ಹಿ. ಚಿ.ಬೋರಲಿಂಗಯ್ಯ ಅವರು ಪ್ರತಿಷ್ಠಿತ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ ಕುಲಪತಿ. ಇವರು ಜಾನಪದ ಮತ್ತು ಬುಡಕಟ್ಟು ವಿದ್ವಾಂಸರು. ಇವರು 25 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಸಮಯ ಇದ್ದಾಗಲೆಲ್ಲ ಗಿರಿಜನ ಹಾಡಿಗಳನ್ನು ಸುತ್ತುತ್ತಿದ್ದವರು. ಹೀಗೆ ಬಿಡವಿನ ವೇಳೆಯಲ್ಲಿ ಸುತ್ತಿದ ಕಾಡು ಮತ್ತು ಗಿರಿಜನ ಹಾಡಿಗಳಲ್ಲಿನ ತಮ್ಮ ಅಲೆದಾಟದ ಅನುಭವಗಳ ಕುರಿತು ಈ ಕಾದಂಬರಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ ಪ್ರೊ. ಹಿ.ಚಿ. ಬೋರಲಿಂಗಯ್ಯ ಅವರು ಜಾನಪದ ವಿದ್ವಾಂಸರು. ತುಮಕೂರು ಜಿಲ್ಲೆಯ ತಲಪುರ ಮೂಲದವರಾದ ಬೋರಲಿಂಗಯ್ಯ ಅವರ ತಂದೆ ಚಿಕ್ಕೇಗೌಡ ಮತ್ತು ತಾಯಿ ಕಾಳಮ್ಮ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾಗಿ, ನಾಟಕ ಅಕಾಡೆಮಿ ರಿಜಿಸ್ಟಾರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಾಂಸ್ಕೃತಿಕ ಪ್ರತಿನಿಧಿಯಾಗಿ ಫ್ರಾನ್ಸ್, ಇಟಲಿ, ಹಾಲೆಂಡ್, ಸೌದಿ, ದುಬಾಯ್, ಇರಾನ್ ದೇಶಗಳಿಗೆ ಭೇಟಿ ನೀಡಿದ್ದಾರೆ. ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಗುಂಡ್ಮಿ ಜಾನಪದ ಪ್ರಶಸ್ತಿ ದೊರೆತಿವೆ. 'ಕಾಡು ಮತ್ತು ಕಾಂಕ್ರೀಟ್', 'ಜಾನಪದ ಗಂಗೋತ್ರಿ', 'ಗಿರಿಜನ ನಾಡಿಗೆ ಪಯಣ', ಉಜ್ಜನಿ ಚೌಡಮ್ಮ, ದಾಸಪ್ಪ ಜೋಗಪ್ಪ, ಎಸ್ಕೃತಿ ಮತ್ತು ...
READ MORE