ಷಾಕ್ಮೋರಾ

Author : ಯಂಡಮೂರಿ ವೀರೇಂದ್ರನಾಥ್

₹ 65.00




Published by: ಸುಧಾ ಎಂಟರ್‌ಪ್ರೈಸಸ್

Synopsys

ಲೇಖಕ ಯಂಡಮೂರಿ ವೀರೇಂದ್ರನಾಥ ಅವರ ಕಾದಂಬರಿ ಷಾಕ್ಮೋರಾ. 

ಮನುಷ್ಯರಲ್ಲಿ ಆಸ್ತಿಕರೂ ಇರುತ್ತಾರೆ ನಾಸ್ತಿಕರು ಕೂಡ.. ಕಟ್ಟಾ ಆಸ್ತಿಕರು ಎಲ್ಲ ಕಷ್ಟ ಸುಖಗಳಿಗೂ ದೇವರನ್ನೇ ಕಾರಣ ಮಾಡುತ್ತಾ, ದೇವರನ್ನೇ ನಂಬುತ್ತಾ ಕೈಕಟ್ಟಿ ಕೂಡುತ್ತಾರೆ. ಕಷ್ಟ ಕೊಟ್ಟ ದೇವರೇ ಪರಿಹರಿಸುತ್ತಾನೆ ಎಂದು ಯಾವುದೇ ಪ್ರಯತ್ನ ಮಾಡದೇ, ಎಲ್ಲಾ ಭಾರವನ್ನು ಕಾಣದ ದೇವರ ಮೇಲೆ ಹಾಕುತ್ತಾರೆ. ಇನ್ನೂ ಕೆಲವರು ಆಸ್ತಿಕರಾದರೂ, ದೇವರ ಬಗ್ಗೆ ನಂಬಿಕೆ ಭಕ್ತಿ ಇದ್ದರೂ, ಸ್ವಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು, ತಮ್ಮ ಶಕ್ತಿ ಮೀರಿ ಕಷ್ಟ ಪರಿಹರಿಸಲು ಶ್ರಮಿಸುವರು. ಇನ್ನು ನಾಸ್ತಿಕರಲ್ಲೂ ಎರಡು ವಿಧ, ದೇವರನ್ನು ನಂಬುವುದಿಲ್ಲ ಎಂದ ತಕ್ಷಣ ಕ್ಷುದ್ರ ಶಕ್ತಿಗಳನ್ನು ನಂಬುತ್ತಾರೆ, ಅಥವಾ ನಂಬಬೇಕು ಎಂಬ ನಿಯಮವೇನೂ ಇಲ್ಲವಲ್ಲ. ಕೆಲವು ನಾಸ್ತಿಕರು ದೇವರನ್ನು ನಂಬದೇ, ತಾವು ನಡೆದಂತೆ, ಅಥವಾ ವಿಜ್ಞಾನದ ಮೇಲೆ ನಂಬಿಕೆ ಇಟ್ಟು, ನಡೆಯುತ್ತಾರೆ. ಇನ್ನೂ ಕೆಲವರು ದೇವರ ಬಗ್ಗೆ ನಂಬಿಕೆ ಇಲ್ಲದೇ, ವಿಜ್ಞಾನದ ಬಗ್ಗೆ ಯೋಚಿಸುವ ಗೋಜಿಗೆ ಹೋಗದೆ, ಕಷ್ಟಕ್ಕೆ, ತೊಂದರೆಗೆ ಕಾರಣವೇನೂ, ಪರಿಹಾರವೇನು ಎಂದು ಯೋಚಿಸದೇ, ಕ್ಷುದ್ರ ಶಕ್ತಿಗಳ ಮೇಲೆ ನಂಬಿಕೆ ಇಟ್ಟು ಮಾಟ ಮಂತ್ರಗಳ ಮೊರೆ ಹೋಗುವವರು. ಇಂತಹ ವಿಭಿನ್ನ ಪಾತ್ರಗಳನ್ನೊಳಗೊಂಡ ಪುಟ್ಟ ಕಾದಂಬರಿ ಯಂಡಮೂರಿ ವಿರೇಂದ್ರನಾಥ್ ಅವರ “ಷಾಕ್ಮೋರಾ” ಈ ಕಥೆಯಲ್ಲಿ ಬರುವ ಪುಟ್ಟ ಮಗು ಆರತಿಯ ಮೇಲೆ ನಡೆಯುವ ಹಲ್ಲೆ, ಆರೋಗ್ಯದ ಏರುಪೇರು, ಅದರಿಂದ ಮನೆಯವರಿಗೆ ಆದ ನೋವು ಹಿಂಸೆ, ಇತ್ಯಾದಿಗಳ ಸುತ್ತಾ ತುಂಬಾ ವಿಭಿನ್ನವಾಗಿ ಅನ್ನುವುದಕ್ಕಿಂತ ಓದುಗರೇ ಗೊಂದಲಗೊಂಡು ಇದೇನು ನಾವಂದುಕೊಂಡದ್ದೇ ಒಂದು ಆದರೆ ಕಥೆಯಲ್ಲಿ ಮುಂದೆ ನಡೆಯುತ್ತಿರುವುದೇ ಮತ್ತೊಂದು ಎಂದು ಒದ್ದಾಡುವಂತೆ ಮಾಡುತ್ತದೆ. ಆದರೆ ಈ ಪುಸ್ತಕದ ಹೆಸರು ಮತ್ತು ಆರಂಭದ ಕಥೆ ಕೇವಲ ಕ್ಷುದ್ರವಿದ್ಯೆಯನ್ನು ಮುಖ್ಯ ಅಂಶವಾಗಿದೆಯೆಂದು ಎನಿಸಿದರೂ ಕಥೆಯ ಆಳದಲ್ಲಿ ಬೇರೆಯೇ ಅಂಶವಿದೆಯೆಂದು ಓದುಗರಿಗೆ ಮುಂದೆ ಮುಂದೆ ತಿಳಿಯುತ್ತದೆ.

About the Author

ಯಂಡಮೂರಿ ವೀರೇಂದ್ರನಾಥ್

ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...

READ MORE

Related Books