ಪರಿಪೂರ್ಣದೆಡೆಗೆ

Author : ಎಚ್‌. ತಿಪ್ಪೇರುದ್ರಸ್ವಾಮಿ

Pages 242

₹ 160.00




Year of Publication: 2016
Published by: ಡಿ.ವಿ.ಕೆ. ಮೂರ್ತಿ
Address: ಕೃಷ್ಣಮೂರ್ತಿಪುರಂ ಮೈಸೂರು 570 004

Synopsys

ಹನ್ನೆರಡನೆಯ ಶತಮಾನದ ವಚನಕಾರ ಅಲ್ಲಮಪ್ರಭುವಿನ ಜೀವನವನ್ನು ಕುರಿತ ಕಾದಂಬರಿ. ಅಲ್ಲಮನ ವಚನಗಳಲ್ಲಿ ವ್ಯಕ್ತವಾಗಿರುವ ಅನುಭಾವದ ಸಂಪತ್ತನ್ನು ಬಲ್ಲವರಿಗೆ ಪ್ರಭು ಒಂದು ವ್ಯಕ್ತಿಯಲ್ಲ; ಅದ್ವಿತೀಯ ಶಕ್ತಿ. ಮೇರು ಸದೃಶವಾಗಿ ಬೆಳೆದ ಮಹಾಚೇತನ. ಅಲ್ಲಮನನ್ನು ನೋಡಿದಾಗ ಆ ಚೇತನ ಆ ಮಟ್ಟಕ್ಕೇರಲು ಕೈಕೊಂಡ ತಪೋಯಾತ್ರೆಯ ಮಾರ್ಗ ಎಂಥದಿರಬೇಕು ಎಂಬ ಕುತೂಹಲ ಉಂಟಾಗುವುದು ಸಹಜ.

ಪ್ರಭುದೇವನನ್ನು ಕುರಿತು ನಮ್ಮಲ್ಲಿರುವ ಕಾವ್ಯಗಳಿಂದ ಇದಕ್ಕೆ ಉತ್ತರ ಸಿಕ್ಕುವುದಿಲ್ಲ. ಹರಿಹರನು ಪ್ರಭುವನ್ನು ಕುರಿತು ಬರೆದಿರುವ ರಗಳೆಯಾಗಲೀ, ಚಾಮರಸನ ಪ್ರಭುಲಿಂಗಲೀಲೆಯಾಗಲೀ, ಇದಕ್ಕೆ ಹೆಚ್ಚಾಗಿ ಸಹಾಯಕವಾಗುವಂತಿಲ್ಲ. ಈ ಕಾದಂಬರಿಯಲ್ಲಿ ಹಿಂದಿನ ಯಾವ ಒಂದು ಕಾವ್ಯವನ್ನಾಗಲೀ ಸಂಪೂರ್ಣವಾಗಿ ಆಧಾರವಾಗಿಟ್ಟುಕೊಂಡು ಹೊರಟಿಲ್ಲ. ಅವನ ವಚನಗಳನ್ನು ಓದಿದಾಗ ಅಲ್ಲಿನ ಅರ್ಥ ಸಂಪತ್ತಿಯಿಂದ ಯಾವ ಒಂದು ವ್ಯಕ್ತಿಯ ಚಿತ್ರ ಮನಸ್ಸಿನ ಮೇಲೆ ಮೂಡಬಹುದೋ ಆ ವ್ಯಕ್ತಿಯ ರೂಪುರೇಖೆಗಳನ್ನು ಚಿತ್ರಿಸುವ ಒಂದು ನಮ್ಮ ಪ್ರಯತ್ನ ಇದು.

ಈ ಕಾದಂಬರಿಯಲ್ಲಿ ಕಾಣುವ ಅವನ ಶಕ್ತಿಯೆಲ್ಲಾ ತನ್ನ ಸ್ವಸಾಮರ್ಥ್ಯದಿಂದ ಸಾಧಿಸಿ ಗಳಿಸಿಕೊಂಡ ಆಧ್ಯಾತ್ಮಿಕ ತೇಜಸ್ಸಿನಿಂದ ಲಭ್ಯವಾದುದು. 'ಅವತರಣ'ಕ್ಕಿಂತ ಹೆಚ್ಚಾಗಿ ಉತ್ತರಣ'ದಿಂದ ದೈವತ್ವಕ್ಕೇರಿದ ಸೀಮಾ ಪುರುಷ. 'ಪರಿಪೂರ್ಣದೆಡೆಗೆ' ಏರಿದವನು. ತಾನು ಮಾತ್ರ ಏರಿದುದಲ್ಲದೆ ಇಡೀ ಮಾನವ ಸಮಾಜವನ್ನೇ 'ಪರಿಪೂರ್ಣದೆಡೆಗೆ' ಕೊಂಡೊಯ್ಯಲು ಹವಣಿಸಿದ ಚಿರಂತನ ಸಾಹಸ ಶಕ್ತಿ ಆತ-ಎಂಬ ಭಾವನೆಯಿಂದ ಅವನನ್ನು ಇಲ್ಲಿ ಚಿತ್ರಿಸಲಾಗಿದೆ.

About the Author

ಎಚ್‌. ತಿಪ್ಪೇರುದ್ರಸ್ವಾಮಿ
(03 February 1928 - 28 October 1994)

ಶರಣರನ್ನು ಕುರಿತು ಕಾದಂಬರಿ ರಚಿಸುವ ಮೂಲಕ ಜನಪ್ರಿಯರಾಗಿರುವ ಎಚ್. ತಿಪ್ಪೇರುದ್ರಸ್ವಾಮಿ ಅವರು ಕರ್ನಾಟಕದ ಸಂಸ್ಕೃತಿಯ ಬಗ್ಗೆ ಆಳವಾದ ಅಧ್ಯಯನ ನಡೆಸಿದವರು. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯವರಾದ ತಿಪ್ಪೇರುದ್ರಸ್ವಾಮಿ ಜನಿಸಿದ್ದು 1928ರ ಫೆಬ್ರುವರಿ 3ರಂದು. ತಂದೆ ಚೆನ್ನಮಲ್ಲಯ್ಯ, ತಾಯಿ ಬಸಮ್ಮ. ಹೊನ್ನಾಳಿ, ಶಿರಾಳಕೊಪ್ಪ ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಆರಂಭಿಕ ಶಿಕ್ಷಣ ಪಡೆದ ತಿಪ್ಪೇರುದ್ರಸ್ವಾಮಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಂದಿಗೆ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ (ಎಂ.ಎ.) ಪಡೆದರು. ಶರಣರ ಅನುಭಾವ ಪ್ರಪಂಚ ಮಹಾಪ್ರಬಂಧಕ್ಕೆ ಡಾಕ್ಟೊರೇಟ್‌ ಪದವಿ (1962) ಪಡೆದರು. ಹಾಸನದ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ತಿಪ್ಪೇರುದ್ರಸ್ವಾಮಿ ...

READ MORE

Related Books