ಅಲೆಕ್ಸಾಂಡರನು ಭಾರತದ ಮೇಲಿನ ದಾಳಿಯ ನಂತರದ ಪರಿಸ್ಥಿತಿ, ಎರಡು ಸಾವಿರ ವರ್ಷಗಳ ಇತಿಹಾಸದೊಂದಿಗೆ ಬೌಧ್ದ ಧರ್ಮದ ಬೆಳವಣಿಗೆ, ಮೌರ್ಯ ಹಾಗೂ ಇನ್ನಿತರ ಸಾಮ್ರಾಟರ ದಂಡಯಾತ್ರೆಯಿಂದ ಆದ ಬದಲಾವಣೆ ಹಾಗೂ ಸಂಪತ್ತಿನ ಹುಡುಕಾಟದ ರೋಚಕ ಇತಿಹಾಸ ಕತೆ ಸ್ವತಂತ್ರ ಭಾರತದ ವರೆಗೂ ಸಾಗುತ್ತದೆ. ಅಂದಿನ ಕಾಲಕ್ಕೆ ಮನಸ್ಸು ಲಗ್ಗೆಯಿಟ್ಟು ಆ ಕಾಲಘಟ್ಟದ ಚಿತ್ರಣವನ್ನು ಲೇಖಕ ಕೆ.ಎನ್. ಗಣೇಶಯ್ಯ ಅವರು ಈ ಕಾದಂಬರಿ ಮೂಲಕ ತೆರೆದಿಟ್ಟಿದ್ದಾರೆ.
ವೃತ್ತಿಯಿಂದ ಕೃಷಿ ವಿಜ್ಞಾನಿ ಆಗಿರುವ ಕೆ.ಎನ್. ಗಣೇಶಯ್ಯ ಅವರು ಮೂಲತಃ ಕೋಲಾರ ಜಿಲ್ಲೆಯವರು. ಕಳೆದ ೩೦ ವರ್ಷಗಳಿಂದ ತಳಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಅವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವ ಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿಯ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧ ಬರೆದಿರುವ ಅವರು ಆರು ವೈಜ್ಞಾನಿಕ ಕೃತಿಗಳನ್ನು ...
READ MORE