"ಹುಡುಕಾಟ” ನಾಲ್ಕು ದಶಕಗಳಿಂದ ಜಾನಪದ ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಪ್ರೊ. ಬಿಳಿಮಲೆ ಅವರ ಆಯ್ದ ಸಂಶೋಧನ ಲೇಖನಗಳ ಸಂಕಲನವಿದು. ಈ ಕೃತಿಯಲ್ಲಿ ತಾಳೆಗರಿ, ಶಾಸನ, ಜನಪದ ಕಥನ, ನೃತ್ಯ, ಆಚರಣೆ, ಸಾಹಿತ್ಯ ಕೃತಿ ಮೊದಲಾಗಿ ಬಹುಸ್ತರೀಯ ಆಕರಗಳನ್ನು ದುಡಿಸಿಕೊಳ್ಳಲಾಗಿದೆ. ಇವನ್ನು ರಾಜಕೀಯ ಸಾಮಾಜಿಕ ಭಾಷಿಕ ಸಾಹಿತ್ಯಕ ನೆಲೆಗಳಿಂದ, ಬಹುಶಿಸ್ತೀಯ ವಿಧಾನದಲ್ಲಿ ಚರ್ಚಿಸಲಾಗಿದೆ. ಇಲ್ಲಿ ಹೊಸ ನೋಟಗಳು, ಹೊಸ ತಾತ್ವಿಕ ಚೌಕಟ್ಟುಗಳು ಮೈತಳೆದಿವೆ. ಈ ಕೃತಿ ಹೊಸತಲೆಮಾರಿನ ಸಂಶೋಧಕರಿಗೆ ಪ್ರೇರಣೆ ಕೊಡಬಲ್ಲ ಮಾದರಿಗಳನ್ನು ಒಳಗೊಂಡಿದೆ. ಜತೆಗೆ ಭಿನ್ನಮತೀಯ ಪ್ರಶ್ನೆಗಳನ್ನು ಹುಟ್ಟಿಸುತ್ತ, ಇರುವ ಮಾದರಿಗಳನ್ನು ಮುರಿದು ಹೊಸ ಮಾದರಿಗಳನ್ನು ಕಟ್ಟುವ ಪ್ರಚೋದನೆಯನ್ನೂ ನೀಡಬಲ್ಲದಾಗಿದೆ. ಈ ಕಾರಣದಿಂದ ಸಂಶೋಧನ ವಿಧಾನದ ಕಲಿಕೆಯಲ್ಲಿ ಉಪಯುಕ್ತವಾಗುವ ಪಠ್ಯವೂ ಆಗಿದೆ.
ಡಾ.ಪುರುಷೋತ್ತಮ ಬಿಳಿಮಲೆ ಅವರು ಜನಿಸಿದ್ದು 1955 ಆಗಸ್ಟ್ 21ರಂದು. ನವದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಪುರುಷೋತ್ತಮ ಬಿಳಿಮಲೆಯವರು ಬಂಡಾಯ-ದಲಿತ ಸಾಹಿತ್ಯ ಚಳುವಳಿಯಲ್ಲಿ ನೇರವಾಗಿ ಭಾಗವಹಿಸಿದವರು, ಜನಪರ ಹೋರಾಟಗಳನ್ನು ಸಂಘಟಿಸಿದವರು. ಬಡವರ, ಹಿಂದುಳಿದವರ , ಅಲ್ಪಸಂಖ್ಯಾತರ ಮತ್ತು ದಲಿತರ ಪರವಾಗಿ ನಿರಂತರವಾಗಿ ಬರೆಯುತ್ತಲೇ ಬಂದಿರುವ ಅವರು ಸಾಹಿತ್ಯವನ್ನು ತಮ್ಮ ಹೋರಾಟಗಳಿಗೆ ಪೂರಕವಾಗಿ ಬಳಸಿಕೊಂಡಿದ್ದಾರೆ. ಜನಪದ ಸಾಹಿತ್ಯವನ್ನು ಗಂಭೀರವಾಗಿ ಅಭ್ಯಸಿಸಿರುವ ಅವರು ಆ ಮೂಲಕ ಶಿಷ್ಟ ಸಾಹಿತ್ಯದ ಕೆಲವು ಜನವಿರೋಧಿ ನೆಲೆಗಳನ್ನು ಗಂಭೀರವಾಗಿ ಪ್ರಶ್ನಿಸಿದ್ದಾರೆ. 1955ರಲ್ಲಿ ಸುಳ್ಯ ತಾಲೂಕಿನ ಪಂಜದಲ್ಲಿ ಹುಟ್ಟಿದ ಇವರು ಪುತ್ತೂರು, ಮದರಾಸು, ಮಂಗಳೂರುಗಳಲ್ಲಿ ...
READ MORE