‘ವೃಷ್ಟಿ’ ಕೃತಿಯು ಶಿವಕುಮಾರ್ ಆರ್. ಅವರ ಕಾದಂಬರಿಯಾಗಿದೆ. ಕಾದಂಬರಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಊರಿಂದ ಸ್ವಲ್ಪದೂರದಲ್ಲಿ ಹರಿಜನರ ತಾಂಡಾವಿದೆ. ಬಹುದಿನಗಳಿಂದ ಜೀತಕ್ಕೆ ಬಂದು ಸೇರಿಕೊಂಡ ಗುಂಪು. ಕೆಲವರು ತಮ್ಮ ಜೀತದ ಅವಧಿ ಮುಗಿಸುವವರೆಗು ಇರಬೇಕಾದರೆ ಮತ್ತೆ ಕೆಲವರು ತಮ್ಮ ಜೀತದ ಮಧ್ಯದಲ್ಲೇ ತಮ್ಮ ಅವಧಿ ಮುಗಿಸಿ ಉಳಿದ ದಿನಗಳಿಗೆ ತಮ್ಮ ಪೀಳಿಗೆಯನ್ನು ಬಿಟ್ಟುಹೋಗಿದ್ದರು. ಕೃಷಿಯನ್ನು ನಂಬಿ ಬದುಕುವೆ ಮಾತೆ ಇರಲಿಲ್ಲಮನೆಗೆಲಸ ಬಿಟ್ಟರೆ, ಕಾಡು ಕಡಿಯುವುದು, ಮಣ್ಣು ಹೊರವುದು ಹೀಗೆ ಜೀತಕ್ಕೆ ಬಲಿಯಾಗಿದ್ದ ಸಣ್ಣಜೀವಿಗಳು ಹೆಚ್ಚಾಗಿಯೆ ಇತ್ತು. ಮನುಷ್ಯನೊಂದಿಗೆ ಬೀದಿನಾಯಿಗಳು, ಹಂದಿಗಳು ತಮ್ಮ ವಂಶವನ್ನು ಹೆಚ್ಚಾಗಿಯೆ ಬೆಳೆಸಿದ್ದವು. ಗುಳೇದಡಗುಡ್ಡದ ಹೊಲಿಸು ನೀರೆಲ್ಲ ರಾಜಮಾರ್ಗವಾಗಿ ತಾಂಡಾವನ್ನೆ ದಾಟಿ ಹೋಗಬೇಕಿತ್ತು. ಹಾಗೆ ಕೆಲವು ಮನೆಗಳನ್ನು ಎತ್ತರದ ಮರಳುಗುಡ್ಡದ ಮೇಲೆ ಕಟ್ಟಿಕೊಂಡಿದ್ದರು ಎಂದಿದೆ.
ಆರ್. ಶಿವಕುಮಾರ್ ಅವರು ಮೂಲತಃ ಕೋಲಾರದ ಕೆ.ಜಿ.ಎಫ್ ನವರು. 1997 ಜುಲೈ 20ರಂದು ಜನನ. ಪ್ರಸ್ತುತ ಬೆಂಗಳೂರಿನ ಗಡಿಭಾಗದ ಗ್ರಾಮವಾದ ಮೀನುಕುಂಟೆ ಹೊಸೂರಿನ ನಿವಾಸಿ. ಪ್ರಸ್ತುತ ಯಲಹಂಕದಲ್ಲಿನ ಅಗ್ರಗಾಮಿ ಪದವಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು : ವೃಷ್ಟಿ ...
READ MORE