ಸಾಹಿತಿ ನಾ. ಡಿಸೋಜ ಅವರು ಬರೆದ ಕಾದಂಬರಿ-ಸುಣ್ಣ ಬಳಿದ ಸಮಾಧಿಗಳು. ಕ್ರೈಸ್ತ ಸಮುದಾಯವು ಇತ್ತೀಚೆಗೆ ಕ್ರಿಸ್ತನ ಬೋಧೆಗಳಿಂದ ದೂರವಾಗುತ್ತಿರುವ ವಿಷಾದದ ಛಾಯೆ ಚಾಚಿರುವ ಕಾದಂಬರಿ ಇದು. ಸುಮಾರು 2 ಸಾವಿರ ವರ್ಷಗಳಿಂದ ಕ್ರಿಸ್ತನ ಬೋಧೆಗಳ ಪ್ರಚಾರ ನಿರಂತರವಾಗಿದ್ದರೂ ಕ್ರಿಸ್ತರಲ್ಲಿ ಬಹುತೇಕರು ಮದ್ಯಪಾನ ಮಾಡುತ್ತಾರೆ, ಆಸ್ತಿ-ಹೆಣ್ಣು-ಹೊನ್ನಿಗಾಗಿ ಕೊಲೆ ಮಾಡುತ್ತಾರೆ, ಪರಸ್ಪರ ತತ್ವದಡಿ ಬಾಳುತ್ತಿಲ್ಲ. ತಮ್ಮದೇ ಧರ್ಮ ಶ್ರೇಷ್ಟವೆಂದು ಇತರೆ ಧರ್ಮಿಯರನ್ನು ಬದುಕಲು ಬಿಡುತ್ತಿಲ್ಲ. ಹಾಗಾದರೆ, ಈವರೆಗಿನ ಬೋಧನೆಗಳಿಂದ ಆದ ಪ್ರಯೋಜನವೇನು? ಇತ್ಯಾದಿ ಚಿಂತನೆಗಳ ಮೊತ್ತವಾಗಿ ಈ ಕಾದಂಬರಿ ಓದುಗರನ್ನು ಪ್ರೇರೇಪಿಸುತ್ತದೆ.
ನಾ ಡಿಸೋಜ ಬರಹಗಾರರು, ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿ ನಿವೃತ್ತಿ ಹೊಂದಿದವರು. ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾರ್ಬರ್ಟ್ ಡಿಸೋಜ ಅವರು ಹುಟ್ಟಿದ್ದು ಜೂನ್ 6, 1937 ರಲ್ಲಿ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ. ಅವರು 2025 ಜ. 05 ಭಾನುವಾರದಂದು ನಿಧನರಾದರು. ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ. ಪ್ರಾರಂಭದ ದಿನಗಳಲ್ಲಿ 'ಪ್ರಪಂಚ' ಪತ್ರಿಕೆಗೆ ...
READ MORE