ಲೇಖಕ ಕರಣಂ ಪವನ ಪ್ರಸಾದ ವರ ಕಾದಂಬರಿ-ರಾಯಕೊಂಡ. ಆಂಧ್ರ- ಕರ್ನಾಟಕ ವ್ಯಾಪ್ತಿಯ ಕಥೆ ಇದು. ಬ್ರಾಹ್ಮಣ ಕುಟುಂಬವೊಂದರ ತಲೆಮಾರುಗಳ ಕಥೆಯನ್ನು ಒಳಗೊಂಡಿದೆ. ಆಂಧ್ರದ ಗಡಿಯ ಊರಾದ್ದರಿಂದ ತೆಲುಗು ಸಂಭಾಷಣೆಗಳು ಹೇರಳವಾಗಿವೆ. ಆ ಗಡಿಯ ಬ್ರಾಹ್ಮಣರ ನಡಾವಳಿಗಳನ್ನು ಸಮರ್ಥವಾಗಿ ಬಿಂಬಿಸಲಾಗಿದೆ.
ರಂಗನಿರ್ದೇಶಕ, ನಾಟಕಕಾರ ಕರಣಂ ಪವನ್ ಪ್ರಸಾದ್ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ವಿಜ್ಞಾನ ಪದವೀಧರರು. ವೃತ್ತಿಯಿಂದ ಬಳಕೆದಾರ ಇಂಟರ್ಫೇಸ್ ಡಿಸೈನರ್ ಆಗಿದ್ದು, ಸಂಶೋಧನೆ, ಸಾಹಿತ್ಯ ಅಧ್ಯಯನ ಬರೆಹ ಇವರ ಹವ್ಯಾಸ. ನಾಟಕಗಳ ರಚನೆ, ನಿರ್ದೇಶನ ಆಸಕ್ತಿಯ ಕ್ಷೇತ್ರಗಳು. ಕೃತಿಗಳು: ನನ್ನಿ (ಕಾದಂಬರಿ) ಗ್ರಸ್ತ (ಕಾದಂಬರಿ), ಪುರಹರ (ನಾಟಕ), ಕರ್ಮ (ಕಾದಂಬರಿ) ...
READ MORE