ಲೇಖಕಿ ಶೈಲಜಾ ಹಾಸನ ಅವರ ಕಾದಂಬರಿ ಅಂತರ. ಈ ಕಾದಂಬರಿಯು ಹೆಣ್ಣಿನ ನೋವು, ಹತಾಶೆ, ತುಮುಲ, ದ್ವಂದ್ವ, ಮನಸ್ಸಿನ ತಳಮಳ ಪರಿಪಕ್ವತೆಯನ್ನು ಒಳಗೊಮಡಿದ್ದು, ಅಮ್ಮ ಮಗಳ ಮಧುರ ಬಾಂಧವ್ಯ, ಮಗಳ ದಿಟ್ಟತನ, ನಿರ್ಧಾರ ಇವೆಲ್ಲವೂ ಒಳಗೊಂಡಂತೆ ಇರುವ ವೈಚರಿಕ ಕಾದಂಬರಿಯಲ್ಲಿ ಲೇಖಕಿಯ ಪ್ರತಿಭೆ ಅನಾವರಣಗೊಂಡಿದೆ.
ಕನ್ನಡದ ಪ್ರಮುಖ ಕಾದಂಬರಿಗಾರ್ತಿ ಎನ್. ಶೈಲಜಾ ಮೂಲತಃ ಹಾಸನದವರು. ಅವರ ಅನೇಕ ಕಾದಂಬರಿಗಳು ಸುಧಾ, ತರಂಗ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿ ಓದುಗರನ್ನು ತಲುಪಿ ಅಪಾರ ಮೆಚ್ಚುಗೆ ಪಡೆದಿವೆ. ಎಂ.ಎ. ಬಿಎಡ್.ಪದವಿ ಪಡೆದ ಇವರು ಶಾಂತಿಗ್ರಾಮ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಥಾ ಸಂಕಲನ,ಕಾದಂಬರಿ,ಲೇಖನಗಳ ಸಂಕಲನ,ಕವನ ಸಂಕಲನ ,ಪ್ರಬಂಧ ಸಂಕಲನ ಹೀಗೆ ಒಟ್ಟು 20 ಕೃತಿಗಳು ಪುಸ್ತಕ ರೂಪದಲ್ಲಿ ಹೊರಬಂದಿದೆ.ಅನೇಕ ಪ್ರಶಸ್ತಿ ಪುರಸ್ಕಾರಗಳು ಈ ಕೃತಿಗಳಿಗೆ ಲಭಿಸಿದೆ.ಇವರ ಸಾಹಿತ್ಯ ಸಮಾಜಮುಖಿಯಾಗಿದ್ದು, ಸಾಮಾಜಿಕ ಸಮಸ್ಯೆಗಳಾದ ವೃದ್ಯಾಪ್ಯ, ವೃದ್ಧಾಶ್ರಮ, ರೈತರ ಆತ್ಮಹತ್ಯೆ, ಅದಕ್ಕೆ ಪರಿಹಾರ,ಸಾವಯುವ ಕೃಷಿ ,ಅದರ ಮಹತ್ವ,ಶಿಕ್ಷಣದ ಜೊತೆಗೆ ವೃತ್ತಿ ಕೌಶಲ ಹದಿಹರೆಯದ ಮಕ್ಕಳ ...
READ MORE