ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಲೇಖಕಿ ಚಂಪಾಕಲಿ ಆರ್. ಸಗರಿಯವರ ಕೃತಿ ’ ನಿಯತ್ತು.’
ಐವತ್ತು ವರ್ಷಗಳ ಹಿಂದೆ ಜೀತ ಪದ್ಧತಿ ಕರ್ನಾಟಕದಲ್ಲಿ ಹೇಗೆ ಜನರ ಜೀವನವನ್ನು ನಾಶಗೊಳಿಸಿತು ಅನ್ನುವುದರ ಸ್ಪಷ್ಟ ಚಿತ್ರಣವನ್ನು ಈ ಕೃತಿ ನೀಡುತ್ತದೆ. ಹುಟ್ಟುತ್ತಲೇ ಆಳಾಗಿ ಹುಟ್ಟಿದವನ ಮಗ ಮುಂದೆ ಡೆಪ್ಯುಟಿ ಕಮೀಷನರ್ ಹೇಗೆ ಆದ ಎಂಬ ಕತೆಯನ್ನು ಚಿತ್ರಿಸುತ್ತದೆ.
ಜೀತದಾಳುಗಳ ಬದುಕನ್ನು ತೀರಾ ಹತ್ತಿರದಿಂದ ಚಿತ್ರಿಸಲಾದ ಅಪರೂಪದ ಕಾದಂಬರಿಯಾಗಿದೆ. ಉತ್ತರ ಕರ್ನಾಟಕದ ಆಡುನುಡಿಯನ್ನು ಈ ಕೃತಿಯಲ್ಲಿ ಮನಗಾಣಬಹುದು. ಜೀತದಾಳುಗಳ ನಿಯತ್ತನ್ನು ಕೊನೆಯವರೆಗೂ ಕಾಪಾಡಿಕೊಂಡು ಬಂದ ವ್ಯಕ್ತಿಯೊಬ್ಬನ ಕತೆಯನ್ನು ಈ ಕೃತಿ ಚಿತ್ರಿಸುತ್ತದೆ.