‘ನಂದಾದೀಪ’ ಎ. ಸರಸಮ್ಮ ಅವರ ಕಾದಂಬರಿಯಾಗಿದೆ. ದೀಪ ನಂದಿಸಲು ಯಾರಿಗಾದರೂ ಅಷ್ಟೇ : ಒಂದು ಕ್ಷಣ ಸಾಕು! ಬೆಳಗಿಸಲು ಮಾತ್ರ ಇಡೀ ಜೀವಮಾನದ ತಪಸ್ಸು. ನಮ್ಮಿ ಬದುಕಿನ ಬೊಗಸೆಯೇ ಹಣತೆ. ನಿಸ್ವಾರ್ಥವೇ ತೈಲ. ಪರಿಶ್ರಮವೇ ಬತ್ತಿ, ಪ್ರೀತಿ ವಿಶ್ವಾಸಗಳೇ ಜ್ಯೋತಿ, ಆ ತೇಜಸ್ಸೇ ಬದುಕಿನ ದಾರಿದೀಪ; ಅರ್ಥಾತ್ ನಂದಾದೀಪ. ಈ ಕಾದಂಬರಿಯಲ್ಲಿ ಚಿತ್ರಿತವಾಗಿರುವ ಪಾತ್ರಗಳು ಹೀಗೆಯೇ ಕತ್ತಲು ಬೆಳಕಿನ ಸಂಘರ್ಷಕ್ಕೆ ಒಡ್ಡಿಕೊಂಡಂತಹವು. ಸಾಮಾನ್ಯವಾಗಿ ಎಲ್ಲರಿಗೂ ಬೆಳಕು ಪ್ರೀತಿ. ಆದರೆ ಸ್ವಾರ್ಥದ ಧಾವಂತದವರಿಗೆ ಇತರರ ಮನೆಯ ಬೆಳಕು ಕಣ್ಣಿಗೆ ಕಿಸರಾಗಿಬಿಡುತ್ತದೆ. ಈ ಕಥನದಲ್ಲಿ ಬರುವ ಸುನಂದಮ್ಮ ಅತಿಬುದ್ಧಿವಂತಿಕೆಯ ಅವಗುಣದಿಂದಾಗಿ ಮಗಳಿಗೂ ಇಂಥದೇ ಗುಣದಿಂದ ಮೆಟ್ಟಿದ ಮನೆಗೇನೇ ಮುಳ್ಳಾಗುವಂತೆ ಹವಣಿಸುತ್ತಾಳೆ. ಹೀಗೆ ಇಡೀ ಕಾದಂಬರಿಯಲ್ಲಿ ಸ್ತ್ರೀ ಪಾತ್ರಗಳೇ ಗುಣಾವಗುಣಗಳ ಮಧ್ಯೆ ವಿಮರ್ಶೆಗೆ ಒಡ್ಡಿಕೊಳ್ಳುತ್ತವೆ. ಪುರುಷ ಪಾತ್ರಗಳು ಗೌಣ ಆದರೂ ಅವರದೆ ಪೀಳಿಗೆಯ ಹೊಸತನದ ಯೋಚನೆಗಳಿಂದಾಗಿ ಪರಿಸ್ಥಿತಿಗೆ ತಿರುವು ಮೂಡುತ್ತದೆ. ಎಲ್ಲರ ಮನಸ್ಸುಗಳು ತಿಳಿಗೊಂಡು ನಂದಾದೀಪ ಬೆಳಗುತ್ತದೆ.
ಲೇಖಕಿ ಎ. ಸರಸಮ್ಮ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸಾಹಿತ್ಯ ಅವರ ವಿಶೇಷ ಆಸಕ್ತಿಯಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಪ್ರಸ್ತುತ ನಿವೃತ್ತರಾಗಿದ್ದರೆ. ಕೃತಿಗಳು: ಮೋಸದ ಜಾಲ(ಕಾದಂಬರಿ), ಬಾಡಿಗೆ ಮನೆ, ಮನೆ ಮಗ, ನೀತಿ ಕಥೆಗಳು, ದನಗಳ ಚೆನ್ನಿ, ನಂದಾದೀಪ, ಜಾಲಿಯ ನೆರಳು, ಕಾವ್ಯ ಜ್ಯೋತಿ, ವಿಧಿ ನಿಯಮ, ಸನ್ಮಾರ್ಗ, ಹೆಣ್ಣಿನ ಬಾಳು, ಗುರಿ, ಪಾಪ ಪುಣ್ಯ, ಭಕ್ತಿಸಾರ, ಸ್ನೇಹ ಬಂಧನ, ಕಾಮನಬಿಲ್ಲು, ಮೋಸದ ಜಾಲ ...
READ MORE