ಕವಿ ಎಂ. ಗೋಪಾಲಕೃಷ್ಣ ಅಡಿಗರು ಬರೆದ ಮೊದಲ ಕಾದಂಬರಿ-ಆಕಾಶ ದೀಪ. ಬಾಲ್ಯದ ಇಳಿವು ಯೌವ್ವನದ ಉಬ್ಬರ ಗಳ ನಡುವಿನ ಸಂಧಿಕಾಲದ ಹೊಸ್ತಿಲಲ್ಲಿ ಯುವ ಜೀವನದ, ಭಾವದ ಮೊಗ್ಗು ವಿಕಾಸವಾಗುವುದರ ಮನೋವ್ಯಾಪಾರದ ಚಿತ್ರಣ, ಆದರ್ಶವಾದ, ಸಂದೇಶ, ಉತ್ಸಾಹ, ಸಂಪ್ರದಾಯ ಶ್ರದ್ಧೆ, ಕ್ರಾಂತಿಯ ಕಾತರ ಎಲ್ಲವೂ ಸುಳಿದ ಗಾಳಿಗೆ ಅದು ಬೀಸಿದತ್ತ ಬಳಕುವ ಬಳ್ಳಿಯಂತೆ ಬಾಗುವ, ಬೀಗುವ ಹೃದಯದ ಕುಸುರಿಗೆಲಸದ ಚಿತ್ರಣ ಇಲ್ಲಿದೆ ಎಂದು ಪ್ರಕಾಶಕರ ಕೃತಿಯ ಕುರಿತು ಅಭಿಪ್ರಾಯಪಟ್ಟಿದ್ದಾರೆ.
ಕನ್ನಡದಲ್ಲಿ ನವ್ಯಕಾವ್ಯಕ್ಕೆ ನಾಂದಿ ಹಾಡಿದ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರನ್ನು ‘ಒಂದು ಜನಾಂಗದ ಕಣ್ಣು ತೆರೆಸಿದ ಕವಿ’ ಎಂದು ಗುರುತಿಸಲಾಗುತ್ತಿತ್ತು. ಅಡಿಗರು 1918ರ ಫೆಬ್ರುವರಿ 18ರಂದು ಜನಿಸಿದರು. ತಂದೆ ರಾಮಪ್ಪ ಮತ್ತು ತಾಯಿ ಗೌರಮ್ಮ. ಬೈಂದೂರಿನಲ್ಲಿ ಶಾಲಾ ಶಿಕ್ಷಣ, ಮೈಸೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಆಯಿತು. ಬಿ.ಎ. ಆನರ್ಸ್ ಪದವಿ (1942) ಗಳಿಸಿದ ನಂತರ ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ಪ್ರೌಢಶಾಲೆಗಳಲ್ಲಿ ಅಧ್ಯಾಪಕರಾಗಿ ಕೆಲಸಮಾಡಿದ್ದರು. ಆಮೇಲೆ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದಿ ಎಂ.ಎ. ಪದವಿ (1947) ಗಳಿಸಿದರು. ಮೈಸೂರಿನ ಶಾರದಾವಿಲಾಸ್ ಕಾಲೇಜಿನಲ್ಲಿ ಉಪನ್ಯಾಸಕ (1948-52), ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ (1952-54) ...
READ MORE