ಶಾಂತಲಾ-ಕೆ.ವಿ. ಅಯ್ಯರ್ ಅವರ ಐತಿಹಾಸಿಕ ಕಾದಂಬರಿ. ಹೊಯ್ಸಳ ಸಾಮ್ರಾಜ್ಯದ ರಾಜ ವಿಷ್ಣುವರ್ಧನನ ರಾಣಿ ಶಾಂತಲಾ. ಗೆಳತಿ ಲಕ್ಷ್ಮೀಯಿಂದ ದೂರ ಇರಲಾಗದೇ ಲಕ್ಷ್ಮೀಯೂ ವಿಷ್ಣುವರ್ಧನನ್ನು ಮದುವೆಯಾಗುವುದು. ಶಾಂತಲಾ ದೇವಿಯ ದೈವಿಕ ವ್ಯಕ್ತಿತ್ವ, ಶಾಂತಲಾ ಲಕ್ಷ್ಮಿಯರ ನಡುವಿನ ಸ್ನೇಹ, ಶಾಂತಲಾ ಪುತ್ರ ವಿಷ್ಣುವಿನ ಶೌರ್ಯ ಹಾಗೂ ಸಾವು ಮಂತ್ರಿ ಗಂಗರಾಜನ ರಾಜನಿಷ್ಠೆ ಪ್ರತಿ ಪಾತ್ರ ಹಾಗೂ ಸನ್ನಿವೇಶಗಳು ಸಂವೇದನಶೀಲವಾಗಿವೆ. ವಿಷ್ಣುವರ್ಧನ, ಶಾಂತಲಾ ಹಾಗೂ ಲಕ್ಷ್ಮೀ ಐತಿಹಾಸಿಕ ಸಾಮ್ರಾಜ್ಯವೊಂದರ ಆಡಳಿತದ ವಿದ್ಯಮಾನಗಳು ವರ್ತಮಾನದಲ್ಲೂ ಕಾಣುತ್ತಿದ್ದೇವೆ ಎಂಬಷ್ಟು ಇಲ್ಲಿಯ ಪಾತ್ರ-ಸನ್ನಿವೇಶಗಳು ಜೀವಂತಿಕೆ ಮರೆಯುತ್ತವೆ.
ಶಾಂತಲೆಯೂ ಸಹ ಶಿವಗಂಗೆ ಬೆಟ್ಟಕ್ಕೆ ಹೋಗಿ ಮೇಲಿಂದ ಬಿದ್ದು ಅಸು ನೀಗುತ್ತಾಳೆ ಎಂಬ ದೃಶ್ಯ ವರ್ಣಿಸುವಾಗ ಈ ಪುಸ್ತಕವು ಕೇವಲ ಒಂದು ಕೃತಿಯಾಗಿ ಉಳಿಯದೇ ಓದುಗನ ಇಡೀ ಭಾವದ ಮೊತ್ತವೇ ಆಗಿರುತ್ತದೆ. ಈ ಕಾದಂಬರಿಯು ಮೊದಲು 1954ರಲ್ಲಿ ಬೆಂಗಳೂರಿನ ವ್ಯಾಯಾಮಶಾಲೆ ಪ್ರಕಟಿಸಿತ್ತು.
ಕೆ. ವಿ. ಅಯ್ಯರ್ ಜನಿಸಿದ್ದು ಜನವರಿ 8, 1894ರಲ್ಲಿ. ಮೂಲತಃ ಕೋಲಾರ ಜಿಲ್ಲೆಯ ದೇವಸಮುದ್ರದವರು. ಬೆಂಗಳೂರಿನ ಕೋಟೆ ಬಳಿಯ ಎ.ವಿ.ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ, ವೆಸ್ಲಿಯನ್ ಮಿಷನ್ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದರು. ಕಡು ಬಡತನದ ಮಧ್ಯೆ ಪದವಿ ಪಡೆಯಲಿಲ್ಲ. ಆದರೆ, ಅಮೆರಿಕದ PHYSICAL CULTURE NATUROPATHYಯ ಅಕಾರ ಪತ್ರ ಪಡೆದು ತಾವೇ ಪ್ರೊಫೆಸರ್ ಎಂದು ಕರೆದುಕೊಂಡರು. ಛಾಯಾಚಿತ್ರಗ್ರಾಹಕರು. ರೇಡಿಯೋ ರಿಪೇರಿ, ಸ್ವರಲೇಖನ ಯಂತ್ರ ರಿಪೇರಿ ನಿಪುಣತೆ.ಇತ್ತು. ಉತ್ತಮ ವ್ಯಾಯಾಮ ಶಿಕ್ಷಕರು. ಮಹಾರಾಜ ಕೃಷ್ಣರಾಜ ಒಡೆಯರು ಇವರ ವ್ಯಾಯಾಮ ಕಲೆಗೆ ಮಾರು ಹೋಗಿದ್ದರು. ಕೈಲಾಸಂ ಅವರು ಇವರಿಗೆ ಸಾಹಿತ್ಯದ ಗೀಳು ಹಚ್ಚಿದರು. ರೀಡರ್‍ಸ್ ಡೈಜಿಸ್ಟ್ ...
READ MORE