`ರುಧಿರಾಭಿಷೇಕ' ಬಾಬು ಅವರ ಮೂರನೇ ಕಾದಂಬರಿ. ಇದು ಮೊದಲು 'ಮಂಗಳ'ದಲ್ಲಿ ಕಿರು ರೂಪದಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು.
ಭಾರತದ ಕ್ರಾಂತಿಕಾರಿ ಚರಿತ್ರೆಯ ಒಂದು ಅಧ್ಯಾಯದ ಕಥಾವಸ್ತು ಇದು. ಐದು ಮುಖ್ಯ ಭಾಗಗಳಿದ್ದು, ಅವುಗಳಿಗೆ ಉಗಮ, ಉದ್ದೀಪನ, ಉದ್ಯೋಷ, ಉತ್ಕಾಂತಿ, ಉರ್ಗ ಎಂಬ ಶೀರ್ಷಿಕೆಗಳಿವೆ. ತುಸು ಮಟ್ಟಿಗೆ 19ನೇ ಶತಮಾನದ ಆರಂಭ ಕಾಲದ ಕಥೆ ಎನಿಸುತ್ತದೆ. ಇಡೀ ಕಾದಂಬರಿಯಲ್ಲಿ 36 ಅಧ್ಯಾಯಗಳಿವೆ. ಜತೀನ್ ಎಂಬ ಬಂಗಾಳದ ಕ್ರಾಂತಿವೀರನ ಬಾಲ್ಯ, ಯೌವ್ವನ ಮತ್ತು ಸಂಗಡಿಗರು ಕೈಗೊಂಡ ಸಾಹಸಗಳು ಇದರ ಮುಖ್ಯ ಕಥಾವಸ್ತು.
ಸಾಹಿತ್ಯ, ಪತ್ರಿಕೋದ್ಯಮ ಎರಡು ಕ್ಷೇತ್ರಗಳಲ್ಲೂ ಚಿರಪರಿಚಿತರಾದ ಬಾಬು ಕೃಷ್ಣಮೂರ್ತಿ ಹುಟ್ಟಿದ್ದು ಬೆಂಗಳೂರು. ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿ ಅತೀವ ಆಸಕ್ತಿ. ಅವರ ಸಂಪಾದಕತ್ವದಲ್ಲಿ ಬಾಲಮಂಗಳ (ಪಾಕ್ಷಿಕ), ಬಾಲಮಂಗಳ ಚಿತ್ರಕಥಾ (ಮಕ್ಕಳ ವ್ಯಂಗ್ಯ ಚಿತ್ರ ಪಾಕ್ಷಿಕ), ಗಿಳಿವಿಂಡು (ಶಿಶು ಪಾಕ್ಷಿಕ ಪತ್ರಿಕೆ) ಪ್ರಕಟವಾಗಿವೆ. ಇವರು ರಚಿಸಿದ ಸ್ವಾತಂತ್ರ್ಯವೀರ ಚಂದ್ರಶೇಖರ ಆಜಾದ್ ಕುರಿತು ಆರು ವರ್ಷ ಕಾಲ ಸಂಶೋಧನೆ, ಸ್ಥಳವೀಕ್ಷಣೆ ನಡೆಸಿ ರಚಿಸಿದ ಕೃತಿ ‘ಅಜೇಯ’. ಅವರ ಪ್ರಮುಖ ಕೃತಿಗಳು - ಅಜೇಯ (1974), ಸಿಡಿಮದ್ದು ನೆತ್ತರು ನೇಣುಗಂಬ (1984), ಅದಮ್ಯ (1984), ರುಧಿರಾಭಿಷೇಕ (2005), ಡಾ. ಸಿ.ಜಿ. ಶಾಸ್ತಿಒಂದು ಯಶೋಗಾಥೆ (2007), 1857-ಭಾರತದ ಸ್ವಾತಂತ್ರ್ಯ ಸಂಗ್ರಾಮ (2007), ...
READ MORE