‘ಲೈಫ್ 360’ ಅನಂತ್ ಕುಣಿಗಲ್ ಅವರು ಬರೆದಿರುವ ಅದ್ಬುತವಾದ ಕೃತಿ. ಲೈಫ್ 360 ವ್ಯಕ್ತಿತ್ವ ವಿಕಸನದ ಎಲ್ಲ ತಲೆಮಾರುಗಳಿಗೆ ಪೂರಕವಾದ ಪ್ರೇರಣಾದಾಯಕ ಕೃತಿಯಾಗಿದೆ. ಲೈಫ್ನ ವಿವಿಧ ಆಯಾಮಗಳನ್ನು ಒಳಗೊಂಡು, ಜೀವನವನ್ನು ಸಮಗ್ರ ದೃಷ್ಟಿಕೋನದಿಂದ ನೋಡುವಂತೆ ಪ್ರೇರೇಪಿಸುತ್ತದೆ. ಸರಳ, ಸುಲಭ ಅರ್ಥಗರ್ಭಿತ ಭಾಷೆ ಮತ್ತು ಪ್ರಾಯೋಗಿಕ ಉದಾಹರಣೆಗಳ ಮೂಲಕ ಓದುಗರನ್ನು ತಲುಪುತ್ತದೆ. ವ್ಯಕ್ತಿತ್ವದ ಬೆಳವಣಿಗೆ, ಆತ್ಮವಿಶ್ವಾಸ, ಮಾನಸಿಕ ಶಕ್ತಿ, ಮತ್ತು ಜೀವನದ ಗುರಿಗಳನ್ನು ಕೈಗೊಳ್ಳುವ ಮಾರ್ಗಗಳ ಕುರಿತು ಸ್ಪಷ್ಟತೆ ನೀಡುತ್ತದೆ. ಪ್ರತಿ ಅಧ್ಯಾಯವೂ ಪಾಠ್ಯ, ಪ್ರವೃತ್ತಿ ಮತ್ತು ಜೀವನದ ನೈಜ ಅನುಭವಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ಹೊಸ ದಾರಿಯ ಹುಡುಕಾಟದಲ್ಲಿರುವ ಪ್ರತಿಯೊಬ್ಬರಿಗೂ ಉಪಯುಕ್ತವಾಗಿದೆ. ಲೇಖಕರ ಅನುಭವ ಮತ್ತು ವೈಯಕ್ತಿಕ ಆಲೋಚನೆಗಳು ಪುಸ್ತಕದ ಪ್ರಾಮಾಣಿಕತೆಯನ್ನು ಹೆಚ್ಚಿಸುತ್ತವೆ.
ಅನಂತ (20-ಡಿಸೆಂಬರ್-1997) ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆಂಚನಹಳ್ಳಿ ಗ್ರಾಮದವರು. ತಾಯಿ ಗೌರಮ್ಮ ಮತ್ತು ತಂದೆ ಶ್ರೀಮಾನ್ ಲೇ. ನರಸಯ್ಯ. ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದ ನಂತರ ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿಯಲ್ಲಿ ಥಿಯೇಟರ್ ಡಿಪ್ಲೊಮಾ ತರಬೇತಿ ಮುಗಿಸಿ, ಶಿವಸಂಚಾರ ರೆಪರೇಟರಿಯಲ್ಲಿ ನಟ ಹಾಗೂ ತಂತ್ರಜ್ಞನಾಗಿ ಕಾರ್ಯನಿರ್ವಹಿಸಿದ್ದಾರೆ. ಹಲವಾರು ಕನ್ನಡ ಕಿರುಚಿತ್ರಗಳನ್ನು ನಿರ್ಮಿಸಿ, ಶಾಲಾ ಕಾಲೇಜು ಮಕ್ಕಳಿಗೆ ಕಿರು ನಾಟಕಗಳನ್ನು ನಿರ್ದೇಶನ ಮಾಡಿರುತ್ತಾರೆ. ಅವ್ವ ಪುಸ್ತಕಾಲಯ ಎಂಬ ಸಾಹಿತ್ಯ ಬಳಗವನ್ನು ಕಟ್ಟಿಕೊಂಡು ಸಾಹಿತ್ಯ ಸೇವೆಯಲ್ಲಿ ನಿರಂತರಾಗಿರುವ ಇವರು ಸದ್ಯ ಬೆಂಗಳೂರಿನಲ್ಲಿದ್ದುಕೊಂಡು ಕನ್ನಡ ಚಲನಚಿತ್ರಗಳಲ್ಲಿ ...
READ MORE