‘ಹಸಿರು ಚಿಗುರು’ ಲೇಖಕಿ ಎ.ಪಿ. ಮಾಲತಿ ಅವರ ಸಾಮಾಜಿಕ ಕಾದಂಬರಿ. ಮಾಹಿತಿ ತಂತ್ರಜ್ಞಾನದ ಕಾಲವಿದು, ನಗರ ಜೀವನದ ಸೆಳೆತದಲ್ಲಿ ಜನಸಾಮಾನ್ಯರು ಧಾವಿಸುತ್ತಿದ್ದಾರೆ ನಗರಾಭಿಮುಖವಾಗಿ. ನಾಳಿನ ಹುಡುಕಾಟದಲ್ಲಿ ಕೃಷಿ ಮೋಹ ಕಡಿಮೆಯಾಗುತ್ತಿದೆ. ಹಳ್ಳಿಗಳು ಖಾಲಿಯಾಗುತ್ತ ಮನುಷ್ಯ ಸಂಬಂಧಗಳು ಸಂಕೀರ್ಣವಾಗಿ ಹಳೆ ಮತ್ತು ಹೊಸ ತಲೆಮಾರಿನ ಸಂಘರ್ಷಗಳು ಹೆಚ್ಚುತ್ತಿವೆ. ಹಳತರಲ್ಲಿ ಸೊಗಸಿಲ್ಲ, ಸೊಗಸಿಗಾಗಿ ಹೊಸತರ ಹುಡುಕಾಟ. ಹಳೆಯದೆಲ್ಲ ನಿರರ್ಥಕವೆಂದು ಹಳೇಬೇರಿನಲ್ಲಿ ಅರ್ಥ ಕಳೆದುಕೊಳ್ಳುತ್ತಿರುವ ಹೊಸ ತಲೆಮಾರು ಈ ಸಂಘರ್ಷದ ಕತೆಯನ್ನು ನವಿರಾಗಿ ಹೆಣೆದಿರುವ ಕಾದಂಬರಿ ಇದು. ಎ.ಪಿ. ಮಾಲತಿ ಅವರ ಈ ಸಾಮಾಜಿಕ ಕಾದಂಬರಿ ಸಮಾಜದ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲುತ್ತದೆ.
ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಸ್ಥಾನ ಹೊಂದಿರುವ ಪ್ರಸಿದ್ಧ ಕತೆ, ಕಾದಂಬರಿಕಾರ್ತಿ ಎ. ಪಿ. ಮಾಲತಿಯವರು ಹುಟ್ಟಿದ್ದು ಭಟ್ಕಳದಲ್ಲಿ 1944 ರ ಮೇ 6 ರಂದು. ಅವರ ಎರಡು ಪತ್ತೆದಾರಿ ಕಾದಂಬರಿಗಳು ಹೊರಬಂದಾದ ಕೇವಲ ಹದಿನೈದರ ವಯಸ್ಸು. ಹಿಂದಿ ಭಾಷೆ ಕಲಿತು ಓದಿದ್ದು ಪ್ರೇಮಚಂದರ ಕಥೆ, ಠಾಕೂರರ ಬಂಗಾಲಿ ಅನುವಾದಗಳು. ಅಧ್ಯಾಪಕರು, ಸಾಹಿತ್ಯಾಸಕ್ತರು, ವಿದ್ಯಾವಂತರಾದ ಪತಿ, ಎ.ಪಿ. ಗೋವಿಂದಭಟ್ಟರಿಂದ ದೊರೆತ ಪ್ರೋತ್ಸಾಹ. ಕೃಷಿ ಜೀವನದ ಜೊತೆಗೆ ಹಳ್ಳಿಯ ಹೆಂಗಸರು ಭತ್ತ ಕುಟ್ಟಲು ಪಡುತ್ತಿದ್ದ ಭವಣೆ ನೋಡಿ ಪ್ರಾರಂಭಿಸಿದ ರೈಸ್‌ಮಿಲ್, ಜೊತೆಗೆ ಹಾಲಿನ ವ್ಯಾಪಾರ. ಜನರೊಡನೆ ಬೆರೆಯುತ್ತಾ ಹೋದಂತೆಲ್ಲ ...
READ MORE