ಕತ್ತಲ ಕಾನು

Author : ಎ. ಶ್ರೀನಿವಾಸ್ ಪ್ರಸಾದ್

Pages 200

₹ 250.00




Year of Publication: 2019
Published by: ಪ್ರಗತಿ ಗ್ರಾಫಿಕ್ಸ್
Address: ನಂ, 119, 3ನೇ ಕ್ರಾಸ್, 8ನೇ ಮುಖ್ಯ ರಸ್ತೆ, ಹಂಪಿನಗರ, ಬೆಂಗಳೂರು-560104
Phone: 8971008732

Synopsys

ಸಂಸಾರದ ಸಹಜ ಬದುಕು ಸಹ ಅಧ್ಯಾತ್ಮಿಕ ಚಿಂತನೆಯಿಂದ ಹೊರತಾಗಿಲ್ಲ. ಅದಕ್ಕೆ ಆಧಾರ ಎಂಬಂತೆ ಸಣ್ಣ ಕಾದಂಬರಿಯ ಈ ಸಾಲುಗಳಿವೆ; . "ನಾವು ಮನುಷ್ಯರು. ಮನಸ್ಸಿಗೆ, ಹೃದಯಕ್ಕೆ ಸಣ್ಣ ಸಣ್ಣ ಸಮಸ್ಯೆಗಳನ್ನು, ನೋವುಗಳನ್ನು ತುಂಬಿಕೊಳ್ಳುತ್ತಾ ನಮ್ಮ ಮುಂದಿರುವ ದೊಡ್ಡ ದೊಡ್ಡ ಸಂತೋಷಗಳನ್ನು ಪ್ರೀತಿಗಳನ್ನು ಅನುಭವಿಸದೇ, ಅವನ್ನು ನಮ್ಮ ಮನಸ್ಸಿಗೆ ತುಂಬಿಕೊಳ್ಳದೆ. ಜಾಗ ಕೊಡದೇ ನಿಂತು ಬಿಡುತ್ತೇವೆ. ಹಾಗೆಯೇ, ಪ್ರೀತಿ ಎಂಬುದು ಪಡೆದುಕೊಳ್ಳುವುದಲ್ಲ ಮಗು, ಅದು ಕೊಡುವುದು, ನೀನು ಕೊಟ್ಟಷ್ಟು ಅದರ ದುಪ್ಪಟ್ಟು ಹಿಂದಕ್ಕೆ ಪಡೆಯುತ್ತೀಯ. ನಿನ್ನ ತಂದೆ ತಾಯಿ ನಿನ್ನನ್ನು ಪ್ರೀತಿಸಲಿಲ್ಲ, ಕಾಳಜಿ ವಹಿಸಲಿಲ್ಲ ಎಂದು ಸುಮ್ಮನೆ ಕೂರುವ ಬದಲು, ನೀನು ಅವರನ್ನು ಪ್ರೀತಿಯಿಂದ ಕಂಡು ಅವರ ಹಿಂದೆ ಹೋಗಿದ್ದರೆ, ನಿನಗೆ ಖಂಡಿತ ಅವರಿಂದ ಪ್ರೀತಿ ದೊರೆಯುತ್ತಿತ್ತು”

ಹೀಗೆ, ಪ್ರೀತಿಯನ್ನು ದಕ್ಕಿಸಿಕೊಳ್ಳಲು ಇರುವ ಮತ್ತೊಂದು ಮಾರ್ಗವನ್ನೂ ಕಾದಂಬರಿಕಾರರು ಸೂಚಿಸುತ್ತಾರೆ. ಕಥೆಯ ಉದ್ದಕ್ಕೂ ಪರಿಸರದ ಅನನ್ಯ ಸೌಂದರ್ಯವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಾರೆ. ನಗರವಾಸಿಗಳ ಕಲ್ಪನೆಗೂ ನಿಲುಕದ ಪ್ರಕೃತಿಯ ಅನೇಕ ವಿಸ್ಮಯಕಾರಿ ಸಂಗತಿಗಳನ್ನು ತಿಳಿಸುವ ಕಳಕಳಿ ಇಲ್ಲಿದೆ.

 

About the Author

ಎ. ಶ್ರೀನಿವಾಸ್ ಪ್ರಸಾದ್

ಕಾದಂಬರಿಕಾರ ಎ. ಶ್ರೀನಿವಾಸ್‌ ಪ್ರಸಾದ್ ಮೂಲತಃ ಬೆಂಗಳೂರು ನಿವಾಸಿ. ವಿಜಯ ಸಂಜೆ ಕಾಲೇಜಿನಲ್ಲಿ ತಮ್ಮ ಬಿ.ಎ. ಪದವಿ ಮುಗಿಸಿ ಪ್ರಸ್ತುತ ಸರ್ಕಾರಿ ನೌಕರಿಯಲ್ಲಿದ್ದಾರೆ. ಸಂಗೀತ, ಸಾಹಿತ್ಯ ಹಾಗೂ ರಂಗಭೂಮಿಯ ಕಡೆಗೆ ಒಲವುಳ್ಳವರು. ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತುವುದು ಇವರ ಹವ್ಯಾಸ. ತನ್ನ ತಾನರಿವನಕ ಎಂಬ ಮಾತಿನಲ್ಲಿ ನಂಬಿಕೆಯಿಟ್ಟು, ಅಖಂಡ ಕರ್ನಾಟಕವನ್ನು ಪ್ರದಕ್ಷಿಣೆ ಹಾಕಬೇಕೆಂಬ ಹಂಬಲದಲ್ಲಿ ಶೇ. ಎಂಬತ್ತು ಭಾಗ ಕರ್ನಾಟಕದ ಪರಿಚಯ ಇವರಿಗಿದೆ.. ಯುವಮನಸ್ಸಿನ ಎಲ್ಲ ಹಂಬಲಗಳೂ, ಒಳಿತುಗಳೂ ಶ್ರೀನಿವಾಸ್ ಪ್ರಸಾದರ ಮನದಲ್ಲಿ ಅಚ್ಚೊತ್ತಿದ್ದು ಆ ದಿಸೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ’ಕತ್ತಲ ಕಾನು’ ಅವರ ಚೊಚ್ಚಲ ಕಾದಂಬರಿ. ...

READ MORE

Related Books