ಮೃಗತೃಷ್ಣ

Author : ಕೇಶವರೆಡ್ಡಿ ಹಂದ್ರಾಳ

Pages 155

₹ 150.00




Year of Publication: 2022
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಕಥೆ-ಕಾದಂಬರಿ ರಚನೆಯಲ್ಲಿ ತಮ್ಮದೇ ಛಾಪು ಮೂಡಿಸಿ ಓದುಗರ ವರ್ಗವನ್ನು ಸೃಷ್ಟಿಸಿಕೊಂಡಿರುವ ಲೇಖಕ ಕೇಶವರೆಡ್ಡಿ ಹಂದ್ರಾಳ್ ಅವರ ಹೊಸ ಕಾದಂಬರಿ-ಮೃಗತೃಷ್ಣ. ವಸ್ತು ವೈವಿಧ್ಯತೆಯಿಂದ ಕೂಡಿದೆ. ನಿರೂಪಣಾ ಶೈಲಿಯು ಆಕರ್ಷಕವಾಗಿದೆ. ಪಾತ್ರಗಳ ಸೃಷ್ಟಿ ಹಾಗೂ ಸನ್ನಿವೇಶಗಳ ಕಲಾತ್ಮಕ ಜೋಡಣೆಯು ಹೆಚ್ಚು ಪರಿಣಾಮಕಾರಿಯಾಗಿದೆ. ಸಂಭಾಷಣೆಯು ಅರ್ಥವತ್ತಾಗಿದೆ. ಈ ಎಲ್ಲ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.

About the Author

ಕೇಶವರೆಡ್ಡಿ ಹಂದ್ರಾಳ
(22 July 1957)

ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾದ ಕೇಶವರೆಡ್ಡಿ ಹಂದ್ರಾಳ ಅವರು 22-07-1957 ರಲ್ಲಿ ಮಧುಗಿರಿ ತಾಲೂಕಿನ ಹಂದ್ರಾಳದಲ್ಲಿ ಜನಿಸಿದರು. ತಂದೆ ತಾಯಿ ಇಬ್ಬರೂ ಅನಕ್ಷರಸ್ಥರು . ಕೃಷಿ ಕೆಲಸಗಳನ್ನು ಮಾಡಿಕೊಂಡೇ ಹಂದ್ರಾಳದ ಪ್ರೈಮರಿ ಸ್ಕೂಲು , ಬ್ಯಾಲ್ಯದ ಮಿಡ್ಲಿಸ್ಕೂಲು ಪೂರೈಸಿದ್ದು . ತಾತ ನರಸಿಂಹರೆಡ್ಡಿ ಆಂಧ್ರದ ಅನಂತಪುರ ಜಿಲ್ಲೆಯ ಊರೊಂದರ ಜಮೀನುದಾರ . ಕಳೆದ ಶತಮಾನದ ಇಪ್ಪತ್ತರ ದಶಕದಲ್ಲಿ ಆ ಸೀಮೆಯ ಶೋಷಕ ಬ್ರಿಟಿಷ್ ಕಲೆಕ್ಟರ್ ನನ್ನು ಖೂನಿ ಮಾಡಿ ರಾತ್ರೋರಾತ್ರಿ ಕರ್ನಾಟಕದ ಕಡೆ ಪ್ರಯಾಣ .  ಕಾಪು ರೆಡ್ಡಿಯಾಗಿದ್ದ ತಾತ ಮದುವೆಯಾಗಿದ್ದು ಕಮ್ಮ ಜಾತಿಯ ಅಜ್ಜಿಯನ್ನು . 1947 ...

READ MORE

Related Books