ಜಾನಪದ ತಜ್ಞ, ನಾಡೋಜ ನಾಗೇಗೌಡ ಎಚ್.ಎಲ್. ಅವರ ಪ್ರಸಿದ್ಧ ಕಾದಂಬರಿ ದೊಡ್ಡಮನೆ. ಬಯಲು ಸೀಮೆಯ ರೈತಾಪಿ ವರ್ಗದ ಜನರ ಬವಣೆಗಳನ್ನು ಕಟ್ಟಿಕೊಟ್ಟಿದ್ದಾರೆ. ನಶಿಸುತ್ತಿರುವ ಸಂಸ್ಕೃತಿಯ ಚಿತ್ರಣವನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಬಯಲು ಸೀಮೆಯ ರೈತರ ಬದುಕಿನ ದುರಂತ ಕತೆ ಈ ಕಾದಂಬರಿಯಲ್ಲಿ ಹೆಪ್ಪುಗಟ್ಟಿದೆ. ಈ ಕಾದಂಬರಿಗೆ ಸಾಹಿತ್ಯಿಕ ಮೌಲ್ಯವಷ್ಟೇ ಅಲ್ಲದೆ, ಸಾಂಸ್ಕೃತಿಕ ಮೌಲ್ಯವೂ ಇದೆ. ಕಾದಂಬರಿಯುದ್ದಕ್ಕೂ ಹಳ್ಳಿಯ ಆಡುಭಾಷೆ, ಜನಪದ ನುಡಿಗಟ್ಟುಗಳು, ಬೈಗುಳಗಳು, ಗಾದೆ, ಒಗಟುಗಳು ಬಳಕೆಯಾಗಿದ್ದು, ಅಧ್ಯಯನ ಯೋಗ್ಯ ಆಕರಗಳಾಗಿವೆ.
ಜಾನಪದ ತಜ್ಞ, ಸಾಹಿತಿ, ದಕ್ಷ ಆಡಳಿತಗಾರರೆನಿಸಿದ್ದ ನಾಗೇಗೌಡರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹೆರಗನ ಹಳ್ಳಿಯ ‘ದೊಡ್ಡಮನೆ’ ಕುಟುಂಬದಲ್ಲಿ. ತಂದೆ ಲಿಂಗೇಗೌಡ, ತಾಯಿ ಹುಚ್ಚಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಅಳೀಸಂದ್ರ ಹಾಗೂ ನಾಗತಿಹಳ್ಳಿಯಲ್ಲಿ ಮುಗಿಸಿದ ಅವರು ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚನ್ನರಾಯಪಟ್ಟಣದಲ್ಲಿ ಪೂರ್ಣಗೊಳಿಸಿದರು. ಬೆಂಗಳೂರಿನಲ್ಲಿ ಇಂಟರ್ ಮೀಡಿಯೆಟ್, ಮೈಸೂರಿನಲ್ಲಿ ಬಿ.ಎಸ್ಸಿ, ಮತ್ತು ಪೂನದಲ್ಲಿ ಎಲ್.ಎಲ್.ಬಿ ಪದವಿ ಪಡೆದರು. ಮುನ್ಸೀಫ್ ಕೋರ್ಟಿನಲ್ಲಿ ಹೆಡ್ ಮುನ್ಷಿಯಾಗಿ ವೃತ್ತಿ ಆರಂಭಿಸಿದ್ದು ನರಸಿಂಹರಾಜಪುರದಲ್ಲಿ. ಆನಂತರ ಮೈಸೂರು ಸಿವಿಲ್ ಸರ್ವೀಸ್‌ನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರೆವಿನ್ಯೂ ಇಲಾಖೆಯಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಆಯ್ಕೆಯಾದರು. ಅಲ್ಲದೆ ...
READ MORE