ರಘುನಾಥ ರಾಯ ಮತ್ತು ಅನುಸೂಯ ಬೇರೆ ಬೇರೆ ಬಾಳಸಂಗಾತಿಗಳನ್ನು ಹೊಂದಿದವರು. ಆದರೆ ವಿಧಿ ಅವರಿಬ್ಬರ ಬಾಳಲ್ಲಿ ಕ್ರೂರವಾಗಿ ಆಟವಾಡುತ್ತದೆ. ಮುಂದೆ ಪರಸ್ಪರ ಸಂಧಿಸುವ ರಘುನಾಥ ರಾಯ ಮತ್ತು ಅನಸೂಯ ಕಷ್ಟಗಳನ್ನು ಮೆಟ್ಟಿ ನಿಂತು ಜೀವನ ಸಂಗಾತಿಗಳಾಗುತ್ತಾರೆ. ಆರಿದ ಚಹಾದಂತಹ ಅವರ ಬದುಕಿನ ಚಿತ್ರಣ ಅದಕ್ಕೆ ಪೋಷಕ ರೂಪದಲ್ಲಿ ನಿಂತಿರುವ ಪಾತ್ರಗಳು ಬೀchi ಅವರ ಸ್ವೋಪಜ್ಞತೆಗೆ ಸಾಕ್ಷಿ ನುಡಿಯುತ್ತವೆ.
'ಬೀಚಿ' ಎಂಬುದು ರಾಯಸಂ ಭೀಮಸೇನರಾವ್ ಅವರ ಕಾವ್ಯನಾಮ. ಅವರು ಜನಿಸಿದ್ದು 1913ರ ಏಪ್ರಿಲ್ 23ರಂದು ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ತಂದೆ ರಾಯಸಂ ಶ್ರೀನಿವಾಸರಾವ್, ತಾಯಿ ಭಾರತಮ್ಮ. 'ಬೀಚಿ' ಯವರ ಹೆಸರಿನ ಹಾಗೆ ಅವರ ಸಹಿಯೂ ವಿಚಿತ್ರ- 'ಬಿ' ಕನ್ನಡವಾದರೆ 'ಚಿ' ಇಂಗ್ಲಿಷು. ಸತಿ ಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ಹೆಂಣು ಕಾಣದ ಗಂಡ, ಸತ್ತವನು ಎದ್ದುಬಂದಾಗ, ಮೇಡಮ್ಮನ ಗಂಡ, ಏರದ ಬಳೆ, ಬಂಗಾರದ ಕತ್ತೆ, ಮೂರು ಹೆಂಣು ಐದು ಜಡೆ, ಸುನಂದೂಗ ಏನಂತೆ, ಲೇವಡಿ ಟೈಪಿಸ್ಟ್, ಆರಿದ ಚಹಾ, ಬಿತ್ತಿದ್ದೇ ಬೇವು, ಕಾಮಂಣ (ಕಾದಂಬರಿಗಳು). ತಿಂಮನ ತಲೆ, ಆರು ಏಳು ಸ್ತ್ರೀ ಸೌಖ್ಯ, ಅಮ್ಮಾವ್ರ ಕಾಲ್ಗುಣ, ...
READ MORE