ಎಚ್.ಎಸ್. ಅನುಪಮಾ ಅವರ ಕಾದಂಬರಿ ಬೆಳಗಿನೊಳಗು ಮಹಾದೇವಿಯಕ್ಕ . ಉಡುತಡಿಯಿಂದ ಹೊರಟ ಮಹಾದೇವಿ ಕಲ್ಯಾಣ ತಲುಪಿದಾಗ ಮಹಾದೇವಿಯಕ್ಕನಾಗಿದ್ದಳು. ಅಲ್ಲಿಂದ ಕದಳಿ ತಲುಪಿದಾಗ ಇಹಪರದಾಚೆಯ ಎತ್ತರಕ್ಕೇರಿದ್ದಳು. ಕನ್ನಡದ ಶ್ರೇಷ್ಠ ವಚನಕಾರ್ತಿಯಾದ ಅಕ್ಕಮಹಾದೇವಿ ಕುರಿತಾಗಿ ಅನೇಕ ಕೃತಿಗಳು ಈಗಾಗಲೇ ಕನ್ನಡದಲ್ಲಿ ಬಂದಿವೆ. ಉಡುತಡಿಯಿಂದ ಕಲ್ಯಾಣ ಅಲ್ಲಿಂದ ಶ್ರೀಶೈಲದ ಕದಳಿ ತಲುಪಿದ, ನಡೆಯುತ್ತ ನಡೆಯುತ್ತ ಮಾಗಿದ ಅಕ್ಕನ ಪಯಣ ಹೆಣ್ಣು ಜೀವದ ಮಹಾಪಯಣ. ಅಕ್ಕನ ಈ ಪಯಣವೇ ಈ ಕಾದಂಬರಿಯ ಹುಡುಕಾಟ. ಅಕ್ಕ ಮತ್ತು ಶರಣ ಚಳವಳಿಯನ್ನು ಅರಿಯುವ ಹೊಸ ಹೆಣ್ಣು ನೋಟ ಇಲ್ಲಿದೆ.
ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾ. ...
READ MOREhttps://www.prajavani.net/artculture/book-review/belaginolagu-mahadeviyakka-book-review-1024613.html