ಗರಡಿಯ ಗಂಡಾಳಿನ ಕಥೆಯನ್ನು ಎತ್ತಿಕೊಂಡು ಕೆ.ವಿ.ಅಯ್ಯರ್ ಅವರು ಬರೆದ ಕಾದಂಬರಿ-ದೆಯ್ಯದ ಮನೆ. ಹಳೆಯ ಕಾಲದ ಗರಡಿ ಮನೆಯವರಿಂದ ಸ್ಫೂರ್ತಿಗೊಂಡು, ಹಳೆಯ ಸಂಪ್ರದಾಯದ ಮಹತ್ವವವನ್ನು ಹೆಚ್ಚಿಸುವ ಅರ್ಥವಂತಿಕೆ ಇಲ್ಲಿದೆ. ಹಳೆಯ ಬೆಂಗಳೂರು, ಕಾಮನ ಹುಣ್ಣಿಮೆ, ದೆಯ್ಯದ ಮನೆ ಆಷಾಡ ಬಹುಳ ಅಮಾವಾಸ್ಯೆ ಹೀಗೆ ನಾಲ್ಕು ಶೀರ್ಷಿಕೆಯಡಿ ಈ ಚಿಕ್ಕ ಕಾದಂಬರಿಯ ಹಂದರವನ್ನು ಹೆಣೆಯಲಾಗಿದೆ. ಸ್ವತಃ ಲೇಖಕರು ದೈಹಿಕ ಶಿಕ್ಷಕರಾಗಿದ್ದು, ಗರಡಿಯ ಮನೆ ಹಾಗೂ ಅದರ ಮಹತ್ವವನ್ನು ಸೊಗಸಾಗಿ ಬಣ್ಣಿಸಿದ್ದು ಸಹ ಇಲ್ಲಿಯ ವೈಶಿಷ್ಟ್ಯ.
ಕೆ. ವಿ. ಅಯ್ಯರ್ ಜನಿಸಿದ್ದು ಜನವರಿ 8, 1894ರಲ್ಲಿ. ಮೂಲತಃ ಕೋಲಾರ ಜಿಲ್ಲೆಯ ದೇವಸಮುದ್ರದವರು. ಬೆಂಗಳೂರಿನ ಕೋಟೆ ಬಳಿಯ ಎ.ವಿ.ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ, ವೆಸ್ಲಿಯನ್ ಮಿಷನ್ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದರು. ಕಡು ಬಡತನದ ಮಧ್ಯೆ ಪದವಿ ಪಡೆಯಲಿಲ್ಲ. ಆದರೆ, ಅಮೆರಿಕದ PHYSICAL CULTURE NATUROPATHYಯ ಅಕಾರ ಪತ್ರ ಪಡೆದು ತಾವೇ ಪ್ರೊಫೆಸರ್ ಎಂದು ಕರೆದುಕೊಂಡರು. ಛಾಯಾಚಿತ್ರಗ್ರಾಹಕರು. ರೇಡಿಯೋ ರಿಪೇರಿ, ಸ್ವರಲೇಖನ ಯಂತ್ರ ರಿಪೇರಿ ನಿಪುಣತೆ.ಇತ್ತು. ಉತ್ತಮ ವ್ಯಾಯಾಮ ಶಿಕ್ಷಕರು. ಮಹಾರಾಜ ಕೃಷ್ಣರಾಜ ಒಡೆಯರು ಇವರ ವ್ಯಾಯಾಮ ಕಲೆಗೆ ಮಾರು ಹೋಗಿದ್ದರು. ಕೈಲಾಸಂ ಅವರು ಇವರಿಗೆ ಸಾಹಿತ್ಯದ ಗೀಳು ಹಚ್ಚಿದರು. ರೀಡರ್‍ಸ್ ಡೈಜಿಸ್ಟ್ ...
READ MORE