ವಿಸರ್ಗ

Author : ಶ್ರೀಧರ ಬಳಗಾರ

Pages 232

₹ 250.00




Year of Publication: 2023
Published by: ಅಂಕಿತ ಪುಸ್ತಕ
Address: ಪ್ರಕಾಶಕರು : ಅಂಕಿತ ಪುಸ್ತಕ, #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

ಶ್ರೀಧರ ಬಳಗಾರರ ಈ ಹೊಸ ಕೃತಿಯು ಪರಿಸರದ ನಿಗೂಢತೆ ಮತ್ತು ಸಾಮಾಜಿಕ ಚಲನಶೀಲತೆಗಳಲ್ಲಿ ವ್ಯಕ್ತಿತ್ವ ಮತ್ತು ಜೀವನ ವಿನ್ಯಾಸಗಳು ರೂಪುಗೊಳ್ಳುವ ಬಿಕ್ಕಟ್ಟುಗಳನ್ನು ಕಂಡುಕೊಳ್ಳಲು ಹೊರಟಂತಿದೆ. ಪರಿಸರವನ್ನು ತನ್ನ ನೇರಕ್ಕೆ ಒಗ್ಗಿಸಿಕೊಳ್ಳುವ ಮಾದರಿಗಿಂತ ಆ ಪರಿಸರವೇ ವ್ಯಕ್ತಿಗಳನ್ನು ತನ್ನ ಹಿಡಿತಕ್ಕೆ ತೆಗೆದು- ಕೊಂಡು ಅವರ ವರ್ತನೆಗಳನ್ನು ನಿರ್ದೇಶಿಸುವ ಬಗ್ಗೆ ಇಲ್ಲಿ ಬಿಂಬಿತವಾಗಿದೆ. ಇದರೊಡನೆ ಸಾಮಾಜಿಕ ನೆಲೆಯಲ್ಲಿ ನಡೆಯುವ ಹತ್ತಾರು ಕ್ರಿಯೆಗಳು ಇಲ್ಲಿನ ಪಾತ್ರಗಳ ನೈಸರ್ಗಿಕ ವ್ಯಕ್ತಿತ್ವಕ್ಕೆ ಸವಾಲಾಗುತ್ತವೆ. ಈ ಕರ್ಷಣೆಯೇ ಕಾದಂಬರಿಯಲ್ಲಿ ಪ್ರಧಾನವಾಗುವ ಹಲವು ವಿಘಟನೆಗಳಿಗೆ, ಒಡಕುಗಳಿಗೆ ಕಾರಣ ಸೂತ್ರವಾಗುತ್ತದೆ. ಪದುಮಳು, ಹೊಲಿಗೆ ಯಂತ್ರದಲ್ಲಿ ಎಲ್ಲವನ್ನು ಕೂಡಿಸಿ ಹೊಲೆಯುತ್ತಾಳೆ. ಆದರೆ ಬದುಕಿನಲ್ಲಿ ಎಲ್ಲವೂ ಹಿಸಿದು ಹೋಗುತ್ತಿರುತ್ತದೆ. ಆಗ ಮತ್ತೆ ಅವೆಲ್ಲವನ್ನೂ ಒಗ್ಗೂಡಿಸಿಕೊಳ್ಳುವ ದಾರಿಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ. ಇಲ್ಲಿರುವ ಹಲವರು ತಂತಮ್ಮ ಹೊಣೆಗಳನ್ನು ನಿರ್ವಹಿಸಿ ಬದುಕಿನ ರಂಗದಿಂದ ನಿರ್ಗಮಿಸುವುದೇ ತಮ್ಮ ಜೀವನದ ಗುರಿ ಎಂಬಂತೆ ವರ್ತಿಸುತ್ತಾರೆ. ಕೆಲವರು ತಮ್ಮ ಸುತ್ತಣನವರ ಬದುಕನ್ನು ನೇರ್ಪುಗೊಳಿಸುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಭಟ್ಟಣ್ಣ, ಗೌರಿ, ನಾಯ್ಡು ಹೀಗೆ ಕೆಲವರ ಇಂತಹ ನಡೆಗಳಲ್ಲಿ ಗೆಲುವು ಸಾಧ್ಯವಾಗದೇ ದೂರವೇ ಉಳಿಯುತ್ತದೆ. ಇದೆಲ್ಲದರ ನಡುವೆ ನಿನ್ನೆಗಳ ಭಾರವನ್ನು ಹೊತ್ತು ನಲುಗಿರುವವರು ಅದರಿಂದ ಬಿಡುಗಡೆ ಪಡೆಯಲು ಇಲ್ಲವೇ ಅದರ ಮೂಲಚೂಲಗಳನ್ನು ಗ್ರಹಿಸಲು ಬಗೆ ಬಗೆಯಲ್ಲಿ ತೊಡಗಿರುವುದನ್ನು ಕಾಣುತ್ತೇವೆ. ಉಮ್ಮಣ್ಣ ಆ ಯತ್ನದಲ್ಲೇ ವರ್ತಮಾನವನ್ನು ಅರಗಿಸಿಕೊಳ್ಳಲಾಗದೆ ಆಕಳ ಗವಿಯ ನಿಗೂಢತೆಯಲ್ಲಿ ಮರೆಯಾದಂತೆ ತೋರುತ್ತದೆ. ಪದುಮ ಹೇಗೋ ತನ್ನ ಕೈಗೆ ಬಂದ ಹುದುಗಿರಿಸಿದ್ದ ನಿಧಿಯನ್ನು ಸೇತುವೆ ಮೇಲಿಂದ ನದಿಗೆಸೆದು ನಿನ್ನೆಗಳ ಭಾರದಿಂದ ಮುಕ್ತಳಾಗಲು ಮುಂದಾಗುತ್ತಾಳೆ. ಇದೆಲ್ಲದರ ನಡುವೆ ಬದುಕು ಮರಳಿ ನಳನಳಿಸಬಹುದು ಎಂಬ ಆಸೆಯತ್ತ ಕಾದಂಬರಿ ಸಾಗುತ್ತದೆ ಎಂದು ಲೇಖಕ ಕೆ ವಿ ನಾರಾಯಣ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಶ್ರೀಧರ ಬಳಗಾರ

ಲೇಖಕ ಶ್ರೀಧರ ಬಳಗಾರ ಅವರ ಊರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ  ಸಮೀಪದಲ್ಲಿರುವ ಬಳಗಾರ. ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಅಧೋಮುಖ', 'ಮುಖಾಂತರ', `ಇಳೆ ಎಂಬ ಕನಸು', 'ಒಂದು ಫೋಟೋದ ನೆಗೆಟಿವ್', 'ಅಮೃತಪಡಿ' ಎಂಬ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ  'ಕೇತಕಿಯ ಬನ', 'ಆಡುಕಳ' ಎಂಬ ಕಾದಂಬರಿಗಳು, 'ರಥ ಬೀದಿ' ಮತ್ತು 'ಕಾಲಪಲ್ಲಟ' ಅಂಕಣ ಬರಹಗಳು, ಹಾಗೇ ಕೆಲವು ಕಥೆಗಳು ಇಂಗ್ಲಿಷ್, ತಮಿಳು, ಹಿಂದಿಗೆ ಭಾಷಾಂತರಗೊಂಡಿವೆ. ಇನ್ನು ಕರ್ನಾಟಕ ವಿಶ್ವವಿದ್ಯಾಲಯ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಪದವಿ ಪಠ್ಯಕ್ಕೆ (ಕನ್ನಡ) ಸೇರ್ಪಡೆಯಾಗಿವೆ. ...

READ MORE

Related Books