ಚಂಡ ವ್ಯಾಘ್ರರು

Author : ನರಸಿಂಹಮೂರ್ತಿ ಹೂವಿನಹಳ್ಳಿ

₹ 300.00




Year of Publication: 2023
Published by: ಪ್ರೇರಣ ಪ್ರಕಾಶನ
Address: # 2393?M, 1ನೇ ಮುಖ್ಯ ರಸ್ತೆ, ಆರ್.ಪಿ.ಸಿ. ಲೇಔಟ್, ವಿಜಯನಗರ, ಬೆಂಗಳೂರು-560040
Phone: 9480583913

Synopsys

‘ಚಂಡ ವ್ಯಾಘ್ರರು’ ನರಸಿಂಹಮೂರ್ತಿ ಹೂವಿನಹಳ್ಳಿಯವರ ಕಾದಂಬರಿಯಾಗಿದೆ. ನಟರಾಜ್ ಹುಳಿಯಾರ್ ಅವರ ಬೆನ್ನುಡಿ ಬರಹವಿದೆ: ಭ್ರಷ್ಟ ವ್ಯವಸ್ಥೆಯ ವಿರುದ್ಧ ಅಸಲಿ ಸಿಟ್ಟು, ಕುಟಿಲತೆಯನ್ನು ಬಯಲಿಗೆಳೆಯುವ ಸೀಳುಗಣ್ಣು, ಕಾದಂಬರಿಗೆ ಮಾತ್ರ ದಕ್ಕುವ ವಾಸ್ತವ ವಿವರಗಳು ಕಾಣಿಸುವ ಸತ್ಯ- ಈ ಮೂರೂ ಅಂಶಗಳು ಬೆರೆತು 'ಚಂಡ ವ್ಯಾಘ್ರರು' ಕಾದಂಬರಿ ಹುಟ್ಟಿದೆ. ಅಧಿಕಾರಶಾಹಿಯ ಕ್ರೌರ್ಯದ ವಿರುದ್ಧ ಇಂಡಿಯಾದ ಮಧ್ಯಮ ವರ್ಗದ ಜನರ ಆಳದಲ್ಲಿ ಹುದುಗಿರುವ ಅಸಹಾಯಕ ರೋಷವನ್ನು ಹೊರ ಚೆಲ್ಲುವ ಈ ಕಾದಂಬರಿ ವ್ಯಂಗ್ಯ, ವಿಡಂಬನೆಯ ಬಾಣಗಳನ್ನು ಜೋರಾಗಿಯೇ ಬಳಸಿದೆ. ಸರ್ಕಾರಿ ಕಚೇರಿಗಳ ಭಯಾನಕ ಒಳಸುಳಿಗಳು, ಚಕ್ರವ್ಯೂಹಗಳು, ಉಡಾಫೆಗಳು... ಇವೆಲ್ಲವನ್ನೂ ಕಂಡು ವ್ಯಗ್ರಗೊಂಡ ಮುಗ್ಧ ಮನಸ್ಸಿನ ದಿಗ್ಭ್ರಮೆಯಲ್ಲಿ ಈ ಕಾದಂಬರಿಯ ಘಟನಾವಳಿಗಳು ಮೈದಾಳಿವೆ. ಸಾಹಿತ್ಯದಿಂದ ಏನೂ ಆಗುವುದಿಲ್ಲವೆಂದು ಗೊಣಗುವ ಈ ಸಿನಿಕ ಕಾಲದಲ್ಲಿ ಅಧಿಕಾರದ ಕೋಟೆಗಳನ್ನು ಸ್ಫೋಟಿಸುವ ಛಲದಿಂದ ಹೊರಟಿರುವ ಈ ಕಾದಂಬರಿ ಜನಸಾಮಾನ್ಯರ ಮನಸ್ಸಿನಲ್ಲಿ ಸುತ್ತಿ ಸುಳಿವ ಬಂಡುಕೋರತನವನ್ನು ದಾಖಲಿಸುತ್ತದೆ ಎಂಬುವುದನ್ನು ಈ ಪುಸ್ತಕದಲ್ಲಿ ತಿಳಿಸಿದೆ.

About the Author

ನರಸಿಂಹಮೂರ್ತಿ ಹೂವಿನಹಳ್ಳಿ

ಡಾ. ನರಸಿಂಹಮೂರ್ತಿ ಹೂವಿನಹಳ್ಳಿ ಅವರು ಹುಟ್ಟಿದ್ದು ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕು, ಐ.ಡಿ.ಹಳ್ಳಿ ಹೋಬಳಿಯ ಹೂವಿನಹಳ್ಳಿಯಲ್ಲಿ. ಕನ್ನಡದಲ್ಲಿ ಎಂ.ಎ ಪದವಿ ಪಡೆದು, ಬೇಂದ್ರೆ ಮತ್ತು ಕಂಬಾರರ ಕಾವ್ಯದಲ್ಲಿ ಪುರಾಣಪ್ರಜ್ಞೆ ಮತ್ತು ಸಮಕಾಲೀನತೆ ಎಂಬ ವಿಷಯದಲ್ಲಿ ಮಹಾ ಪ್ರಬಂಧ ರಚಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಕನ್ನಡ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ವರಕವಿ ಬೇಂದ್ರೆ ಕಾವ್ಯಗಳ ಅಧ್ಯಯನ(ಲೇಖನಗಳು), ಮೌನದ ಸೆರಗು(ಕವಿತೆಗಳು), ಬೇಂದ್ರೆ ಮತ್ತು ಕಂಬಾರರ ಕಾವ್ಯದಲ್ಲಿ ಪುರಾಣಪ್ರಜ್ಞೆ ಮತ್ತು ಸಮಕಾಲೀನತೆ(ತೌಲನಿಕ ಅಧ್ಯಯನ), ಕನಕದಾಸರ ಕೃತಿಗಳಲ್ಲಿ ಸಮಾನತಾ ಸಮಾಜ (ವಿಮರ್ಶಾ ಲೇಖನಗಳು), ದೇವರ ಜಾತ್ರೆ(ಕಾದಂಬರಿ), ಅರಿವಿನ ಕನ್ನಡಿ(ವಿಮರ್ಶಾ ಸಂಕಲನ), ...

READ MORE

Related Books