲ್ಲಿರುವ ಕಂಪನಿಯೊಂದರ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಯುವ ಓದುಗರಿಗೆ ಇಷ್ಟವಾಗಬಹುದಾದ ಬರಹಗಳನ್ನು ಬರೆಯುವ ಫೌಝಿಯರವರು, “ಮನಸ್ಸಾರೆ” ಹಾಗು “ನಿನ್ನನ್ನೇ ಪ್ರೀತಿಸುವೆ" ಎಂಬ ಎರಡು ಕಿರುಕಾದಂಬರಿಗಳ ಮೂಲಕ ಸಾಹಿತ್ಯ ಲೋಕಕ್ಕೆ ಕಾಲಿಟ್ಟರು. 2022ರಲ್ಲಿ ಪ್ರಕಟವಾದ ಇವರ “ಬಾಳ ಪಯಣ” ಕಾದಂಬರಿಯು, ಜಾಗತಿಕ ಮಟ್ಟದಲ್ಲಿರುವ ಅಂತಾರಾಷ್ಟ್ರೀಯ ಬೃಹತ್ ಗ್ರಂಥಾಲಯವಾದ ದುಬೈಯ ...
READ MORE