‘ಅವಸಾನ’ ಕಾದಂಬರಿಯ ಕಥಾವಸ್ತು, ಪಂಢರಾಪುರ- ಕಾಮಾಣಪುರಗಳನ್ನು ಒಳಗೊಂಡಿದೆ. ಸಹನಾ ವಿಜಯಕುಮಾರ್ ಅವರ ಮೂರನೇ ಕಾದಂಬರಿ. ತಮ್ಮ ವಿಭಿನ್ನ ನಿರೂಪಣಾ ಮತ್ತು ವ್ಯಾಪಕ ಅಧ್ಯಯನ ಕಾರ್ಯ ಕ್ಷೇತ್ರ ನಡೆಸಿ ಲೇಖಕಿ ಈ ಕೃತಿ ರಚಿಸಿದ್ದು ವಿಭಿನ್ನ ಕಥಾ ಹಂದರವಿದೆ. “ಕಾಮಾಠಿಪುರದ ಅಂತರಂಗವನ್ನು ಇಷ್ಟು ಸೃಜನಾತ್ಮಕವಾಗಿ ಬೇರೆ ಯಾರೂ ಬರೆದದ್ದನ್ನು ನಾನು ಓದಿಲ್ಲ” ಎಂದು ಎಸ್. ಎಲ್. ಭೈರಪ್ಪ ಅವರು ಬೆನ್ನುಡಿಯಲ್ಲಿ ಬರೆದಿದ್ದಾರೆ.
ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಅವರು ಮೂಲತಃ ಮೈಸೂರಿನವರು. ಓದಿನ ಹವ್ಯಾಸದೊಂದಿಗೆ ಕಾದಂಬರಿ ರಚನೆಯಲ್ಲಿ ಮೇರು ಗೈ ಸಾಧಿಸಿದ್ದಾರೆ. ಅವರ ‘ಕಶೀರ’ ಕೃತಿ ಐದು ಮುದ್ರಣಗಳನ್ನು ಕಂಡು ಜನ ಮೆಚ್ಚಿಗೆಗೆ ಪಾತ್ರವಾಗಿದೆ. ಮೊದಲ ಕಾದಂಬರಿ - ‘ಕ್ಷಮೆ’. ಮೂರನೇ ಕಾದಂಬರಿ ’ಅವಸಾನ’. ಅವರ ಸಾಹಿತ್ಯ ಸೇವೆಗೆ ‘ಚಡಗ’ ಪ್ರಶಸ್ತಿ ದೊರೆತಿದೆ. ...
READ MORE