ಒಂದು ದಾರಿ ನೂರು ವಿಘ್ನ

Author : ಶ್ರೀದೇವಿ ಎಲ್ ರಾಠೋಡ

Pages 98

₹ 90.00




Year of Publication: 2021
Published by: ಬಸವ ಪ್ರಕಾಶನ
Address: ಮುಖ್ಯರಸ್ತೆ, ಸರಸ್ವತಿ ಗೋದಾಮು, ಸೂಪರ್ ಮಾರ್ಕೆಟ್, ಕಲಬುರಗಿ-585-101

Synopsys

ಡಾ. ಶ್ರೀದೇವಿ ಎಲ್. ರಾಠೋಡ ಅವರ ಕಾದಂಬರಿ-‘ಒಂದು ದಾರಿ ನೂರು ವಿಘ್ನ’. ನೈಜ ಕಥೆ ಎಂಬುದು ಕೃತಿಗೆ ನೀಡಿರುವ ಉಪಶೀರ್ಷಿಕೆ. ಸಾಧನೆ ಹಾದಿಯಲ್ಲಿ ಹೊರಡುವ ಹೆಣ್ಣು ಅನೇಕ ಕಷ್ಟ-ನಷ್ಟಗಳನ್ನು ಎದುರಿಸುತ್ತಾಳೆ. ಛಲಬಿಡದೇ ಸಾಗುವುದು ಅವಳ ಬದುಕಿನ ಗುರಿಯಾಗುತ್ತದೆ. ಇದೇ ಕಾದಂಬರಿಯ ಮೂಲ ವಸ್ತು. ಎದುರಾಗುವ ಟೀಕೆಗಳತ್ತ ಗಮನ ನೀಡದೇ ಗುರಿಯತ್ತ ಗಮನ ನೀಡಬೇಕು ತಂದೆ-ತಾಯಿ-ಬಂಧು-ಬಳಗವೂ ಸಾಧನೆಗೆ ಅಡ್ಡಿಯಾಗುತ್ತಾರೆ. ಆದರೂ ಗುರಿ ಸಾಧನೆಯೇ ಅಗತ್ಯ ಹಾಗೂ ಅನಿವಾರ್ಯ ಎಂಬ ಸಂದೇಶ ಈ ಕಾದಂಬರಿಯಲ್ಲಿದೆ.

About the Author

ಶ್ರೀದೇವಿ ಎಲ್ ರಾಠೋಡ
(28 February 1983)

ಡಾ. ಶ್ರೀದೇವಿ ಎಲ್ ರಾಠೋಡ  ಅವರು ಮೂಲತಃ ಕೊಪ್ಪಳ ಜಿಲ್ಲೆಯ ಕನಕಪುರ ತಾಂಡಾದವರು. ತಂದೆ ಎಲ್ ಸೋಮಪ್ಪ, ತಾಯಿ ಪ್ರೇಮಬಾಯಿ. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಎಂ. ಎ ಹಾಗೂ ಕುಂಚಿ ಕೊರವ ಮಹಿಳೆಯರ ಸಬಲೀಕರಣ ವಿಷಯವಾಗಿ ಮಹಾಪ್ರಬಂಧ ರಚಿಸಿ ಪಿಎಚ್.ಡಿ ಪಡೆದಿದ್ದಾರೆ.  ಯು. ಜಿ. ಸಿ ಧನಸಹಾಯ ಆಯೋಗದಿಂದ ಪೋಸ್ಟ್ ಡಾಕ್ಟರಲ್ ಪದವಿಯನ್ನು ಗುಲಬಗಾ೯ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಸದಾ ಮಹಿಳಾ ಪರ ಕಾಳಜಿ ಮತ್ತು ಚಿಂತನೆಯಲ್ಲಿ ತೊಡಗಿದ್ದಾರೆ. ಸದ್ಯ, ಕಲಬುರಗಿ ಜಿಲ್ಲೆಯ ನಂದೂರು ಬಿ. ಅಂಚೆ ವ್ಯಾಪ್ತಿಯ ಬಾಪುನಾಯಕ ತಾಂಡದಲ್ಲಿ ವಾಸವಿದ್ದಾರೆ.  ಲಂಬಾಣಿ ಸಮುದಾಯ ಅಹಾರ ಪದ್ಧತಿ, ಕಂಚಿ ಕೋರವರ  ಆಹಾರ  ಪದ್ಧತಿ, ಚಿಂದಿ  ಆಯುವ ಮಹಿಳೆ ಮತ್ತು ...

READ MORE

Related Books