ಲೇಖಕ ಪ್ರಕಾಶ್ ನಾಯಕ್ ಅವರ ‘ಅಪರಿಚಿತ’ ಕೃತಿಯು ಅನುವಾದಿತ ಕಾದಂಬರಿ. ಕೃತಿಯ ಮೂಲ ಲೇಖಕ ಆಲ್ಬರ್ಟ್ ಕಮೂ. ಇಲ್ಲಿ ಮರ್ಸೂ ಪಾತ್ರವು ಕತೆಯನ್ನು ಕಟ್ಟುತ್ತಾ ಹೋಗುತ್ತದೆ. ಆಲ್ಜೀಸ್ ನಗರದಲ್ಲಿ ಮಾಮೂಲಿ ಗುಮಾಸ್ತನಾಗಿರುವ ಮರ್ಸೂನ ವಿಕ್ಷಿಪ್ತ ಕತೆಯನ್ನು ಒಣ ನಿರ್ಭಾವುತನಕ್ಕೆ, ನಗ್ನ-ನಿರಾಡಂಬರವಾದ ಗದ್ಯದಲ್ಲಿ ಕಾದಂಬರಿ ನಿರೂಪಿಸುತ್ತದೆ. ಮರ್ಸೂನ ತಾಯಿ ವೃದ್ದಾಶ್ರಮದಲ್ಲಿ ತೀರಿಕೊಂಡ ಸುದ್ದಿಯೊಂದಿಗೆ ಕಾದಂಬರಿ ಶುರುವಾದರೂ, ಮರ್ಸೂಗೆ ಅವಳು ಯಾವಾಗ ತೀರಿಕೊಂಡವಳೆಂದು ಗೊತ್ತಿಲ್ಲ. ಸತ್ತವಳ ವಯಸ್ಸು ಎಷ್ಟೆಂದು ತಿಳಿದಿಲ್ಲ. ಹೆತ್ತವಳ ಮುಖವನ್ನು ಕೊನೆಯದಾಗಿ ನೋಡಲೂ ಅಸ್ಥೆಯಿಲ್ಲ. ಹೀಗೆ, ವ್ಯಕ್ತಿಯೋರ್ವನ ದುಃಖ ತಳಮಳ ಮತ್ತು ಬದುಕಿನ ಚಿತ್ರಣಗಳನ್ನು ಈ ಕೃತಿಯು ಬಿತ್ತುತ್ತದೆ. ಮನುಷ್ಯನ ಅದಮ್ಯ ಹಂಬಲಕ್ಕೆ ಪ್ರಕೃತಿಯೂ ನಿರ್ದಯ ಉದಾಸೀನತೆಯನ್ನು ತೋರುತ್ತದೆ. ಬದುಕಿಗೊಂದು ಅರ್ಥವಿಲ್ಲ ನಿಯಮವಿಲ್ಲದಿರುವ ಕಾರಣದಿಂದಲೇ ತನಗೆ ಅನಿಸಿದಂತೆ ತೀವ್ರವಾಗಿ ಬದುಕಬೇಕು ಎನ್ನುತ್ತಾ ಸಮಾಜದ ತೋರಿಕೆಯ ರಿವಾಜುಗಳಿಗೆ ವಿರುದ್ದವಾಗಿ ಸಾಗುವ ಮರ್ಸೂ ಅನ್ಯನಾಗಿ, ಅಪರಿಚಿತನಾಗಿ ಕಾಣುತ್ತಾನೆ. ಮರ್ಸೂ ಎಷ್ಟೇ ನಿರ್ಲಿಪ್ತ-ನಿರ್ಭಾವುಕ ವ್ಯಕ್ತಿವಾದಿಯಾಗಿದ್ದರೂ ತನಗೆ ಅರಿವಿಲ್ಲದೆಯೇ ರೇಮೋನ ಸಂಬಂಧಗಳ ಗೋಜಲುಗಳಿಗೆ ಸಿಕ್ಕಿಬೀಳುವ- ಸಾಲಮಾನೋನ ಕ್ಷುಲ್ಲಕ ಪ್ರಲಾಪಗಳಿಗೆ ಸಾಕ್ಷಿಯಾಗುವ ಅಸಂಗತ ವ್ಯಂಗ್ಯವನ್ನು ಕಾದಂಬರಿ ತನ್ನ ಒಳ ವಿವರಗಳಲ್ಲಿ ಕಾಣಿಸುತ್ತದೆ.
‘ಅಪರಿಚಿತ’ ಕೃತಿಯ ವಿಮರ್ಶೆ
’ಅನ್’ ನೋ, ‘ಅಪರಿಚಿತ’ ನೋ
ಕರೋನಾ ಯುಗದ ನಂತರದ ದಿನಗಳಲ್ಲಿ ಅಲ್ಬರ್ಟ್ ಕಮೂನ ಕೃತಿಗಳ ಅನುವಾದ-ಚರ್ಚೆಗಳು ನಿಲ್ಲದಂತೆ ಮತ್ತೊಮ್ಮೆ ಬಲುವಾಗಿವೆ. ಮುಖ್ಯವಾಗಿ ಬಸೇಗ್'ತಿಯನ್ನು ಮನುಕುಲದ ರೋಗಗ್ರಸ್ತ ಸ್ಥಿತಿಯ ಪ್ರತಿಫಲನವೆಂಬಂತೆ ಪಂಚವೇ ಮತ್ತೊಮ್ಮೆ ಓದಿಕೊಂಡಿತು. ಈಗ ಈ ಹಿಂದೆ (1970) ಪಿ.ಎ.ಶಂಕರ್ 'ನ' ಎಂದು ಅನುವಾದಿಸಿದರು. ಇದೇ ಲೇಖಕನ ಸೇಂಜರ್'(1942) ಅಥವಾ ಔಟ್ಸೈಡರ್' ಎಂಬ ವಿಶ್ವ ಮಟ್ಟದ ಕಾದಂಬರಿಯನ್ನು ಅಮೇರಿಕಾದ ಪ್ರಕಾಶ್ ನಾಯಕ್, 'ಅಪರಿಚಿತ'(2021) ಹೆಸರಿನಲ್ಲಿ ಅನುವಾದಿಸಿದ್ದಾರೆ.
ಅಲ್ಜೀರ್ಸ್ ನಗರದಲ್ಲಿ ಮಾಮೂಲಿ ಗುಮಾಸ್ತನಾಗಿರುವ ಮರ್ಸೂನೆ ವಿಕ್ಷಿಪ್ತ ಕತೆಯನ್ನು ಒಣ ನಿರ್ಭಾವುಕತೆ, ನಗ್ನ-ನಿರಾಡಂಬರವಾದ ಗದ್ಯದಲ್ಲಿ ಕಾದಂಬರಿ ದ್ವೇಷ ನಿರೂಪಿಸುತ್ತದೆ. ಮರ್ಸೂನ ತಾಯಿ ವೃದ್ಧಾಶ್ರಮದಲ್ಲಿ ತೀರಿಕೊಂಡ ಸುದ್ದಿಯೊಂದಿಗೆ ಚಿಂತೆಯನ್ನು ಕಾದಂಬರಿ ಶುರುವಾದರೂ, ಮರ್ಸೂಗೆ ಅವಳು ಯಾವಾಗ ತೀರಿಕೊಂಡಳೆಂದು ಗೊತ್ತಿಲ್ಲ. ಸತ್ತವಳ ವಯಸ್ಸೆಂದು ತಿಳಿದಿಲ್ಲ, ಹೆತ್ತವಳ ಮುಖವನ್ನು ಕೊನೆಯದಾಗಿ ನೋಡಲೂ ಆಸೆಯಿಲ್ಲ. ಆಯಾಸ-ಅಘಾತಗಳಿಂದ ಬಸವಳಿದಿರುವ ಅವನು ಅಂತ್ಯಕ್ರಿಯೆಯ ಸಿದ್ಧತೆಗಳು ನಡೆಯುವಾಗ ಸಿಗರೇಟು ಸೇದಿ ನಿಸೂರಾಗುತ್ತಾನೆ. ಮರುದಿನ ಗೆಳತಿ ಮರಿಯಾಳೊಂದಿಗೆ ಸಮುದ್ರದಲ್ಲಿ ಈಜಿ, ಕಾಮಿಡಿ ಸಿನೆಮಾವೊಂದನ್ನು ನೋಡಿ ಚರಿತ್ರೆಯ ರಾತ್ರಿ ಅವಳೊಂದಿಗೆ ಮಲಗುತ್ತಾನೆ. ತಾಯಿಯ ಸಾವಿನ ಕರಾಳಗಳಿಗೆಗಳಲ್ಲೂ ಪುಸ್ತಕದ ನಿರ್ಲಿಪ್ತವಾಗಿರುವ ಅವನಿಗೆ ಮರಿಯಾಳೊಂದಿಗೆ ಮದುವೆಯಾಗುವುದೂ ಆಗದೇ ಯುದ್ಧಗಳ ಇರುವುದು ಹೆಚ್ಚಿನ ವ್ಯತ್ಯಾಸದ ಸಂಗತಿಗಳೇನಲ್ಲ. ಹಾಗೇ ಮೇಲಧಿಕಾರಿಯ ಸೂಚನೆಯಂತೆ ಮತ್ತು ಪ್ಯಾರಿಸಿನಲ್ಲಿ ಹೊಸಹುದ್ದೆಯನ್ನು ಪಡೆದು ಬದುಕನ್ನು ಬದಲಾಯಿಸಿಕೊಳ್ಳುವ ಉಮೇದಿಲ್ಲ. ಹೇಗಿದ್ದರೂ ಒಂದು ಬದುಕು ಇನ್ನೊಂದರಂತೆ ಚೆನ್ನಾಗಿರುತ್ತದೆ ಮತ್ತು ಯಾವುದರ ಅನಾಥ ಬಗ್ಗೆಯೂ ಅತೃಪ್ತಿ-ದುಃಖಗಳಿಲ್ಲ. ತಾಯಿಯ ಬಗ್ಗೆ ಅಮಾನುಷವಾಗಿ-ತನ್ನ ಭವಿಷ್ಯದ ಬಗ್ಗೆ ಅಸಂಗತವಾಗಿ ವರ್ತಿಸಿದರೂ ಮರ್ಸೂ ನೆರೆಮನೆಯ ಸಾಲಮಾನೋ, ಕಜ್ಜಿ, ಸ್ವಾತಂತ್ರ್ಯ ನಾಯಿಯೊಂದನ್ನು ಕಳೆದುಕೊಂಡು ಪರಿತಪಿಸುವುದನ್ನು ಕೇಳಿಸಿಕೊಳ್ಳುತ್ತಾನೆ. ರೇಮೋ ಎಂಬ ತಲೆಹಿಡುಕ ತನ್ನ ಅರಬ್ ಗೆಳತಿ ಮೋಸ ಮಾಡಿದಳೆಂದು ಅವಳೊಂದಿಗೆ ಜಗಳವಾಡುತ್ತಾನೆ. ಜಗಳದಲ್ಲಿ ರೇಮೋನ ಪರ ವಹಿಸುವ ಮರ್ಸೂ ಅರಬ್ ಹೆಂಗಸಿನ ಅಣ್ಣ ಜಗಳವಾಡಲು ಬಂದಾಗ ಸಮುದ್ರದ ದಂಡೆಯ ಉರಿಬಿಸಿಲಿಗೆ ರೋಸಿ ಅನಾಯಾಸವಾಗಿ ಗುಂಡು ಹಾರಿಸಿ ಜೈಲು ಸೇರುತ್ತಾನೆ. ತಾಯಿಯ ಸಾವಿನ ಬಗ್ಗೆ ನಿರ್ಭಾವುಕವಾಗಿರುವ ಮರ್ಸೂಗೆ ತಾನು ಮಾಡಿರುವ ಕೊಲೆಗೆ ಗಲ್ಲುಶಿಕ್ಷೆಯಾದರೂ ಪಶ್ಚಾತ್ತಾಪವಿಲ್ಲ.
ಮರ್ಸೂ ನೈತಿಕವಾಗಿ, ಸಾಮಾಜಿಕವಾಗಿ ಸ್ವ-ಪ್ರಜೆಗೆ ಅಂಟಿಕೊಂಡ, ಸಾಮಾಜಿಕ ಬದುಕಿನಲ್ಲಿ ಅಸಂಗತವಾಗಿ ಕಾಣುವ ತೀವ್ರ ವ್ಯಕ್ತಿವಾದಿ ಮೌಲ್ಯಗಳ ಪ್ರತಿನಿಧಿಯಾಗಿದ್ದಾನೆ. ಸಮಾಜದ ರೂಢಿಗತ ಆಚಾರ-ಮೌಲ್ಯ ವ್ಯವಸ್ಥೆಗಳಿಗೆ ಹೊರತಾಗಿರುವ ಅವನು ಒಳ್ಳೆಯವನೂ ಅಲ್ಲ ಕೆಟ್ಟವನೂ ಅಲ್ಲ. ಅವನು ಕಂಗೆಡುವುದು ಹೊಂಬಿಸಿಲಿಗೆ ಕಾತರಿಸುವುದು ಸಮುದ್ರದ ಏಕಾಂತಕ್ಕೆ, ಮಾರಿಯಾಳ ಮೋಹಕತೆಗೆ ಮಾತ್ರ, ಯಾವ ನಿಯತಿಗೂ ಒಳಪಟ್ಟು ಇಲ್ಲಿ ಬದುಕು ಸಾಗದಿರುವುದರಿಂದ ದೇವರು- ಧರ್ಮ, ಸಮಾಜದ ಕಟ್ಟುಪಾಡುಗಳಿಗೆ ಅರ್ಥವಿಲ್ಲ. ಪುರಾಣದ ಸಿಸಿಫಸ್‌ನಂತೆ ಜಾರುವ ಕಲ್ಲುಗಳನ್ನು ಕಲಿಸಿಕೊ ಗುಡ್ಡಕ್ಕೆ ಹೊರುತ್ತ ನಿಶ್ಚಲವಾಗಿ-ಯಾಂತ್ರಿಕವಾಗಿ ಬದುಕುತ್ತಿದ್ದರೂ ಅದರ ನಡುವೆಯೇ ಜೀವನದ ಕ್ಷಣಿಕ ಸುಖಗಳಷ್ಟನ್ನೇ ನೆಮ್ಮಿ ಬದುಕುವ ಮನುಷ್ಯನ ಅದಮ್ಯ ಹಂಬಲಕ್ಕೆ ಪ್ರಕೃತಿಯೂ ನಿರ್ದಯ ಉದಾಸೀನತೆಯನ್ನು ತೋರುತ್ತದೆ. ಬದುಕಿಗೊಂದು ಅರ್ಥವಿಲ್ಲ ನಿಯಮವಿಲ್ಲದಿರುವ ಕಾರಣದಿಂದಲೇ ತನಗೆ ಅನಿಸಿದಂತೆ ತೀವ್ರವಾಗಿ ಬದುಕಬೇಕು ಎನ್ನುತ್ತಾ ಸಮಾಜದ ತೋರಿಕೆಯ ರಿವಾಜುಗಳಿಗೆ ವಿರುದ್ಧವಾಗಿ ಸಾಗುವ ಮರ್ಸೂ ಅನ್ಯನಾಗಿ/ಅಪರಿಚಿತನಾಗಿ ಕಾಣುತ್ತಾನೆ. ಮರ್ಸೂ ಎಷ್ಟೇ ನಿರ್ಲಿಪ್ತ ನಿರ್ಭಾವುಕ ವ್ಯಕ್ತಿವಾದಿಯಾಗಿದ್ದರೂ ತನಗೆ ಅರಿವಿಲ್ಲದೆಯೇ ರೇಮೋನ ಸಂಬಂಧಗಳ ಗೋಜಲುಗಳಿಗೆ ತಾಲಿಬಾನ ಸಿಕ್ಕಿಬೀಳುವ-ಸಾಲಮಾನೋನ ಕುಲ್ಲಕ ಪ್ರಲಾಪಗಳಿಗೆ ಸಾಕ್ಷಿಯಾಗುವ ಅಸಂಗತ ವ್ಯಂಗ್ಯವನ್ನು ಕಾದಂಬರಿ ತನ್ನ ಒಳವಿವರಗಳಲ್ಲಿ ಕಾಣಿಸುತ್ತದೆ. ಎಲ್ಲರ ಸುಖದುಃಖಗಳಿಗೆ ಪರಕೀಯನಾಗಿರುವ ಮನುಷ್ಯನೊಬ್ಬನನ್ನು ಇಪ್ಪತ್ತೊಂದನೇ ಶತಮಾನದಲ್ಲಿ ಹೇಗೆ ಗ್ರಹಿಸಬೇಕು? ಪ್ರಕಾಶ್ ನಾಯಕರ ಸಹಜ ಗದ್ಯಾನುವಾದ ಹಲವು ತಲೆಮಾರುಗಳನ್ನು ಪ್ರಭಾವಿಸಿದ್ದ ಕಮೂನ ಕೃತಿಯನ್ನು ‘ಅನ್ಯ’ ನೆನ್ನಬೇಕೋ 'ಅಪರಿಚಿತ'ನಾಗಿ ಕಾಣಬೇಕೋ ಎಂಬ ಪ್ರಶ್ನೆಯನ್ನು ಕೇಳುವಂತಿದೆ.
(ಕೃಪೆ: ಹೊಸಮನುಷ್ಯ, ಬರಹ : ಎಸ್. ಸಿರಾಜ್ ಅಹಮದ್)
©2024 Book Brahma Private Limited.