ಸನ್ನಿಧಾನ

Author : ಕೆ. ಸತ್ಯನಾರಾಯಣ

Pages 184

₹ 70.00




Year of Publication: 1997
Published by: ಮನೋಹರಾ ಗ್ರಂಥಮಾಲಾ
Address: ಸುಭಾಶ್ ರಸ್ತೆ, ಧಾರವಾಡ

Synopsys

‘ಸನ್ನಿಧಾನ’ ಕೃತಿಯು ಕೆ. ಸತ್ಯನಾರಾಯಣ ಅವರ ಕಾದಂಬರಿ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಉಳ್ಳವರ ಮತ್ತು ಇಲ್ಲದವರ, ಸುಖದ ಮತ್ತು ಸಂಕಷ್ಟದ, ವೈಭೋಗದ ಮತ್ತು ನಿರ್ಗತಿಕರ ಕತೆಗಳು ಯಾಕೆ ಒಂದಾಗದ ಎರಡು ಬೇರೆ ಬೇರೆ ಕತೆಗಳಾಗಿಯೇ ಉಳಿಯುತ್ತವೆ ಎಂಬ ಸಾಮಾಜಿಕ, ಆರ್ಥಿಕ ಕಂದರಗಳ ಕುರಿತು ಮಾತನಾಡುತ್ತ ಇಂಥ ವರ್ಗಗಳ ಮನುಷ್ಯ ಮತ್ತು ಮನಸ್ಸುಗಳ ಬಗ್ಗೆ, ನಮ್ಮನ್ನು ಕಾಡುವಂಥ ಕತೆ ಹೆಣೆಯುತ್ತಾರೆ ಲೇಖಕರು. ಅದಕ್ಕಿಂತ ಮುಖ್ಯವಾಗಿ, ಕತೆಗಾರನ ಸಂಬದ್ಧ ಮತ್ತು ಅಸಂಬದ್ಧ ಕಾಣ್ಕೆಗಳ ಕುರಿತು ಸಾಕ್ಷಿಪ್ರಜ್ಞೆಯೊಂದು ಉದ್ದಕ್ಕೂ ಜೀವಂತವಾಗಿರುವಂತೆ ನೋಡಿಕೊಳ್ಳುತ್ತಾರೆ. ಹಾಗೆಯೇ ಸಂಬದ್ದ ಕತೆಯೊಂದನ್ನು ಸಾಮಾಜಿಕವಾಗಿ, ತಾತ್ವಿಕವಾಗಿ ಅರ್ಥಪೂರ್ಣವಾದದನ್ನು ತನ್ನ ಕತೆಯಲ್ಲಿ ಬಿಂಬಿಸ ಹೊರಡುವ ಕತೆಗಾರ ಬದುಕಿನ ಕಟು ಸತ್ಯಗಳಿಂದಲೂ ಸಹಜ ಸೌಂದರ್ಯದಿಂದಲೂ ಕೊನೆಗೆ ಕನಿಷ್ಠ ಮಾನವೀಯತೆಯಿಂದಲೂ ದೂರ ದೂರವೇ ಉಳಿದುಬಿಡಬಹುದೆಂಬ ಸೂಕ್ಷ್ಮವನ್ನೂ ಅವರ ಈ ಕಾದಂಬರಿ ಸೂಚಿಸುತ್ತದೆ. ಕತೆ ಬರೆಯುವುದು ಒಂದರ್ಥದಲ್ಲಿ ತೀರಾ ಅಸಹಜ ವಿದ್ಯಮಾನ. ಮನುಷ್ಯನನ್ನು ಹೊರತು ಪಡಿಸಿದರೆ ಜಗತ್ತಿನ ಬೇರೆ ಯಾವುದೇ ಜೀವಿಗೆ ಹೀಗೆ ತನ್ನದೇ ಕಲ್ಪನೆಯ ಅಥವಾ ಕನಸಿನ ಜಗತ್ತೊಂದರ ವಿದ್ಯಮಾನಗಳನ್ನು ಒಂದು ಅರ್ಥಪೂರ್ಣ ಹಂದರದಲ್ಲಿಟ್ಟು ಭಾಷೆಯ ಮೂಲಕ ಅದನ್ನು ಸಹಜೀವಿಯೊಂದಿಗೆ ಹಂಚಿಕೊಳ್ಳುವ ಸಾಧ್ಯತೆ ಇದೆ ಅನಿಸುವುದಿಲ್ಲ (ನಿಜ ಯಾರಿಗೆ ಗೊತ್ತು!) ಆದರೆ ಮನುಷ್ಯ ಇದನ್ನು ಮಾಡುತ್ತ ಬಂದಿದ್ದಾನೆ. ಶ್ರೀರಾಮ ಇದ್ದನೋ ಇರಲಿಲ್ಲವೋ ಅಥವಾ ಶ್ರೀಕೃಷ್ಣ ಇದ್ದಾನೋ, ಇರಲಿಲ್ಲವೋ ಎಂಬ ಪ್ರಶ್ನೆ ಬಿಡಿ ಅವರು ರಾಮಾಯಣ ಅಥವಾ ಮಹಾಭಾರತದಲ್ಲಿ ಇದ್ದಂತ ಅಥವಾ ಸದ್ಯದ ನಮ್ಮ ಗ್ರಹಿಕಗಳಿಗೆ ಲಭ್ಯರಾದಂತೆಯೇ ಇದ್ದರು ಎಂದು ಇದಂಇತ್ಥಂ ಎನ್ನುವಂತೆ ಹೇಳುವುದು ಕಷ್ಟ ಅವರನ್ನು ಚಿತ್ರಿಸಿದ ಕೃತಿಕಾರನಿಗೆ ಅವರ ವ್ಯಕ್ತಿತ್ವದ ಎಷ್ಟನ್ನು ಮತ್ತು ಏನನ್ನು ನಮಗೆ ಲಭ್ಯವಾಗಿಸಬೇಕೆಂಬ ಬಗ್ಗೆ ನಿಶ್ಚಿತ ನಿಲುವು ಇದ್ದಿರಲೂಬಹುದು. ಈ ನಿಲುವು ಕೊಟ್ಟ ಮತ್ತು ನಮಗೆ ಗ್ರಹಿಸಲು ಸಾಧ್ಯವಾದ ಒಂದು ವ್ಯಕ್ತಿತ್ವವೇ ಇವತ್ತು ನಮಗೆ ನಮ್ಮ ನಮ್ಮ ಶ್ರೀರಾಮ ಇಲ್ಲವೇ ಶ್ರೀ ಕೃಷ್ಣ ಆದರೆ ಇದು ವಾಸ್ತವದಿಂದ ಖಚಿತವಾಗಿ ಎಷ್ಟು ದೂರ ಎಂದು ನಿಖರವಾಗಿ ಹೇಳಬಲ್ಲವರಾರು?’ ಎಂದಿದೆ

 

About the Author

ಕೆ. ಸತ್ಯನಾರಾಯಣ
(21 April 1954)

ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.  1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ.  ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...

READ MORE

Related Books