ತತ್ತ್ವಮಸಿ ರಮ್ಯ ಎಸ್. ಅವರ ಕೃತಿ. ಈ ಕೃತಿಯಲ್ಲಿ ಆಶ್ರಿತ ಒಬ್ಬ ಲವಲವಿಕೆಯ ಹುಡುಗಿ. ಹೆಣ್ಣಿಗೆ ಕಟ್ಟುಪಾಡುಗಳು ಇರಬೇಕು ಎನ್ನುವ ತಾಯಿಯ ನಿಯಮಗಳನ್ನು ವಿರೋಧಿಸುತ್ತಾ, ಹೆಣ್ಣು ಗಂಡು ಇಬ್ಬರೂ ಸಮಾನರು ಎಂದು ಪ್ರತಿಪಾದಿಸುವ ಮುಗ್ಧೆ. ಪುಟ್ಟ ಪರಿವಾರದ ಕಣ್ಮಣಿ, ಗೆಳೆಯರ ಮೆಚ್ಚಿನ ಒಡನಾಡಿ. ಯಾರಿಗೂ ಕೇಡು ಬಯಸದೆ, ಎಲ್ಲರಿಗೂ ಸಹಾಯ ಮಾಡುತ್ತಾ, ಜೀವನೋತ್ಸಾಹ ತುಂಬಿಕೊಂಡು ಮುನ್ನಡೆಯುವ ಸಾಹಸಿ. ಜೈವಿಕ ತಂತ್ರಜ್ಞಾನದ ಕಲಿಕೆಯ ಮೂಲಕ ರೈತರಿಗೆ ಉಪಯುಕ್ತವಾಗುವ ಸಂಶೋಧನೆಯಲ್ಲಿ ತೊಡಗಬೇಕು ಎಂದು ನಿಶ್ಚಿತ ಗುರಿ ಹೊಂದಿರುತ್ತಾಳೆ. ಪ್ರತಿಷ್ಠಿತ ವಿಜ್ಞಾನ ಸಂಸ್ಥೆಯಲ್ಲಿ ಸಂಶೋಧಕಿಯಾಗಿ ವೃತ್ತಿ ಜೀವನ ಆರಂಭಿಸುತ್ತಾಳೆ. ಅಲ್ಲಿಂದ ಶುರುವಾಗುವ ಹುಡುಕಾಟದ ಫಲಿತಾಂಶ "ತತ್ತ್ವಮಸಿ" ಓದಿ ತಿಳಿಯಬೇಕು. ಆಶ್ರಿತ ಅಂದುಕೊಂಡ ಗುರಿ ತಲುಪುವಳೇ? ಹೆಣ್ಣು ಗಂಡಿಗೆ ಸಮಾನವಾಗಿ ನಡೆದುಕೊಳ್ಳಲು ಸಾಧ್ಯವೇ? ವೃತ್ತಿ ಮತ್ತು ಜೀವನದಲ್ಲಿ ಹೆಣ್ಣು ಗಂಡಿನ ಮಧ್ಯೆ ತಾರತಮ್ಯ ಇರುವುದಿಲ್ಲವೇ? ಪ್ರಶ್ನೆಗಳಿಗೆ ಉತ್ತರವೇ "ತತ್ತ್ವಮಸಿ"