ರತ್ನಖಂಡ

Author : ಮಹಾಬಲಮೂರ್ತಿ ಕೊಡ್ಲೆಕೆರೆ

Pages 168

₹ 170.00




Year of Publication: 2022
Published by: ಸ್ನೇಹಾ ಪ್ರಿಂಟರ್ಸ್
Address: ನಂ. 16, 1ನೇ ಬಿ ಮುಖ್ಯರಸ್ತೆ, ಶ್ರೀ ರಾಘವೇಂದ್ರ ಮಠದ ರಸ್ತೆ ಪಾಪರೆಡ್ಡಿಪಾಳ್ಯ 11ನೇ ಬ್ಲಾಕ್, ನಾಗರಬಾವಿ 2ನೇ ಹಂತ, ಬೆಂಗಳೂರು-72

Synopsys

‘ರತ್ನಖಂಡ’ ಲೇಖಕ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ಕಾದಂಬರಿ. ಕೃತಿಯ ಅನುಭವದ ಬಗ್ಗೆ ಬರೆಯುತ್ತಾ ‘ನಾನು ಹಲವು ಕಾರಣಗಳಿಗಾಗಿ ಹತ್ತಾರು ರತ್ನಪಡಿ ವ್ಯಾಪಾರಿಗಳನ್ನು ಸಂಧಿಸಿದ ಅನುಭವದಿಂದ ಹೇಳುವುದಾದರೆ ಕಣ್ಣು ಕೋರೈಸುವ ವಜ್ರ ವೈಡೂರ್ಯಗಳ ರಾಶಿ ಅವರ ಬಳಿ ಕಂಡಿದ್ದೇನೆ. ಹಾಗೆಯೇ ಅವರ ಬದುಕಿನ ಬಗೆಗಿನ ಕಣ್ಣೀರು ಕಂಡು ಆಶ್ಚರ್ಯಪಟ್ಟಿದ್ದೇನೆ. ಮುರಳೀಧರ ಬಹುತೆ ಎಂಬ ಮುಖದ ತುಂಬ ಸಿಡುಬಿನ ಕಲೆಗಳಿದ್ದರೂ ಆಕರ್ಷಕ ಮುಖಭಾವ ಹೊತ್ತಿದ್ದ ಯೋಗಿಯೊಬ್ಬನನ್ನು ನೋಡಿದ್ದೇನೆ. ಇವನದೂ ದೊಡ್ಡ ಕತೆ. ಹಾಗೆಯೇ ಮೂಲದಲ್ಲಿ ಸೆರ್ಬಿಯನ್, ಆದರೆ ಇರುವುದು ಇಟಲಿಯಲ್ಲಿ, ಅಣ್ಣನ ಬಗ್ಗೆ ಗೌರವ, ಆದರೆ ಅವನ ಹೆಂಡತಿ ಗಯ್ಯಾಳಿ, ಮಾಟ - ಮಂತ್ರ ಮಾಡಿಸಿ ತನ್ನ ಬದುಕನ್ನು ನರಕ ಮಾಡಿಬಿಟ್ಟಿದ್ದಾಳೆ ಎಂಬುದು ಅವನ ವ್ಯಥೆ. ಈತ ಕೆಲವು ಮಾಂಕ್‌ಗಳ ಕುರಿತು ಹಲವು ವಿಚಾರ ಹಂಚಿಕೊಂಡಿದ್ದ ನನ್ನ ಜತೆ. ಇನ್ನೊಬ್ಬಳು ಸರಿತಾ ಎನ್ನುವ ಹೆಣ್ಣು ಮಗಳು. ಕೋಟಿಗಟ್ಟಲೆ ಸ್ವತಃ ತಾನೇ ದುಡಿದಿದ್ದಾಳೆ. ಜತೆಗೆ ಅಪ್ಪ ಕೊಟ್ಟ ಆಸ್ತಿ. ಆದರೆ ಜೀವನದಲ್ಲಿ ಪ್ರವೇಶಿಸಿದ ಪುರುಷರು ಅವಳನ್ನು ಯಾಮಾರಿಸುತ್ತಿದ್ದ ವಿಷಯಗಳು ಹಲವು. ಜಿಮ್‌ನಲ್ಲಿ ಸಂಭವಿಸಿದ ವಿಚಾರ ಒಂದನ್ನು ನನಗೆ ತಿಳಿಸಿದಳು. ಅಮೇರಿಕಾದಲ್ಲಿ ಮ್ಯಾಕ್ ಫುಟ್ ಎನ್ನುವ ಸುಮಾರು 23 ವಯಸ್ಸಿನ ಹುಡುಗ, ಒಂದು ದಿನ ಅವನ ಮನೆಯ ಕತ್ತಲಲ್ಲಿ ಒಂದು ಮನುಷ್ಯ ರೂಪದ ಆಕೃತಿಯನ್ನು ತೋರಿಸಿದ್ದ. ಈ ಅನುಭವ ನನಗೆ ಇಂದಿಗೂ (2015 ಸಪ್ಟೆಂಬರ್ ತಿಂಗಳ ರಾತ್ರಿ ಅದು.) ನಂಬದಿರಲು ಒಂದು ಸವಾಲೇ ಆಗಿದೆ. ಹಲವು ಬಗೆಯ ಅವಧೂತರುಗಳನ್ನು ಸಂಧಿಸಿದ್ದೇನೆ. ಒಬ್ಬ ಅಘೋರಿಯ ಜತೆಗೆ, ಬನಾರಸಿನ ಬೀದಿಗಳಲ್ಲಿ ಸುಮ್ಮನೆ ಓಡಾಡುತ್ತ ಅವನ ಮಾತುಗಳನ್ನು ಕೇಳಿಸಿಕೊಂಡಾಗ ವಿಧ ವಿವಿಧವಾದ ಅತಿಮಾನುಷ ಶಕ್ತಿಯ ಬಗೆಗೆ ಬೆರಗು ಪಡದೆ ಇರಲಾಗಲಿಲ್ಲ. ಎಲ್ಲವೂ ಸುಳ್ಳು ಎಂಬುದು ಇದ್ದದ್ದೇ. ಆದರೆ ಸ್ವತಃ ಆದ ಅನುಭವಗಳು ನನ್ನ ಪಾಲಿಗಂತೂ ಸುಳ್ಳಲ್ಲ ಎನ್ನುತ್ತಾರೆ ಮಹಾಬಲಮೂರ್ತಿ ಕೊಡ್ಲೆಕೆರೆ. ಅವರ ಅನುಭವದಿಂದ ಮಾಗಿದ ಕತೆಯನ್ನು ರತ್ನಖಂಡ ಕಾದಂಬರಿಯಾಗಿಸಿದ್ದಾರೆ.

About the Author

ಮಹಾಬಲಮೂರ್ತಿ ಕೊಡ್ಲೆಕೆರೆ
(04 April 1958)

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ 1958ರ ಏಪ್ರಿಲ್ 01 ರಂದು ಲೇಖಕ ಮಹಾಬಲಮೂರ್ತಿ ಕೊಡ್ಲೆಕೆರೆ ಜನಿಸಿದರು. ತಂದೆ ಗಜಾನನ ಅನಂತ ಭಟ್ಟ, ತಾಯಿ ಭೂದೇವಿ . ಗೋಕರ್ಣ, ಕುಮಟಾದ ಕಾಲೇಜಿನಿಂದ ಬಿ.ಎಸ್ಸಿ.ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವೀಧರರು. ಜ್ಯೋತಿಷ್ಯ ಶಾಸ್ತ್ರದಲ್ಲಿ ಪಡೆದ ಡಿಪ್ಲೊಮಾ ಪಡೆದರು. ಕರ್ನಾಟಕ ಬ್ಯಾಂಕ್ ನಲ್ಲಿ ಹಿರಿಯ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದಾರೆ.  ಕೃತಿಗಳು: ಮತ್ತೇಳಲು ಪೂರ್ವದಿಂದ ಕವನ ಸಂಕಲನಕ್ಕೆ ಮುದ್ದಣ ಕಾವ್ಯ ಪ್ರಶಸ್ತಿ ಬಂದಿದೆ. ಮಾತು ಮತ್ತು ಪರಸ್ಪರ, ಜೀವ (ಕವನ ಸಂಕಲನಗಳು), ಚಂದ್ರಾಸ್ತಮಾನ (ಕಾದಂಬರಿ), ಕಥಾಸಂಕನಗಳು – ‘ಮತ್ತೊಂದು ಮೌನ’, ‘ಯಕ್ಷಸೃಷ್ಟಿ’, ‘ಅವನ ಜಗತ್ತಿನ ಹಗಲು’, ‘ನೆರಳು’, ‘ಇತಿಹಾಸದ ನಂತರ, ನೆರಳು ಮತ್ತು ಇತರ ಆಯ್ದ ...

READ MORE

Related Books