ಕ್ರಿಸ್ತ ಪೂರ್ವದ ಕಲಿ

Author : ಕೌಂಡಿನ್ಯ ನಾಗೇಶ

₹ 250.00




Year of Publication: 2022
Published by: ವಂಶಿ ಪಬ್ಲಿಕೇಷನ್ಸ್‌
Address: ನೆಲಮಂಗಲ ಬೆಂಗಳೂರು
Phone: 9916595916

Synopsys

ಕ್ರಿಸ್ತ ಪೂರ್ವದ ಕಲಿ ಕೌಂಡಿನ್ಯ ಅವರು ರಚಿಸಿದ ಐತಿಹಾಸಿ ಕಾದಂಬರಿಯಾಗಿದೆ. ಇದು ಇತಿಹಾಸದ ಕೈಪಿಡಿ ಮಾತ್ರವಲ್ಲ. ರಾಜ ಮಹಾರಾಜ - ಚಕ್ರವರ್ತಿಗಳು ರಾಜ್ಯ ಕಟ್ಟಿ ಬೆಳೆಸಲು ಮತ್ತು ರತ್ತುಗಳ ಆಕ್ರಮಣದಿಂದ ಪ್ರಜೆಗಳಿಗೆ ರಕ್ಷಣೆ ನೀಡಲು ಮತ್ತು ತಮ್ಮ ಪರಾಕ್ರಮ, ಆದರ್ಶ ಗುಣಗಳಿಂದ ಯಾವ ರೀತಿ ಬದುಕಿ ರಾಜ್ಯವಾಳಿದ್ದರು ಎಂಬುದು ಇತಿಹಾಸದ ಒಂದು ಭಾಗವಾಗುತ್ತದೆ. ಹಾಗಾದರೆ ಮತ್ತೊಂದು ಭಾಗ ಏನು? ರಾಜರುಗಳೆಂದರೆ ಸ್ವರ್ಗದಿಂದ ಇಳಿದು ಬಂದ ದೇವತೆಗಳಲ್ಲಿ, ಅವರೂ ಸಹ ನಮ್ಮಂತೆ ಮನುಷ್ಯರು, ಅವರಿಗೂ ಸಹ ಸಂಸಾರ ಜೀವನದ ಸುಖ ದು:ಖ, ಸಮಸ್ಯೆಗಳು ಮತ್ತು ಭಾವನಾತ್ಮಕ ಸಂಘರ್ಷಗಳಿರುತ್ತವೆ ಎಂಬುದು ಆ ಕಾಲದ, ವಾಸ್ತವಿಕತೆಯ ಪ್ರಾಯೋಗಿಕ ಸತ್ಯ. ಇದೇ ಇತಿಹಾಸದ ಮತ್ತೊಂದು ಭಾಗ. ಈ ಕೃತಿಯನ್ನು ಓದಿದಾಗ, ಕಲಿ ವೀರನ ಬದುಕಲ್ಲಿ ನಡೆದಿದ್ದ ದುರಂತ ಮತ್ತು ವಿಪನ್ಯಾಸ ರೂಪವಾದ ಘಟನೆಗಳು ಓದುಗರಲ್ಲಿ ದುಃಖ ಮತ್ತು ವಿಷಾದತೆಯ ಭಾವ ಉಂಟು ಮಾಡುತ್ತದೆ. ಆ ಕ್ರಿಸ್ತಪೂರ್ವದ ಕಲಿ ಯಾರು? ಅವನ ಬದುಕಲ್ಲಿ ನಡೆದಿದ್ದ ದುರಂತ ಘಟನೆ ಏನು? ಅವನ ಕಣ್ಣುಗಳಲ್ಲಿ ಕಂಬನಿಗೆ ಬದಲಾಗಿ ರಕ್ತ ಯಾಕೆ ತುಂಬಿತು ? ಎಂಬ ವಿಚಾರದ ಬಗ್ಗೆ ಈ ಪುಸ್ತಕದಲ್ಲಿ ತಿಳಿಸಲಾಗಿದೆ.

About the Author

ಕೌಂಡಿನ್ಯ ನಾಗೇಶ

  ಕೌಂಡಿನ್ಯ   ಕಾವ್ಯನಾಮದಿಂದ  ಪ್ರಸಿಧ್ದಿಯನ್ನು  ಪಡೆದಿರುವ ವೈ.ಎನ್‌ ನಾಗೇಶ್‌ ಅವರು ಮೂಲತಃ ಹಾಸನ ಜಿಲ್ಲೆಯ ಹೊಳೆ ನರಸೀಪುರದವರು . ತಂದೆ ನಾರಾಯಣ ರಾವ್‌ ತಾಯಿ ಜಯಲಕ್ಷ್ಮಿ . ಮೂವತ್ತೆರಡು ವರ್ಷಗಳಿಂದ ಸಾಹಿತ್ಯ ಸೇವೆಯನ್ನು ಮಾಡಿಕೊಂಡಿದ್ದಾರೆ. ಇವರು ಮಂಗಳ, ತರಂಗ, ಸುಧಾ, ಕನ್ನಡ ಪ್ರಭ, ಪ್ರಜಾವಾಣಿ ,ಉದಯವಾಣಿ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ 350 ಕ್ಕೂ ಹೆಚ್ಚು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಕನ್ನಡ ಭಾಷಾ ಸಂಶೋಧನಾ ಕೃತಿ, ಚಾರಿತ್ರಿಕ ಕೃತಿ, ಪೌರಾಣಿಕ ಗ್ರಂಥಗಳು ,ಧಾರ್ಮಿಕ ಮತ್ತು ಸಾಮಾನ್ಯ ಲೇಖನಗಳು, ಸಣ್ಣ ಕತೆಗಳು , ಕವನ ಸಂಕಲನಗಳು,  ಚಲನಚಿತ್ರಗಳು  ರಚಿಸಿದ್ದಾರೆ.   ಪ್ರಶಸ್ತಿ ...

READ MORE

Related Books