‘ಬಯಲೆಂಬೊ ಬಯಲು’ ಪ್ರೊ. ಎಚ್.ಟಿ. ಪೋತೆ ಅವರ ಬಯೋಪಿಕ್ ಕಾದಂಬರಿ. ಇದು ಅನುಭವ ಕಥನಾಧಾರಿತ ಕಾದಂಬರಿ. ಬದುಕಿನಲ್ಲಿ ಘಟಿಸಿದ ಘಟನೆಗಳ ಸೃಜನಾತ್ಮಕ ರೂಪವಿದು ಎನ್ನುತ್ತಾರೆ ಲೇಖಕರು. ಕಾದಂಬರಿಯ ವಸ್ತು ಒಂದು ಕುಟುಂಬದ ಕತೆಯಂತೆ ಕಂಡರೂ ಈ ನೆಲದ ಸಾಮಾಜಿಕ ವ್ಯವಸ್ಥೆಯ ಚಹರೆಗಳನ್ನು ಒಳಗೊಂಡಿದೆ. ವ್ಯವಸ್ಥಿತವಾಗಿ ಎಳೆಯಲ್ಪಟ್ಟ ಸಣ್ಣ, ಅತಿಸಣ್ಣ ಗೆರೆಗಳು ಹೇಗೆ ಮನುಷ್ಯ ಮನುಷ್ಯರ ನಡುವೆ ಅಗಾಧ ಅಂತರವನ್ನು ಹುಟ್ಟುಹಾಕಿದೆ ಎನ್ನುವುದರ ಹುಡುಕಾಟವಿದೆ. ಸಮಾಜದ ಮೂಲ ವ್ಯವಸ್ಥೆಯನ್ನು ಬಯಲಿಗೆ ಇಡಬೇಕು ಎನ್ನುವ ಹಂಬಲವಿದೆ. ಹಾಗಾಗಿ ಇಲ್ಲಿ ಒಂದು ಕುಟುಂಬದ ಸಂಕಥನದ ಜೊತೆಗೆ ಒಂದು ಸಮುದಾಯದ ಅದರ ಸುತ್ತಣ ಸಮಾಜದ ಸಾಂಸ್ಕೃತಿಕ ಬದುಕಿನ ಸಂಕಥನವೂ ಇದೆ.
ಕಥೆಗಾರ, ವಿಮರ್ಶಕ, ಅನುವಾದಕ, ಚಿಂತಕ, ಜಾನಪದ ವಿದ್ವಾಂಸ ಹಾಗೂ ಸಂಶೋಧಕರಾದ ಪ್ರೊ. ಎಚ್.ಟಿ.ಪೋತೆ ಬಿಸಿಲನಾಡಿನ ದಿಟ್ಟಪ್ರತಿಭೆ. ಬುದ್ದ. ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಬಿ. ಶ್ಯಾಮಸುಂದರ್ ಚಿಂತನೆಗಳ ನೆಲೆಯಲ್ಲಿ ಸಾಹಿತ್ಯ ಕೃಷಿಗೈದವರು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಪೋತೆಯವರ ಜನ್ಮಸ್ಥಳ, ಗುಲ್ಬರ್ಗಾ ವಿವಿಯಿಂದ ಎಂ.ಎ, ಎಂ.ಫಿಲ್, ಪಿಎಚ್ಡಿ. ಅಂಬೇಡ್ಕರ್ ಕುರಿತಾದ ಕನ್ನಡದ ಮೊದಲ ಡಿ.ಲಿಟ್ ಪಡೆದ ಹೆಗ್ಗಳಿಕೆ. ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕ, ಪ್ರಸಾರಂಗದ ನಿರ್ದೇಶಕ, ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ, ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವರಾಗಿ ಅವರದ್ದು ಬಹುರೂಪಿ ಶೈಕ್ಷಣಿಕ ...
READ MORE