ʼಆನಂದವನʼ ಲೇಖಕಿ ಅಶ್ವಿನಿ (ಎಂ.ವಿ ಕನಕಮ್ಮ) ಅವರ ಸಾಮಾಜಿಕ ಕಾದಂಬರಿ. ಸುಧಾ ವಾರಪತ್ರಿಕೆಯಲ್ಲಿ1991ರಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದೆ. ಸೀಮಾ ಎಂಬ ಹೆಣ್ನಿನ ಸುತ್ತ ಹೆಣೆದಿರುವ ಈ ಕತೆಯಲ್ಲಿ , ಆಸ್ತಿಗಾಗಿ ಮನೆಯ ಸಂತೋಷವೇ ಹೇಗೆ ದೂರವಾಗುತ್ತದೆ ಮತ್ತು ಕೂಡು ಕುಟುಂಬವೊಂದು ಯಾವ ರೀತಿ ಇಬ್ಬಾಗವಾಗುತ್ತದೆ ಎಂಬುದನ್ನು ಚಿತ್ರಿಸಲಾಗಿದೆ. ಸಂಬಂಧಗಳ ಮಹತ್ವ ತಿಳಿಸುತ್ತಾ, ಹಣ ಅಂತಸ್ತುಗಳು ಮನುಷ್ಯನನ್ನು ಯಾವ ರೀತಿಯಾಗಿ ಬದಲಾಯಿಸುತ್ತವೆ ಎಂಬುದಕ್ಕೆ ಈ ಕಾದಂಬರಿಯು ಹೆಚ್ಚು ಒತ್ತು ನೀಡುತ್ತದೆ.
ಕಾದಂಬರಿಗಾರ್ತಿ ಅಶ್ವಿನಿ ಹುಟ್ಟಿದ್ದು ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮಂಗಲಂ ಎಂಬ ಗ್ರಾಮದಲ್ಲಿ. ತಂದೆ ವೆಂಕಟ ರಾಘವಾಚಾರ್ಯರು, ತಾಯಿ ಲಕ್ಷ್ಮಮ್ಮ. ರಾಮಾಯಣ, ಮಹಾಭಾರತ ಕಥೆಗಳನ್ನು ಮಿಡ್ಲೆ ಸ್ಕೂಲಿನಲ್ಲಿದ್ದಾಗಲೇ ಓದಿ ಮುಗಿಸಿದ್ದರು. ಇವರ ಓದಿನ ಆಸಕ್ತಿಯನ್ನು ಗಮನಿಸಿದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಮಯ್ಯನವರು ಹೆಚ್ಚಿನ ಪ್ರೋತ್ಸಾಹ ನೀಡಿದರು. ಅಕೌಂಟೆಂಟ್‌ರವರ ಕಚೇರಿಯಲ್ಲಿದ್ದಾಗಲೇ ಕಿರು ಪ್ರಹಸನಗಳನ್ನು ಆಕಾಶವಾಣಿಗಾಗಿ ಬರೆದು ಕೊಡತೊಡಗಿದ್ದರು. ಹೀಗೆ ಪ್ರಾರಂಭವಾದ ಇವರ ಸಾಹಿತ್ಯದ ಬರವಣಿಗೆ ಸಾಗುತ್ತಾ ಬಂದು ‘ನಿಲುಕದ ನಕ್ಷತ್ರ’ ಎಂಬ ಕಾದಂಬರಿ ರಚಿಸಿದರು. ನಂತರ ವೆಂಕಟೂವಿನ ಬುಗುರಿ, ತುಪ್ಪದ ದೀಪ,ನಾನೇಕೆ ಬೇಡವಾದೆ ಮುಂತಾದ ಇಪ್ಪತ್ತು ಕಥೆಗಳು ಸುಧಾ, ಮಯೂರ, ಪ್ರಜಾಮತ, ಕರ್ಮವೀರ ...
READ MORE