ಪಚ್ಚತೋರಣ

Author : ಟಿ.ಕೆ. ರಾಮರಾವ್

Pages 150

₹ 90.00




Year of Publication: 2011
Published by: ಧೃತಿ ಪ್ರಕಾಶನ,
Address: ಜಿ-3, ಹಯಗ್ರೀವ ಅಪಾರ್ಟ್ ಮೆಂಟ್, ನಂ1-2, 1ನೆ ಕ್ರಾಸ್, 5ನೆ ಮುಖ್ಯರಸ್ತೆ, ನರಸಿಂಹರಾಜ ಕಾಲೋನಿ, ಬೆಂಗಳೂರು-19
Phone: 08026671773

Synopsys

ಕನ್ನಡ ಸಾಹಿತ್ಯ ಲೋಕದಲ್ಲಿ ದಿವಂಗತ ಟಿ.ಕೆ.ರಾಮರಾವ್ ಅವರದು ವಿಶಿಷ್ಟ ಹೆಸರು.ಸಾಮಾಜಿಕ ಕಾದಂಬರಿಗಳನ್ನು ಹೃದಯ ತಟ್ಟುವಂತೆ ಬರೆದು ಅಸಂಖ್ಯಾತ ಕನ್ನಡಿಗರ ಮನಗೆದ್ದವರು. ಬಂಗಾರದ ಮನುಷ್ಯ ಚಲನಚಿತ್ರವಾಗಿ ಅವರಿಗೆ ಅಪಾರ ಯಶಸ್ಸನ್ನು ತಂದದ್ದು ನಿಜ. ಆದರೆ ಅವರ ಪತ್ತೆದಾರಿ ಕಾದಂಬರಿಗಳು ಅವರನ್ನು ಇನ್ನಷ್ಟು ಮೇರು ಸ್ಥಾನಕ್ಕೇರಿಸಿದವು. ಟಿ.ಕೆ.ರಾಮರಾವ್ ಅವರ ಕಾದಂಬರಿ`ಪಚ್ಚೆ ತೋರಣ’. ಉಧಕ ಮಂಡಲದ ರೇಸ್ ಕೋರ್ಸಿನಲ್ಲಿ ಕುದುರೆ ಬಾಲಕ್ಕೆ ದುಡ್ಡು ಕಟ್ಟಿ ಸೋಲುವ ಶಂಕರಪ್ಪನಿಗೆ ಮತ್ತೆ ಮತ್ತೆ ಅದರತ್ತ ಆಕರ್ಷಣೆ ಜೊತೆಗೆ ಅಲ್ಲಿಯ ಇನ್ನೊಂದು ಆಕರ್ಷಣೆ ತಂಗಮಣಿ. ಈ ಕಾದಂಬರಿಯು 1967ರಲ್ಲಿ ಮೊದಲ ಮುದ್ರಣವನ್ನು ಕಂಡಿದೆ. 1975ರಲ್ಲಿ ಎರಡನೇ ಮುದ್ರಣ, 1983ರಲ್ಲಿ ಮೂರನೇ ಮುದ್ರಣ, 2011ರಲ್ಲಿ ನಾಲ್ಕನೆಯ ಮುದ್ರಣವನ್ನು ಕಂಡಿದೆ.

About the Author

ಟಿ.ಕೆ. ರಾಮರಾವ್
(07 October 1931 - 11 January 1988)

ಪತ್ತೇದಾರಿ ಕಾದಂಬರಿಕಾರ ಟಿ.ಕೆ. ರಾಮರಾಯರು (ಜನನ:07-10-1931)  ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದವರು. ತಂದೆ ಟಿ. ಕೃಷ್ಣಮೂರ್ತಿ. ರೈಲ್ವೆ ಇಲಾಖೆಯಲ್ಲಿ ಸ್ಟೇಷನ್‌ ಮಾಸ್ಟರ್ ಆಗಿದ್ದವರು, ತಾಯಿ ನಾಗಮ್ಮ. ಕಡೂರು, ಅರಸೀಕೆರೆ ಇತರೆಡೆ ಆರಂಭಿಕ ಶಿಕ್ಷಣ, ಕೋಲಾರದಲ್ಲಿ. ಹೈಸ್ಕೂಲ್ ಶಿಕ್ಷಣ, ಪತ್ತೇದಾರಿ ಕಾದಂಬರಿ ‘ಭಾಸ್ಕರ ಅಥವಾ ಸೇಡು’. ಕಾಲೇಜು ಓದುತ್ತಿರುವಾಗಲೇ ಅಲೆಕ್ಸಾಂಡರ್ ಡ್ಯೂಮ, ವಿಕ್ಟರ್ ಹ್ಯೂಗೋ, ಥಾಮರ್ಸ್ ಹಾರ್ಡಿ, ಬರ್ನಾರ್ಡ್‌ ಷಾ -ಇವರ ಅಚ್ಚುಮೆಚ್ಚಿನ ಲೇಖಕರು. ಬಿ.ಎಸ್‌ಸಿ. ಆನರ್ಸ್ ಪದವೀಧರರು. ಗಾಂಧಿನಗರದ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ಮದರಾಸಿನಲ್ಲಿ ರೈಲ್ವೆಗಾರ್ಡ್ ಎಂದು ಕೆಲಸ ಮಾಡಿದರು.  ರೈಲ್ವೆಯಲ್ಲಿದ್ದ ತಂದೆಯವರ ನಿಧನದಿಂದ ಇವರಿಗೆ ಮಾನವೀಯ ದೃಷ್ಟಿಯಿಂದ ಕೆಲಸ ನೀಡಲಾಗಿತು. ಆದರೆ, ಅಣ್ಣನ ಸಾವು ಸಂಭವಿಸಿತು. ಕುಟುಂಬ ...

READ MORE

Related Books