ಲೇಖಕ ಸೋಮು ರೆಡ್ಡಿ ಅವರ ಕಾದಂಬರಿ ಕೃತಿ ʻಅಭಿನೇತ್ರಿʼ. ಇದು 2015-16ನೇ ಸಾಲಿನ ಶ್ರೀ ಮಹಿಮಾ ಕೌಸ್ತುಭ ಪುರಸ್ಕಾರ ವಿಜೇತ ಕೃತಿಯಾಗಿದೆ. ಪುಸ್ತಕದ ಬೆನ್ನುಡಿಯಲ್ಲಿ ಡಾ. ಮಲ್ಲಿಕಾ ಎಸ್. ಘಂಟಿ ಅವರು, “ಪೋಲಿಸ್ ಇಲಾಖೆಯಲ್ಲಿ ಕೆಲಸ ಮಾಡುವವರನ್ನೆಲ್ಲ ಸಂಸ್ಕೃತಿ, ಸಾಹಿತ್ಯ, ಕಲೆಗಳಿಂದ ದೂರವಿದ್ದವರು ಎನ್ನುವ ಸರ್ವೆಸಾಮಾನ್ಯ ಮಾತುಗಳಿಗೆ ಅಪವಾದದಂತೆ ಕೆಲವು ಜನ ಸಾಹಿತ್ಯ ಕೃಷಿಯಲ್ಲಿ ತೊಡಗುವುದರ ಮೂಲಕ ಸಾಹಿತ್ಯದ ವೈವಿಧ್ಯತೆಗೆ ಕಾರಣರಾಗಿ ರುವರು. ಈ ಸಾಲಿಗೆ ಸೇರಿರುವವರು ಸೋಮು ರೆಡ್ಡಿ. ಸೋಮು ರೆಡ್ಡಿಯವರ ಪ್ರಥಮ ಕಾದಂಬರಿಯಾದ ಅಭಿನೇತ್ರಿ ಪುನರ್ ಮುದ್ರಣಗೊಳ್ಳುತ್ತಿರುವುದೇ ಅದರ ಜನಪ್ರಿಯತೆಯನ್ನು ತೋರುತ್ತದೆ. ಕಲಾವಿದೆಯರ ಬದುಕನ್ನು ವಾಸ್ತವವಾಗಿಸಿಕೊಂಡು ಹಲವಾರು ಕಥೆ ಕಾದಂಬರಿಗಳು ಬಂದಿವೆ. ಆದರೆ ಸೋಮು ಅವರು ಭಿನ್ನವಾಗಿ ವಸ್ತುವನ್ನು ಗ್ರಹಿಸಿದ ಕಾರಣ ಕಾದಂಬರಿ ಓದುಗರನ್ನು ಸೆಳೆಯುತ್ತದೆ, ಹಿಡಿದಿಡುತ್ತದೆ. ಉತ್ತರ ಕರ್ನಾಟಕದ ವಸ್ತುಭಾಷೆಯ ಬಳಕೆಯಿಂದ ಅಂದಗೆಟ್ಟ ಬದುಕಿನ ಬಗ್ಗೆ ಚಿಂತನಾರ್ಹ ರೀತಿಯಲ್ಲಿ ನಿರೂಪಿಸಿರುವರು. ಕಾದಂಬರಿ ಕಲ್ಪನೆಯು ಬರಹಗಾರನ ಬೆನ್ನೇರಿ ಜಗತ್ತಿನ ಪರ್ಯಟನೆ ಮಾಡಿದರೆ ಓದುಗ ವಾಸ್ತವದ ಕುದುರೆ ಮೇಲೆ ಪ್ರಯಾಣ ಬೆಳೆಸಿ ತನ್ನನ್ನು ತನ್ನ ಸುತ್ತಲಿನವರನ್ನು ಕಾದಂಬರಿಯಲ್ಲಿ ಹುಡುಕುವ ಪ್ರಯತ್ನ ಮಾಡುವನು. ಹೀಗಾಗಿ ಕಾದಂಬರಿ ಕರತಲ ರಂಗಭೂಮಿ ಎನಿಸಿಕೊಂಡಿದೆ. ಸೋಮು ರೆಡ್ಡಿಯವರಲ್ಲಿ ಬರೆಯುವ ಶಕ್ತಿಯಿರುವ ಕಾರಣ ಕನ್ನಡ ಸಾರಸ್ವತ ಕ್ಷೇತ್ರದಲ್ಲಿ ಉಳಿಯುವರು” ಎಂದು ಹೇಳಿದ್ದಾರೆ.
ಯುವ ಬರಹಗಾರ ಸೋಮು ರೆಡ್ಡಿ ಮೂಲತಃ ಬಾಗಲಕೋಟೆ ಜಿಲ್ಲೆಯ ಕೇಸನೂರ ಗ್ರಾಮದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿಎ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪೊಲೀಸ್ ಕಾನ್ಸಟೇಬಲ್ ಹುದ್ದೆಗೆ ನೇಮಕಾತಿ ಹೊಂದಿ ಹನ್ನೆರಡು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಅಭಿನೇತ್ರಿ (ಕಾದಂಬರಿ), ನೋಟದಾಗ ನಗೆಯಾ ಮೀಟಿ (ಕಥಾ ಸಂಕಲನ), ತಲಾಷ್ (ನಾಟಕ) ಇವರ ಪ್ರಕಟಿತ ಕೃತಿಗಳಾಗಿವೆ. ಇವರಿಗೆ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ, ಯುವ ಸಾಧಕ ಪ್ರಶಸ್ತಿ, ಕ್ರಾಂತಿ ಪುರಸ್ಕಾರ, ಶ್ರೀ ಮಹಿಮಾ ಕೌಸ್ತುಭ ಪುರಸ್ಕಾರ, ಚೇತನ ಸಾಹಿತ್ಯ ಪುರಸ್ಕಾರ, ಜೇಂಟ್ಸ್ ...
READ MORE