ಪುನರ್ವಸು (ಕಾದಂಬರಿ)

Author : ಗಜಾನನ ಶರ್ಮ

₹ 450.00




Year of Publication: 2019
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 0802661 7100

Synopsys

ಲೇಖಕ ಡಾ. ಗಜಾನನ ಶರ್ಮ ಅವರ ಕಾದಂಬರಿ-ಪುನರ್ವಸು. ಭಾರಂಗಿ ಎಂಬುದು ಲೇಖಕರ ಊರು. ಲಿಂಗನಮಕ್ಕಿಯಲ್ಲಿ ಶರಾವತಿಗೆ ಅಣೆಕಟ್ಟು ಕಟ್ಟುವಾಗ ಮುಳುಗಿದ ಭಾರಂಗಿ ಊರವರ ಬದುಕಿನ ಚಿತ್ರಣವನ್ನು ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಶರಾವತಿಯ ಹಿನ್ನೀರನ್ನು ಊರವರು ಶರಾವತಿ ಎಂದು ಕರೆಯುವುದಿಲ್ಲ ಬದಲಾಗಿ ‘ಮುಳುಗಡೆ ಹೊಳೆ’ ಎಂದೇ ಕರೆಯುವುದು. ಪ್ರಾಯಶಃ ತಮ್ಮವರ ಬದುಕನ್ನು ಮುಳುಗಿಸಿದ ಸಾತ್ತ್ವಿಕ ಸಿಟ್ಟು, ಅದಕ್ಕೆಂದೇ ಊರವರು ಹೀಗೆ ಮಾತನಾಡುತ್ತಾರೆ ಎಂದು ಲೇಖಕರು ಅಭಿಪ್ರಾಯಪಡುತ್ತಾರೆ. ಆಣೆಕಟ್ಟು ನಿರ್ಮಾಣ ನಂತರ ಬೇರೊಬ್ಬರು ನೀರಿನ ಲಾಭ ಪಡೆಯುತ್ತಾರೆ. ಆದರೆ, ಅದಕ್ಕೂ ಮೊದಲು ರೈತರ ಜಮೀನು, ಅವರ ಅಸ್ತಿತ್ವ ಮುಳುಗಡೆಯಾಗುತ್ತದೆ. ಒಬ್ಬರ ತ್ಯಾಗ, ಇನ್ನೊಬ್ಬರ ಭೋಗ ಎಂಬುದು ‘ಪುನರ್ವಸು’ ಕಾದಂಬರಿಯ ವಸ್ತು.

ಪ್ರದೇಶ ಮುಳುಗಡೆಯು ಲೇಖಕರಿಗೆ ಪ್ರಗತಿಯೋ? ಪರಿಸರವೋ? ಕೆಲವರ ಮುಳುಗಡೆಯೋ? ಹಲವರ ಉನ್ನತಿಯೋ? ಎಂಬ ಸಂಶಯ ಕಾಡಿದ್ದು ಕಾದಂಬರಿ ರಚನೆಗೆ ಪ್ರೇರಣೆ ಯಾಗಿದೆ. ಗೊತ್ತಿಲ್ಲದ ಕಾಲದಿಂದ ಕಟ್ಟಿಕೊಂಡು ಬಂದಿದ್ದ ಬದುಕು ಕಣ್ಣೆದುರೇ ಕಣ್ಮರೆಯಾಗುವಾಗಿನ ತಲ್ಲಣಗಳನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ. ಇದು ಕೇವಲ ಮುಳುಗಡೆಯ ಕಥೆಯಲ್ಲ; ಬದುಕು ಕಳೆದುಕೊಂಡ ಒಂದಿಷ್ಟು ಜನರ ವ್ಯಥೆಯೂ ಅಲ್ಲ. ಬದಲಿಗೆ ವಸುಂಧರೆಯ ವಸುವನ್ನು ಪುನಃ ಪುನಃ ಹೀರಲು ಮುನ್ನುಗ್ಗುವ ಮನುಷ್ಯನ ಕಥೆ. ಕೊನೆಗೆ ಕೆಲವರ ಕತ್ತಲು ಹಲವರಿಗೆ ಬೆಳಕಾದ ‘ಪುನರ್ವಸು'ವನ್ನು ಒಪ್ಪಿಕೊಳ್ಳುವುದೇ ಅನಿವಾರ್ಯತೆಯೋ, ಪ್ರಾಯೋಗಿಕತೆಯೋ ಆಗಿ ಸಾಗುವ ನಮ್ಮ ಮನೋಮಂಥನದ ಕಥೆ ಎಂದು ಲೇಖಕರು ಹೇಳಿದ್ದಾರೆ. 

About the Author

ಗಜಾನನ ಶರ್ಮ

ಡಾ| ಗಜಾನನ ಶರ್ಮಾರವರು ಪ್ರಸಿದ್ಧ ನಟ, ನಾಟಕಕಾರ, ನಿರ್ದೇಶಕ ಮತ್ತು ಸಾಹಿತಿಯು ಹೌದು. ವೃತ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿದ್ದರು ಕನ್ನಡ ಸಾಹಿತ್ಯದ ಹಲವಾರು ರಂಗಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ’ಪುನರ್ವಸು’ ಇವರ ಪ್ರಮುಖ ಕಾದಂಬರಿ.  'ನಾಣಿ ಭಟ್ಟನ ಸ್ವರ್ಗದ ಕನಸು', 'ಗೊಂಬೆ ರಾವಣ', ಆಗ ಮತ್ತು ಸುಂದರಿ', 'ಹಂಚಿನಮನೆ ಪರಸಪ್ಪ', 'ಪುಸ್ತಕ ಪಾಂಡಿತ್ಯ' ಮುಂತಾದ ಹತ್ತಕ್ಕೂ ಹೆಚ್ಚು ಮಕ್ಕಳ ನಾಟಕ, 'ಕನ್ನಂಬಾಡಿಯ ಕಟ್ಟದಿದ್ದರೆ', 'ದ್ವಂದ್ವ ದ್ವಾಪರ', 'ಬೆಳ್ಳಿಬೆಳಕಿನ ಹಿಂದೆ' ಮುಂತಾದ ನಾಟಕಗಳನ್ನು ರಚಿಸಿದ್ದಾರೆ. ವಿಶ್ವೇಶ್ವರಯ್ಯನವರ ವೃತ್ತಿ ಜೀವನದ ಆತ್ಮಕಥೆಯನ್ನು ಕನ್ನಡಕ್ಕೆ 'ನನ್ನ ...

READ MORE

Related Books