'ಕರ್ಮಭೂಮಿ' ಡಿ.ಎನ್. ಕೃಷ್ಣಮೂರ್ತಿ ಅವರ ಕಾದಂಬರಿ. ಇದೊಂದು ಗ್ರಾಮೀಣ ಬದುಕಿನ ಕಥಾ ಹಂದರವನ್ನು ಹೊಂದಿರುವ ಕೃತಿ. ಶಿಕ್ಷಕನಾಗಿ ಸೇವೆ ಸಲ್ಲಿಸಿ ನಿವೃತ್ತನಾದ ಸೋಮಯ್ಯ, ನಿವೃತ್ತಿಯ ನಂತರ ತನ್ನ ಸಂಸಾರದೊಡನೆ ತನ್ನ ಹುಟ್ಟೂರಿಗೆ ಬರುತ್ತಾನೆ. ಊರಿನಲ್ಲಿ ಪಟೇಲ ಸುಂದ್ರಪ್ಪ ಮತ್ತವನ ಮಗ ನಾಗೇಂದ್ರನ ದಬ್ಬಾಳಿಕೆಯನ್ನು ಸೋಮಯ್ಯನ ಎರಡನೇ ಮಗ ಮೋಹನ ವಿರೋಧಿಸಿ ನಿಲ್ಲುತ್ತಾನೆ. ಧರ್ಮ ಮತ್ತು ಅಧರ್ಮದ ನಡುವೆ ನಡೆಯುವ ಹೋರಾಟದಲ್ಲಿ ಧರ್ಮಕ್ಕೇ ಜಯ ಎಂಬುದನ್ನು ಈ ಕಾದಂಬರಿ ಬಿಂಬಿಸುತ್ತದೆ.
ಡಿ. ಎನ್. ಕೃಷ್ಣಮೂರ್ತಿಯವರು ಮೈಸೂರು ತಾಲ್ಲೂಕಿನ ದೊಡ್ಡಮಾರಗೌಡನಹಳ್ಳಿ ಯವರು. ತಂದೆ ಎಸ್. ನಂಜುಂಡಯ್ಯ, ತಾಯಿ ಶಾರದಮ್ಮ. ಸಾಹಿತ್ಯ ವಲಯದಲ್ಲಿ ಇವರು ಡಿಎನ್ಕೆ ಎಂದೇ ಪರಿಚಿತರು. ಕೃತಿಗಳು: ದತ್ತೂರಿಗಿಡ, ಮರೀಚಿಕೆ, ಪರಿವರ್ತನೆ, ಕರ್ಪೂರದ ಗೊಂಬೆ, ಮುಳುಗಿದ ದೋಣಿ,(ಕಿರು ಕಾದಂಬರಿಗಳು), ಜನಮನ (ಪ್ರಬಂಧ ಸಂಕಲನ-ಸಂಪಾದಿತ), ಓಕುಳಿ, ಬೆಳಕು (ಕವನ ಸಂಕಲನ), ಚೈತ್ಯ ಚೈತ್ರ(ಕವನ ಸಂಕಲನ-ಸಂಪಾದಿತ), ರಾಜಯೋಗಿ (ವಚನ ಸಂಕಲನ), ಶಾಂತಿಭೂಮಿ, ತಪಸಹನ, ಸೂರ್ಯಾಸ್ತಮ, ವಸುಂಧರ, ಮಣ್ಣಿನ ಋಣ, ಹೃದಯವಂತ, ಆಕ್ರಂದನ, ಚೈತ್ರಯಾತ್ರೆ, ಗ್ರಾಮಾಂತರ, ಕರ್ಮಭೂಮಿ (ಕಾದಂಬರಿಗಳು), ನೇಸರ (ಕವನ ಸಂಕಲನ), ಕಾವ್ಯ ಕುಸುಮಾಂಜಲಿ-(ಕವನ ಸಂಕಲನ - ಸಂಪಾದಿತ), ಸಂಘರ್ಷಣೆ (ಕಥಾ ಸಂಕಲನ), ಜೀವನದಿ, (ಲೇಖನಗಳು), ಮಹಾಸಾಗರದ ಮುತ್ತುಗಳು (ವ್ಯಕ್ತಿ ಚಿತ್ರಗಳು -ಸಂಪುಟ 1), ಭಾರತದ ಅನರ್ಘ್ಯ ರತ್ನಗಳು- (ವ್ಯಕ್ತಿ ಚಿತ್ರಗಳು - ಸಂಪುಟ 2), ಮಾತೃಭೂಮಿಯ ಮಾಣಿಕ್ಯಗಳು (ವ್ಯಕ್ತಿ ಚಿತ್ರಗಳು - ಸಂಪುಟ 3), ಕನ್ನಡ ಸಾಹಿತ್ಯದ ಸೀಮಾಪುರುಷ (ಮಾಸ್ತಿ ...
READ MORE