ಲೇಖಕ ಅನುಷ್ ಎ. ಶೆಟ್ಟಿ ಅವರು ಬರೆದ ಕಾದಂಬರಿ-ಹುಲಿ ಪತ್ರಿಕೆ-2. ‘ಈ ಕೊನೆಯಿರದ ಜಾಲವಾಗಿರುವ ವನ.. ರಕ್ತದ ನದಿ.. ಬೀಭತ್ಸ,, ರೋದನೆ.. ಕಪ್ಪು ಮುಖದ ನಾಯಿಗಳು.. ಬಿರುಗಾಳಿ.. ಆಕ್ರಂದನ.. ಹಿಂಸೆ.. ಎಲ್ಲವು ಒಮ್ಮೆ ಒಂದಕ್ಕೊಂದು ಘರ್ಷಿಸಿ, ಆಕಾಶವನ್ನೆಲ್ಲ ವ್ಯಾಪಿಸಿ ಮಿಂಚೊಂದು ಬೆಳಗಿ, ಗುಡುಗೊಂದು ಗುಡುಗಿ, ಸಂಜೀವಿನಿಯ ಹನಿಯೊಂದು ಹುಟ್ಟಿ, ಅಲ್ಲ ಬಿಂದುವಾಗಿ ಮಳೆಯ ಹನಿಗಳೊಂದಿಗೆ ಸೇರಿ ಎಲ್ಲವು ನಿಶಬ್ದವಾಯಿತು. ಶಾಂತವಾಯಿತು, ತಣ್ಣಗಾಯಿತು.’ ಹೀಗೆ ಆಕರ್ಷಕ ಬರಹ ಶೈಲಿ ಗಮನ ಸೆಳೆಯುತ್ತದೆ. ಕಾದಂಬರಿಯ ವಸ್ತು, ವಿಷಯ ನಿರೂಪಣೆ ದೃಷ್ಟಿಯಿಂದ ಓದುಗರ ಗಮನ ಸೆಳೆಯುತ್ತದೆ.
ಅನುಷ್ ಎ ಶೆಟ್ಟಿ ಜನಿಸಿದ್ದು ಮಂಗಳೂರಿನಲ್ಲಿ. ವಿದ್ಯಾಭ್ಯಾಸ ಹುಣಸೂರು, ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ವಿದ್ಯುನ್ಮಾನ ಮಾಧ್ಯಮದಲ್ಲಿ ಎಂ.ಎಸ್ಸಿ ಪದವಿ ಪಡೆದಿರುವ ಇವರು ಕನ್ನಡಪ್ರಭ, ಸಾಧ್ವಿ ದಿನಪತ್ರಿಕೆಗಳಲ್ಲಿ, ಜೀ ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. 15 ವರ್ಷಗಳ ಕಾಲ ಮೃದಂಗ ವಾದನ ಕಲಿತ ಇವರು, ಅನೇಕ ಲಯವಾದ್ಯಗಳನ್ನು ನುಡಿಸಬಲ್ಲವರಾಗಿದ್ದು, ತಮ್ಮ ಗೆಳೆಯರೊಂದಿಗೆ ಕೂಡಿ ಆರಂಭಿಸಿರುವ ‘ನಾವು’ ಬ್ಯಾಂಡ್ ಮೂಲಕ ಸಂಗೀತದಲ್ಲಿ ಹೊಸ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಕಳೆದ 8 ವರ್ಷಗಳಿಂದ ರಂಗ ಸಂಗೀತವನ್ನೂ ಮಾಡುತ್ತ ದೇಶಾದ್ಯಂತ ಓಡಾಡುತ್ತಿದ್ದಾರೆ. ಪ್ರಸ್ತುತ, ಗೆಳೆಯ ಶ್ರೀವತ್ಸ ಅವರೊಂದಿಗೆ ‘ಇವೆಂಟೊ’ ಎಂಬ ಇವೆಂಟ್ ಕಂಪೆನಿ ಮತ್ತು ಅನುಗ್ರಹ ...
READ MORE