`ಕುಲದ ನೆಲೆ’ ಕೃತಿಯು ಕೆ. ಸುಶೀಲಾ ಅವರ ಕಾದಂಬರಿಯಾಗಿದೆ. ಈ ಕಾದಂಬರಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ನಮ್ಮ ಪೂರ್ವಿಕರು ಇತ್ತೀಚಿನ ನೂರೈವತ್ತು ವರ್ಷಗಳ ಹಿಂದೆ ಬಾಳಿದ ಒಂದು ಕೌಟುಂಬಿಕ ಪರಿಸರವನ್ನು ನೆನಪಿಸುವ ಕಾದಂಬರಿ ರೂಪದ ಕಥಾನಕ, ಹಿಂದಿನ ಕಾಲದವರ ಸಂಪ್ರದಾಯನಿಷ್ಠೆ ಮತ್ತು ಇಂದಿನ ಆಧುನಿಕ ಜನಜೀವನ ಎರಡರಲ್ಲೂ ಅತಿರೇಕಗಳಿವೆ. ಇದನ್ನು ಹಳೆ ಬೇರು ಮತ್ತು ಹೊಸ ಚಿಗುರು ಎಂದು ಪರಿಗಣಿಸಿ ಎರಡರಲ್ಲೂ ಸಮನ್ವಯ ಸಾಧಿಸಬೇಕಾಗಿದೆ. ಹಳೆಯದರಲ್ಲೂ ಉತ್ತಮ ಮೌಲ್ಯಗಳಿವೆ. ಹಾಗೆಂದು ಅಪ್ಪ ನೆಟ್ಟ ಆಲದ ಮರಕ್ಕೆ ಜೋತು ಬೀಳಬೇಕಾಗಿಲ್ಲ. ಕಾಲಕ್ಕೆ ತಕ್ಕಂತೆ ಬದಲಾಗಿ ಸಾಂದರ್ಭಿಕ ಅಗತ್ಯಗಳಿಗೆ ಮನ್ನಣೆ ನೀಡಬೇಕಾಗಿದೆ. ಕಾಲದ ಓಟ ನಿಧಾನವಾದರೂ ಪರಿವರ್ತನಶೀಲ ನಾಳೆಗಳನ್ನು ಅದು ಸೃಷ್ಟಿಸುತ್ತದೆ. ಪೀಳಿಗೆಯಿಂದ ಪೀಳಿಗೆಗೆ ಹೊಸ ಹೊಸ ಯೋಚನೆಗಳನ್ನು ಆವಾಹಿಸಿಕೊಡುತ್ತಲೇ ಮುಂದೆ ಸಾಗುತ್ತದೆ. ಯಾವುದೇ ಸಂಸ್ಕೃತಿಯ ಏಳುಬೀಳುಗಳು ನಿರಂತರವಾಗಿ ಕಾಲಚಕ್ರದೊಂದಿಗೆ ಉರುಳುತ್ತಲೇ ಯಾವುದೂ ಸ್ಥಿರವಲ್ಲವೆಂದು ಸಾರುತ್ತವೆ. ಆಯಾಕಾಲದ ನಂಬುಗೆಗಳು ಅಂದಂದಿನ ಜನರಿಗೆ ! ಇದು ಈ ಕಾದಂಬರಿಯ ಸಾರ.
ಕೆ. ಸುಶೀಲಾ ಅವರು ಆರೋಗ್ಯ, ವೈದ್ಯಕೀಯ ಹಾಗೂ ಮನೋವೈದ್ಯಕೀಯ ವಿಚಾರದ ಕುರಿತು ಹಲವಾರು ಕೃತಿಗಳನ್ನು ಬರೆದಿದ್ದಾರೆ. ಕೃತಿಗಳು: ಆಧುನಿಕ ಖಾಯಿಲೆಗಳ ವಿಸ್ಮಯಲೋಕ, ಕುಲದ ನೆಲೆ ...
READ MORE(ಹೊಸತು, ಜೂನ್ 2015, ಪುಸ್ತಕದ ಪರಿಚಯ)
ನಮ್ಮ ಪೂರ್ವಿಕರು ಇತ್ತೀಚಿನ ನೂರೈವತ್ತು ವರ್ಷಗಳ ಹಿಂದೆ ಬಾಳಿದ ಒಂದು ಕೌಟುಂಬಿಕ ಪರಿಸರವನ್ನು ನೆನಪಿಸುವ ಕಾದಂಬರಿ ರೂಪದ ಕಥಾನಕ, ಹಿಂದಿನ ಕಾಲದವರ ಸಂಪ್ರದಾಯನಿಷ್ಠೆ ಮತ್ತು ಇಂದಿನ ಆಧುನಿಕ ಜನಜೀವನ ಎರಡರಲ್ಲೂ ಅತಿರೇಕಗಳಿವೆ. ಇದನ್ನು ಹಳೆ ಬೇರು ಮತ್ತು ಹೊಸ ಚಿಗುರು ಎಂದು ಪರಿಗಣಿಸಿ ಎರಡರಲ್ಲೂ ಸಮನ್ವಯ ಸಾಧಿಸಬೇಕಾಗಿದೆ. ಹಳೆಯದರಲ್ಲೂ ಉತ್ತಮ ಮೌಲ್ಯಗಳಿವೆ. ಹಾಗೆಂದು ಅಪ್ಪ ನೆಟ್ಟ ಆಲದ ಮರಕ್ಕೆ ಜೋತು ಬೀಳಬೇಕಾಗಿಲ್ಲ. ಕಾಲಕ್ಕೆ ತಕ್ಕಂತೆ ಬದಲಾಗಿ ಸಾಂದರ್ಭಿಕ ಅಗತ್ಯಗಳಿಗೆ ಮನ್ನಣೆ ನೀಡಬೇಕಾಗಿದೆ. ಕಾಲದ ಓಟ ನಿಧಾನವಾದರೂ ಪರಿವರ್ತನಶೀಲ ನಾಳೆಗಳನ್ನು ಅದು ಸೃಷ್ಟಿಸುತ್ತದೆ. ಪೀಳಿಗೆಯಿಂದ ಪೀಳಿಗೆಗೆ ಹೊಸ ಹೊಸ ಯೋಚನೆಗಳನ್ನು ಆವಾಹಿಸಿಕೊಡುತ್ತಲೇ ಮುಂದೆ ಸಾಗುತ್ತದೆ. ಯಾವುದೇ ಸಂಸ್ಕೃತಿಯ ಏಳುಬೀಳುಗಳು ನಿರಂತರವಾಗಿ ಕಾಲಚಕ್ರದೊಂದಿಗೆ ಉರುಳುತ್ತಲೇ ಯಾವುದೂ ಸ್ಥಿರವಲ್ಲವೆಂದು ಸಾರುತ್ತವೆ. ಆಯಾಕಾಲದ ನಂಬುಗೆಗಳು ಅಂದಂದಿನ ಜನರಿಗೆ ! ಇದು ಈ ಕಾದಂಬರಿಯ ಸಾರ. ಮನುಷ್ಯ ತುಳಿಯುವ ದಾರಿಗನುಗುಣವಾಗಿ ಒಳಿತು ಮತ್ತು ಕೆಡುಕು ಇರುತ್ತವೆ. ಕಾಲ ಸರಿದಂತೆ ಹೀಗೂ ಇತ್ತೇ ! ಎಂಬ ಉದ್ಗಾರ ನಮ್ಮಿಂದ ಬಂದರೆ ಆಶ್ಚರ್ಯವೇನಿಲ್ಲ. ಈ ಕೃತಿಯಲ್ಲಿ ಸುಮಾರು ಆರು ತಲೆಮಾರುಗಳ ಜೀವನದ ನಿರೂಪಣೆಯಿದೆ. ಹೆಂಗಸರಂತೂ ಆ ಕಾಲದಲ್ಲಿ ಯಾವ ಬೆಲೆಯೂ ಇಲ್ಲದ, ಪಶು ಸಮಾನವಾದ ಜೀವನ ನಡೆಸಿದವರು.