ಇತಿಹಾಸದ ಗೊಡವೆಗೆ ಹೋಗದೆ ನೇರವಾಗಿ ಶರಣರೆಂದರೆ ಹೀಗೆಯೇ; ಹೀಗೆ ಹೀಗೆ ಇದ್ದವರು, ನಡೆದವರು ಎನ್ನುವ ಅರ್ಥದಲ್ಲಿಯೇ ಜನರು ನಿರ್ಧರಿಸುತ್ತಾರೆ. ಆದರೆ, ಲೇಖಕರು ಇಲ್ಲಿ ಇತಿಹಾಸದೊಂದಿಗೆ ಶರಣರ ಜೀವನವನ್ನು ಅಧ್ಯಯನ ಮಾಡಿ, ಅದಕ್ಕೆ ಹತ್ತಿರವಾಗಿ ಕಲ್ಪಿಸಿಕೊಂಡು ಬರೆದ ಕಾದಂಬರಿ ಇದು. ಇಲ್ಲಿಯ ಕಥಾವಸ್ತುವು ಐತಿಹಾಸಿಕ ಘಟನೆಗಳಿಗೆ ಅಪಚಾರವಾಗದಂತೆ ಸೂಕ್ತ ಬದಲಾವಣೆಗಳೊಂದಿಗೆ ಮೂಡಿ ಬಂದಿದೆ. ಆ ಕಾಲದ ಜನ-ಜೀವನ ವ್ಯವಸ್ಥೆ, ಆಚರಣೆ, ಆಹಾರ ಪದ್ಧತಿ, ನಂಬಿಕೆಗಳ ಕುರಿತು ವಾಸ್ತವ ಚಿತ್ರಣವಿರುವ ಕೃತಿ ಇದಾಗಿದೆ.
ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ...
READ MORE